Asianet Suvarna News Asianet Suvarna News

ಕರ್ನಾಟಕದ ಜಿಮ್​ಗಳಿಗೆ ಮಾರ್ಗಸೂಚಿ: ಸಚಿವ ಸುಧಾಕರ್ ಸ್ಪಷ್ಟನೆ

* ಪುನೀತ್ ರಾಜ್‌ಕುಮಾರ್ ಹೃದಯಘಾತದಿಂದ ಸಾವು 
* ಕರ್ನಾಟಕದ ಜಿಮ್​ಗಳಿಗೆ ಮಾರ್ಗಸೂಚಿ 
* ರಾಜ್ಯ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿಕೆ

Karnataka Minister Sudhakar Talks about gym rules rbj
Author
Bengaluru, First Published Oct 31, 2021, 6:36 PM IST

ಚಿಕ್ಕಬಳ್ಳಾಪುರ, (ಅ.31): ಫಿಟ್‌ ಆಗಿದ್ದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಅವರು ಹೃದಯಘಾತದಿಂದ ಸಾವನ್ನಪ್ಪಿದ್ದಾರೆ ಎನ್ನುವುದು ಅಚ್ಚರಿ ಮೂಡಿಸಿದೆ. 

ಪುನೀತ್ ನಿಧನದ (Puneeth Rajkumar Death) ಬಳಿಕ ಜಿಮ್ ಮಾಡುವ ಬಗ್ಗೆ ಹಲವು ಪ್ರಶ್ನೆಗಳು ಕೇಳಿಬಂದಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಜಿಮ್ ಬಗ್ಗೆ ವಿವಿಧ ಅಭಿಪ್ರಾಯಗಳು ವ್ಯಕ್ತವಾಗಿತ್ತು.

ಯುವಜನತೆ ಕಾಡುತ್ತಿರುವ ಹೃದಯಾಘಾತಕ್ಕೆ 13 ಕಾರಣ.. ಇದರಿಂದ ದೂರ ಇರಿ

ಇನ್ನು ಈ ಬಗ್ಗೆ ರಾಜ್ಯ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ (Dr K Sudhakar) ಪ್ರತಿಕ್ರಿಯಿಸಿದ್ದು,  ಜಿಮ್​ ಮಾಡುವ ಯುವಕರಿಗೆ ಕಿವಿಮಾತು ಹೇಳಿದ್ದಾರೆ.  ಪುನೀತ್​ ರಾಜ್​ಕುಮಾರ್ ನಿಧನದ ಬಳಿಕ ಕೆಲವರು ನನ್ನನ್ನು ಪ್ರಶ್ನಿಸುತ್ತಿದ್ದಾರೆ. ಆದರೆ, ಒಂದೆರಡು ಘಟನೆಗಳಿಂದ ಆತಂಕಕ್ಕೊಳಗಾಗುವುದು ಬೇಡ. ಜಿಮ್​​ ಮಾಡುವುದು ಸರಿ, ತಪ್ಪು ಎಂಬ ಆತಂಕಗಳು ಬೇಡ. ಹೃದಯರೋಗ ತಜ್ಞರಿಂದ ಅಭಿಪ್ರಾಯ ಪಡೆದು ಗೈಡ್​ಲೈನ್ಸ್ ಬಿಡುಗಡೆ ಮಾಡಲಾಗುವುದು. ಸಂಪೂರ್ಣ ಮಾಹಿತಿಯೊಂದಿಗೆ ಗೈಡ್​ಲೈನ್ಸ್ ಸಿದ್ಧಪಡಿಸ್ತೇವೆ ಎಂದು ಸ್ಪಷ್ಟಪಡಿಸಿದರು.

ಪರಿಣಿತ ತರಬೇತಿದಾರರು, ಸಾಮಗ್ರಿಗಳ ಬಗ್ಗೆ ಗೈಡ್​​ಲೈನ್ಸ್​ ಬಿಡುಗಡೆ ಮಾಡಲಾಗುವುದು. ದೇಶ ವಿದೇಶದ ಖ್ಯಾತ ವೈದ್ಯರ ಬಳಿ ಮಾಹಿತಿ ಪಡೆಯುತ್ತೇವೆ ಎಂದರು.

