ಅಂಬೇಡ್ಕರ್ ಸಂವಿಧಾನ ಕೊಟ್ಟಿದ್ರಿಂದ ನಾನಿಲ್ಲಿ ನಿಂತಿದ್ದೇನೆ; ಜೈಭೀಮ್ ಎನ್ನುತ್ತಲೇ ಹೆಚ್‌ಡಿಕೆ ವಿರುದ್ಧ ಜಮೀರ್ ವಾಗ್ದಾಳಿ!
ಅಂಬೇಡ್ಕರ್ ಸಂವಿಧಾನ ಕೊಟ್ಟಿರೋದ್ರಿಂದ ನಾನು ಇಲ್ಲಿ ನಿಂತಿದ್ದೇನೆ. ಬಿಜೆಪಿಯವರು ನಾನು ಬಂದಿರೋದೇ ಸಂವಿಧಾನ ತೆಗೆದುಹಾಕೋಕೆ ಅಂತಾ ಹೇಳ್ತಾರೆ. ಅಂತವರಿಗೆ ಕೇಳಿಸುವ ಹಾಗೆ ಜೈ ಭೀಮ್ ಹೇಳಿ ಎಂದು ಸಚಿವ ಜಮೀರ್ ಅಹ್ಮದ್ ಘೋಷಣೆ ಕೂಗಿದರು.
ರಾಮನಗರ (ಸೆ.21): ಅಂಬೇಡ್ಕರ್ ಸಂವಿಧಾನ ಕೊಟ್ಟಿರೋದ್ರಿಂದ ನಾನು ಇಲ್ಲಿ ನಿಂತಿದ್ದೇನೆ. ಬಿಜೆಪಿಯವರು ನಾನು ಬಂದಿರೋದೇ ಸಂವಿಧಾನ ತೆಗೆದುಹಾಕೋಕೆ ಅಂತಾ ಹೇಳ್ತಾರೆ. ಅಂತವರಿಗೆ ಕೇಳಿಸುವ ಹಾಗೆ ಜೈ ಭೀಮ್ ಹೇಳಿ ಎಂದು ಸಚಿವ ಜಮೀರ್ ಅಹ್ಮದ್ ಘೋಷಣೆ ಕೂಗಿದರು.
ಇಂದು ಚನ್ನಪಟ್ಟಣ ಕಾರ್ಯಕ್ರಮದಲ್ಲಿ 'ಜೈಭೀಮ್' ಘೋಷಣೆ ಕೂಗುವ ಮೂಲಕ ಭಾಷಣ ಆರಂಭಿಸಿದ ಸಚಿವರು, ಬಹಳ ವರ್ಷದಿಂದ ಬಡವರಿಗೆ ನಿವೇಶನ ಕೊಡಬೇಕು ಎನ್ನುವ ಕನಸು ಇತ್ತು. ಈಗ ಆ ಕನಸು ನನಸಾಗುತ್ತಿದೆ. ಒಟ್ಟು 2505 ನಿವೇಶನ ಅರ್ಜಿ ಬಂದಿತ್ತು. 7ಎಕರೆಯಲ್ಲಿ ಸೈಟ್ ನಿರ್ಮಾಣ ಮಾಡಿ ನಿವೇಶನ ಹಂಚಿಕೆ ಮಾಡಲಾಗ್ತಿದೆ. ಸುಮಾರು 900 ಸೈಟ್ ಗಳನ್ನ ಇಂದು ಹಂಚಿಕೆ ಮಾಡ್ತಿದ್ದೇವೆ. ಮಾಜಿ ಸಂಸದ ಡಿ.ಕೆ.ಸುರೇಶ್ ಮಾಡಿರೊ ಕೆಲಸ ಗಿನ್ನೀಸ್ ರೆಕಾರ್ಡ್ ನಲ್ಲಿ ದಾಖಲಾಗಬೇಕು. ಒಬ್ಬ ಗ್ರಾ.ಪಂ ಸದಸ್ಯನ ರೀತಿ ಅವರು ಕೆಲಸ ಮಾಡಿದ್ದಾರೆ. ಈ ಭಾಗಕ್ಕೆ ಶಾದಿ ಮಹಲ್ ಬೇಕು ಅನ್ನುವ ಮನವಿ ಕೊಟ್ಟಿದ್ದರು. ಹಾಗಾಗಿ ಅದಕ್ಕೆ ಸ್ಯಾಂಕ್ಷನ್ ಮಾಡಿದ್ದೇನೆ ಎಂದರು.
