ವಕ್ಫ್ ಅಷ್ಟೇ ಅಲ್ಲ, ಮುಜುರಾಯಿ ಇಲಾಖೆ ಜಾಗವೂ ಕಬಳಿಕೆ ಆಗಿದೆ: ಸಂತೋಷ್ ಲಾಡ್

ನಮ್ಮ ಜಿಲ್ಲೆಯಲ್ಲಿ ವಕ್ಫ್ ಸಂಬಂಧ ಯಾವ ರೈತರಿಗೂ ನೋಟೀಸ್ ಕೊಟ್ಟಿಲ್ಲ. ವಾಸ್ತವವಾಗಿ ನಮ್ಮ ಸರ್ಕಾರ ಬಂದಾಗಿನಿಂದ ನೋಟಿಸ್ ಕೊಟ್ಟಿಲ್ಲ. ಹಿಂದಿನ ಸರ್ಕಾರದ ಅವಧಿಯಲ್ಲಿ ನೋಟಿಸ್ ಕೊಟ್ಟಿದ್ದು ಇದು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದರು.

Karnataka minister santosh lad reacts about waqf property dispute rav

ಧಾರವಾಡ (ನ.1): ನಮ್ಮ ಜಿಲ್ಲೆಯಲ್ಲಿ ವಕ್ಫ್ ಸಂಬಂಧ ಯಾವ ರೈತರಿಗೂ ನೋಟೀಸ್ ಕೊಟ್ಟಿಲ್ಲ. ವಾಸ್ತವವಾಗಿ ನಮ್ಮ ಸರ್ಕಾರ ಬಂದಾಗಿನಿಂದ ನೋಟಿಸ್ ಕೊಟ್ಟಿಲ್ಲ. ಹಿಂದಿನ ಸರ್ಕಾರದ ಅವಧಿಯಲ್ಲಿ ನೋಟಿಸ್ ಕೊಟ್ಟಿದ್ದು ಇದು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದರು.

ವಕ್ಫ್ ಗೊಂದಲ ವಿಚಾರವಾಗಿ ಇಂದು ಧಾರವಾಡದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ನಮ್ಮ ಸರ್ಕಾರ ಬಂದಾಗಿನಿಂದ ಯಾವ ರೈತರಿಗೂ ನೋಟಿಸ್ ಹೋಗಿಲ್ಲ. 2018ನಲ್ಲಿ ಹೋಗಿರುವ ನೋಟೀಸ್ ಅದು. ಇದು ನಮ್ಮ ಗಮನಕ್ಕೆ ಇಲ್ಲಿವರೆಗೂ ಬಂದಿರಲಿಲ್ಲ. ಈಗ ಗಮನಕ್ಕೆ ಬಂದಿದೆ. ಸೋಮವಾರ ಈ ಸಂಬಂಧ ಸಭೆ ಮಾಡಲು ಡಿಸಿಗೆ ಹೇಳಿದ್ದೇನೆ. ಸಂಬಂಧಿಸಿದವರ ಜೊತೆ ಸಭೆ ಮಾಡಿ ವರದಿ ಕೊಡಲು ಹೇಳಿದ್ದೇನೆ ಎಂದರು.

ಉಪಚುನಾವಣೆ ಹೊತ್ತಲ್ಲಿ ಪ್ರಿಯಾಂಕ್ ಖರ್ಗೆ ಸ್ಫೋಟಕ ಹೇಳಿಕೆ! ಬಿಜೆಪಿಯಿಂದ ಕಾಂಗ್ರೆಸ್‌ಗೆ ಸೇರ್ತಾರಾ ಇನ್ನಷ್ಟು ಶಾಸಕರು?

ಮುಸ್ಲಿಂ ರೈತರ ಪಹಣಿಯಲ್ಲಿಯೂ ವಕ್ಫ್ ಹೆಸರು ಇರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ವಕ್ಫ್ ಮಾತ್ರ ಅಲ್ಲ, ಮುಜರಾಯಿ ಇಲಾಖೆ ಜಾಗವೂ ಕಬಳಿಕೆ ಆಗಿದೆ. ಕಂದಾಯ ಇಲಾಖೆ, ಬಿಡಿಎ ಸೈಟ್ ಗಳೂ ಕಬಳಿಕೆ ಆಗಿವೆ.ಆಗಿವೆ. ಹೀಗಾಗಿ ನೋಟಿಸ್ ಕೊಟ್ಟಿರುತ್ತಾರೆ. ಇದಕ್ಕಾಗಿಯೇ ಟ್ರಿಬ್ಯುನಲ್ ಇದೆ. ಆ ಮೂಲಕ ಎಲ್ಲವೂ ನಡೆಯುತ್ತದೆ ಎಂದರು.

ಇನ್ನು ಕರ್ನಾಟಕ ಉಪಚುನಾವಣೆ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಸಚಿವರು, ಸಂಡೂರಿನಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಗೆಲುವು ನಿಶ್ಚಿತ. ಚೆನ್ನಾಗಿ ಪ್ರಚಾರ ನಡೆದಿದೆ. ಈ ಬಾರಿಯೂ ಸಂಪೂರ್ಣ ಬಹುಮತದಿಂದ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Latest Videos
Follow Us:
Download App:
  • android
  • ios