ಪುನೀತ್​ ನನ್ನ ಜಿಮ್​ ಮೇಟ್​ ಆಗಿದ್ದರು
ಪುನೀತ್ ರಾಜ್​ಕುಮಾರ್​ ಸಾವು ಅರಗಿಸಿಕೊಳ್ಳಲು ಆಗುತ್ತಿಲ್ಲ. ಪುನೀತ್​ ರಾಜ್​ಕುಮಾರ್ ನನ್ನ ಜಿಮ್​ ಮೇಟ್​ ಆಗಿದ್ದರು. ಪುನೀತ್​ ಅವರ ವರ್ಕೌಟ್​ ನೋಡ್ತಿದ್ರೆ ಆಶ್ಚರ್ಯವಾಗ್ತಿತ್ತು. ನಟ ಪುನೀತ್​​ ಅವರ ಜೀವನ ಶೈಲಿ ಎಲ್ಲವೂ ಚೆನ್ನಾಗಿತ್ತು. ಪುನೀತ್ ಅವರಿಗೆ ಯಾವುದೆ ದುರಭ್ಯಾಸಗಳು ಇರಲಿಲ್ಲ. ಕುಟಂಬಸ್ಥರಿಗೆ ಆ ಭಗವಂತನೇ ಆತ್ಮಸ್ಥೈರ್ಯ ನೀಡಬೇಕು ಎಂದು ಸುಧಾಕರ್ ಹೇಳಿದರು.

ಅಪ್ಪು ಸಾವಿನ ಬೆನ್ನಲ್ಲೇ ಎಚ್ಚೆತ್ತ ಕೇರಳ 
ಸ್ಯಾಂಡಲ್‍ವುಡ್‍ನ ಯುವರತ್ನ, ನಟ ಪುನೀತ್ ರಾಜ್‍ಕುಮಾರ್ ಅವರ ನಿಧನದ ಬೆನ್ನಲ್ಲೇ ಕೇರಳ ಸರ್ಕಾರ ಜಿಮ್‍ಗಳಲ್ಲಿ ಎಇಡಿ ಕಡ್ಡಾಯ ಮಾಡುವಂತೆ ನಿರ್ಧಾರ ತೆಗೆದುಕೊಂಡಿದೆ.

ಕೇರಳ ಸರ್ಕಾರ ರಾಜ್ಯಾದ್ಯಂತ ಇರುವ ಎಲ್ಲ ಜಿಮ್ನಾಷಿಯಂಗಳು, ಕ್ರೀಡಾಂಗಣಗಳು, ಒಳಾಂಗಣಗಳಲ್ಲಿ ಮೂಲಭೂತ ಪ್ರಥಮ ಚಿಕಿತ್ಸಾ ಕಿಟ್‍ಗಳು ಸೇರಿದಂತೆ ಸ್ವಯಂಚಾಲಿತ ಬಾಹ್ಯ ಡಿಫಿಬ್ರಿಲೇಟರ್(ಎಇಡಿ-ಆಟೋಮೇಟೆಡ್ ಎಕ್ಸ್ಟರ್ನಲ್ ಟಿಫಿಬ್ರಿಲೇಟರ್)ಗಳನ್ನು ಬಳಕೆಗೆ ಸಿದ್ಧವಾಗಿಟ್ಟುಕೊಳ್ಳುವ ಅವಶ್ಯಕತೆಯನ್ನು ಎತ್ತಿಹಿಡಿದಿದೆ.

ಈ ಬಗ್ಗೆ ಕೇರಳ ಸಾರಿಗೆ ಸಚಿವ ಅಂಟೋನಿ ರಾಜು ಪ್ರತಿಕ್ರಿಯಿಸಿದ್ದು, ಕೇರಳದ ಕ್ರೀಡಾ ಸಚಿವ ವಿ. ಆಬ್ದುರೆಹಮಾನ್ ಅವರೊಂದಿಗೆ ಚರ್ಚಿಸಿ ರಾಜ್ಯದಲ್ಲಿ ಇದನ್ನು ತುರ್ತಾಗಿ ಜಾರಿಗೆ ತರುವ ಭರವಸೆಯನ್ನು ನೀಡಿದರು. 

Follow Us:
Download App:
  • android
  • ios