ತಿಂಗಳೊಳಗೆ ಎಲ್ಲ ವಕ್ಫ್ ಆಸ್ತಿ ಖಾತಾ ಅಪ್‌ಡೇಟ್ ಕಾರ್ಯ ಮುಗಿಸಿ: ಜಮೀರ್ ಸೂಚನೆ
ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ:
ಕುಮಾರಸ್ವಾಮಿ ಈ ಹಿಂದೆ ಇಲ್ಲಿ ಶಾಸಕರಾಗಿದ್ದರು. 37 ಸೀಟ್ ಗೆದ್ದಿದ್ದರು, ನಾವು ಸಹಕಾರ ಕೊಟ್ಟು ಸಿಎಂ ಮಾಡಿದ್ವಿ. ಒಂದುವರೆ ವರ್ಷ ಕುಮಾರಸ್ವಾಮಿ ಸಿಎಂ ಆಗಿದ್ರು. ಅವರು ಸಿಎಂ ಆಗಿದ್ದಾಗ ಎಷ್ಟು ಮನೆ ಕೊಟ್ಟಿದ್ದಾರೆ ಹೇಳಬೇಕು. ಹಿಂದೆ 2013ರಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ರಾಮನಗರ ಜಿಲ್ಲೆಗೆ 31ಸಾವಿರ ಮನೆಗಳನ್ನ ಕೊಟ್ಟಿದ್ದರು. ಆದರೆ ಕುಮಾರಸ್ವಾಮಿ ಸಿಎಂ ಆಗಿದ್ದಾಗ ಇಡೀ ಜಿಲ್ಲೆಗೆ ಕೇವಲ 600 ಮನೆ ನೀಡಿದ್ದಾರೆ. ಯಾಕೆ ಕುಮಾರಸ್ವಾಮಿಗೆ ಬಡವರು ಕಾಣಲಿಲ್ವಾ.? ಈಗ ಡಿಸಿಎಂ ಡಿಕೆ ಶಿವಕುಮಾರ ಅವರ ಶ್ರಮದಲ್ಲಿ ಚನ್ನಪಟ್ಟಣಕ್ಕೆ 5ಸಾವಿರ ಮನೆ ಕೊಡ್ತಿದ್ದೇವೆ. ಕುಮಾರಸ್ವಾಮಿ ರಾಮನಗರ, ಚನ್ನಪಟ್ಟಣಕ್ಕೆ ಏನು ಮಾಡಿದ್ದಾರೆ.? ಎಂದು ಪ್ರಶ್ನಿಸಿದರು.
ಕ್ಷೇತ್ರಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆಂಬುದನ್ನ ಅವರು ಕ್ಷೇತ್ರಕ್ಕೆ ಬಂದು ಹೇಳಲಿ ಚನ್ನಪಟ್ಟಣಕ್ಕೆ ಸ್ಟೇಡಿಯಂ ಬೇಕು ಅಂತ ಮನವಿ ಇದ್ರೂ ಕುಮಾರಸ್ವಾಮಿ ಮಾಡಿರಲಿಲ್ಲ. ಈಗ ಅದನ್ನ ಡಿಕೆ ಶಿವಕುಮಾರ ಅವರು 9ಕೋಟಿ ವೆಚ್ಚದಲ್ಲಿ ಸ್ಟೇಡಿಯಂ ಅಭಿವೃದ್ಧಿ ಮಾಡ್ತಿದ್ದಾರೆ. 4ಕೋಟಿ ವೆಚ್ಚದಲ್ಲಿ ಶಾಲಾ ಕಟ್ಟಡ ಅಭಿವೃದ್ಧಿಗೆ ಚಾಲನೆ ಕೊಟ್ಟಿದ್ದಾರೆ. ಮಾಜಿ ಸಂಸದ ಡಿ.ಕೆ.ಸುರೇಶ್ ಸೋತರು ಕ್ಷೇತ್ರದ ಬಗ್ಗೆ ಕಾಳಜಿ ಇಟ್ಟುಕೊಂಡಿದ್ದಾರೆ. ಆದರೆ ಕುಮಾರಸ್ವಾಮಿ ಅಧಿಕಾರ ಇದ್ದಾಗಲೂ ಏನೂ ಮಾಡಿಲ್ಲ. ಬೇಕಿದ್ರೆ ಬಹಿರಂಗ ಚರ್ಚೆಗೆ ಕುಮಾರಸ್ವಾಮಿ ಬರಲಿ ಎಂದು ಸವಾಲು ಹಾಕಿದರು.
'ಪ್ಯಾಲೆಸ್ತೇನ್ ಧ್ವಜ ಹಿಡಿದ್ರೆ ತಪ್ಪೇನಿಲ್ಲ..' ಚರ್ಚೆಗೆ ಗ್ರಾಸವಾದ ಸಚಿವ ಜಮೀರ್ ಸಮರ್ಥನೆ
ಕುಮಾರಸ್ವಾಮಿ ರಾಮನಗರ ಬಿಟ್ಟು ಚನ್ನಪಟ್ಟಣಕ್ಕೆ ಬಂದ್ರು. ಈಗ ಚನ್ನಪಟ್ಟಣ ಬಿಟ್ಟು ಮಂಡ್ಯಕ್ಕೆ ಹೋಗಿದ್ದಾರೆ. ಮುಂದೆ ರಾಜ್ಯವನ್ನೇ ಬಿಟ್ಟು ಬೇರೆ ರಾಜ್ಯಕ್ಕೆ ಹೋಗ್ತಾರೆ. ನಾನು ಬಹಳ ಹತ್ತಿರದಿಂದ ಅವರನ್ನ ನೋಡಿದ್ದೇನೆ. ಈ ಕ್ಷೇತ್ರ ಬಿಟ್ಟುಹೋಗುವಾಗ ನಿಮ್ಮನ್ನ ಅವರು ಕೇಳಿದ್ರಾ.? ನಿಮ್ಮ ಅನುಮತಿ ಇಲ್ದೇ ಅವರು ಮಂಡ್ಯಕ್ಕೆ ಹೋಗಿದ್ದಾರೆ. ಅವರಿಗೆ ಈ ಕ್ಷೇತ್ರದ ಬಗ್ಗೆ ಕಾಳಜಿ ಇದ್ದಿದ್ರೆ ಈ ಉಪಚುನಾವಣೆ ಬರ್ತಿರಲಿಲ್ಲ. ನಮ್ಮ ಸರ್ಕಾರ ಇನ್ನೂ ಮೂರುವರೆ ವರ್ಷ ಇರುತ್ತೆ. ಈಗಾಗಲೇ ಐದು ಗ್ಯಾರಂಟಿ ಯೋಜನಗಳ ಜಾರಿ ಮಾಡಿದ್ದೇವೆ. ಮಹಿಳೆಯರು, ಬಡವರಿಗೆ ಇದು ಅನುಕೂಲ ಆಗ್ತಿದೆ. ಹಾಗಾಗಿ ಜನ ನಮ್ಮ ಪಕ್ಷದ ಮೇಲೆ ನಂಬಿಕೆ ಇಡಬೇಕು. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಹಳ ನಿರೀಕ್ಷೆ ಇತ್ತು. ಆದರೆ ನಿರೀಕ್ಷಿತ ಮಟ್ಟದಲ್ಲಿ ನಮಗೆ ಗೆಲುವು ಸಿಗಲಿಲ್ಲ. ಆಗ ಕೆಲ ಮುಖಂಡರು ಈ ಗ್ಯಾರಂಟಿಯಿಂದ ನಮಗೆ ಲಾಭ ಇಲ್ಲ ಅದನ್ನ ತೆಗೆಯಿರಿ ಅಂದ್ರು. ಆದರೆ ನಮ್ಮ ಸಿಎಂ, ಡಿಸಿಎಂ ಏನೇ ಆದ್ರೂ ಗ್ಯಾರಂಟಿ ಮುಂದುವರೆಸೋಣ ಅಂದ್ರು. ನಾವು ಗ್ಯಾರಂಟಿ ತಂದಿರೋದು ರಾಜಕೀಯ ಲಾಭಕ್ಕೆ ಅಲ್ಲ. ಎಷ್ಟೇ ಕಷ್ಟ ಆದ್ರೂ ನಾವು ಗ್ಯಾರಂಟಿ ಯೋಜನೆ ಸಮರ್ಪಕವಾಗಿ ನಿಭಾಯಿಸುತ್ತೇವೆ ಎಂದರು.