ದೇಶದಲ್ಲಿ ಚರ್ಚೆಗೆ ಬೇಕಾದಷ್ಟು ವಿಷಯಗಳಿವೆ. ಒಂದು ರಾಜ್ಯ ಹೊತ್ತಿ ಉರಿಯುತ್ತಿದ್ದರೂ, ಜನರ ಗಮನ ಬೇರೆಡೆ ಸೆಳೆಯಲು 'ಒನ್ ನೇಷನ್ ಒನ್ ಎಲೆಕ್ಷನ್' ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಸರ್ಕಾರದ ವಿವಿಧ ನೀತಿಗಳನ್ನು ಟೀಕಿಸಿದ್ದಾರೆ.

ಬೆಳಗಾವಿ (ಡಿ.13): ದೇಶದಲ್ಲಿ ಚರ್ಚೆ ಮಾಡಬೇಕಾದ ವಿಷಯಗಳು ಬೇಕಾದಷ್ಟಿವೆ. ಒಂದು ರಾಜ್ಯ ಹೊತ್ತಿ ಉರಿತಾ ಇದೆ. ಅದರ ಬಗ್ಗೆ ಇವರು ಮಾತಾಡುವ ಬದಲು ಜನರ ಗಮನ ಬೇರೆಡೆ ಸೆಳೆಯಲು 'ಒನ್ ನೇಷನ್ ಒನ್ ಎಲೆಕ್ಷನ್' ಅಂತಿದಾರೆ ಎಂದು ಕೇಂದ್ರದ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.

'ಒನ್ ನೇಷನ್, ಒನ್ ಎಲೆಕ್ಷನ್'ವಿಚಾರವಾಗಿ ಇಂದು ಬೆಳಗಾವಿಯ ಸುವರ್ಣಸೌಧದದಲ್ಲಿ ಮಾತನಾಡಿದ ಸಚಿವರು, ನಮ್ಮ ದೇಶದ ರುಪಾಯಿ ಮೌಲ್ಯ ಪಾತಾಳಕ್ಕೆ ಕುಸಿದಿದೆ. ಅದಾನಿ ಪ್ರಕರಣ ಬಗ್ಗೆ ಚರ್ಚೆ ಮಾಡೋಕೆ ಇವರು ತಯಾರಿಲ್ಲ. ಆದರೆ ಜನರ ಗಮನ ಬೇರೆಡೆ ಸೆಳೆಯಲು ಇಂಥ ಕೆಲಸ ಮಾಡ್ತಿರ್ತಾರೆ. ಬಿಲ್ ತರುವ ಮೊದಲು ಸಂವಿಧಾನದಲ್ಲಿ ಕೆಲವು ತಿದ್ದುಪಡಿ ತರಬೇಕಾಗುತ್ತೆ. ಮೆನ್ ಅಂಡ್ ಮಿಷನರಿ ಏನು ಬೇಕು? ತಾಂತ್ರಿಕವಾಗಿ ಸಿದ್ದರಿದ್ದೀರಾ? ಮಾನವ ಸಂಪನ್ಮೂಲ ಇದೆಯಾ? ಇದನ್ನೆಲ್ಲಾ ನೋಡಬೇಕಾಗುತ್ತೆ. ರಾತ್ರಿ ಮೋದಿ ಕನಸು ಕಾಣ್ತಾರೆ. ಅದನ್ನ ನನಸು ಮಾಡಲು ಬಿಜೆಪಿ ಸಚಿವರೆಲ್ಲ ವಾವ್ ಮೋದಿಜಿ ಮೋದೀಜಿ ಅಂತಾರೆ ಎಂದು ಲೇವಡಿ ಮಾಡಿದರು.

ತಾಯಿ ಚಾಮುಂಡೇಶ್ವರಿ ಹರಕೆ ಸೀರೆ ಕಾಳಸಂತೆಯಲ್ಲಿ ಅರ್ಧಬೆಲೆ ಮಾರಾಟ; ಅಧಿಕಾರಿಗಳ ವಿರುದ್ಧ ಸ್ನೇಹಮಯಿ ಕೃಷ್ಣ ದೂರು

ಪ್ರಧಾನಿ ಮೋದಿಯವರ ಆಡಳಿತ ವೈಫಲ್ಯ, ಅದಾನಿ ಪ್ರಕರಣ ಮುಚ್ಚಿಹಾಕಲು ಈ ರೀತಿ ಮಾಡ್ತಾ ಇರ್ತಾರೆ. ಅಟೆನ್ಷನ್ ಡೀವಿಯೇಷನ್ ಟ್ಯಾಕ್ಟಿಕ್ ಮಾಡ್ತಿದಾರೆ. ಇದೆಲ್ಲ ಅದಾನಿಯನ್ನ ಉಳಿಸಲು ಮಾಡ್ತೀರೋ ತಂತ್ರವಲ್ಲದೇ ಮತ್ತೇನೂ ಅಲ್ಲ ಎಂದರು. ಇದೇ ವೇಳೆ ಕರ್ನಾಟಕ ಪ್ಲಾಟ್‌ಫಾರ್ಮ್ ಆಧಾರಿತ ಗಿಗ್ ವರ್ಕರ್ಸ್ ಬಿಲ್ ಮಂಡನೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಕಾರ್ಮಿಕರ ಸಾಮಾಜಿಕ ಆರ್ಥಿಕ ಭದ್ರತೆಗೆ ಸರ್ಕಾರ ಬದ್ಧವಾಗಿದೆ. ಇಂಡಸ್ಟ್ರಿ ಹಾಗೂ ಕಾರ್ಮಿಕರಿಗೆ ತೊಂದರೆಯಾಗದಂತೆ ವಿಧೇಯಕ ತರ್ತೇವೆ ಎಂದು ಭರವಸೆ ನೀಡಿದರು.

ಇನ್ನು ಗ್ರಾಮೀಣಾಭಿವೃದ್ಧಿ ವಿವಿ ವಿಧೇಯಕ ಬಿಲ್ ವಿಚಾರವಾಗ ಪ್ರತಿಕ್ರಿಯಿಸಿದ ಸಚಿರು, ಗುಜರಾತ್ ಯುನಿವರ್ಸಿಟಿ ಬಿಲ್ ಏನಿದೆ ಗೊತ್ತಾ? ಮಾತೆತ್ತಿದರೆ ಬಿಜೆಪಿಯವರು ಗುಜರಾತ್ ಮಾಡೆಲ್ ಅಂತಾರೆ. ಆದ್ರೆ ಗುಜರಾತ್ ನಲ್ಲಿ ಮೋದಿ ಎನ್ ಮಾಡಿದ್ದಾರೆ ಅನ್ನೋದು ಮೊದಲು ತಿಳಿದುಕೊಳ್ಳಲಿ. ನಮಗೆ ಗುಜರಾತ್ ಮಾಡೆಲ್ ಬೇಕಿಲ್ಲ. ನಮ್ಮ ಮಾಡೆಲ್ ನೇ ನೋಡಿ ಬೇರೆ ರಾಜ್ಯಗಳು ಕಲಿತಿವೆ. ಗುಜರಾತ್ ಮಾಡೆಲ್‌ನಲ್ಲಿ ಏನಿದೆ ಮಣ್ಣು ಎಂದು ಕಿಡಿಕಾರಿದರು.

ವಕ್ಫ್ ಆಸ್ತಿ ವಿಚಾರ, ಬಿಜೆಪಿ ವಿರುದ್ಧ ಕಿಡಿ:

ವಕ್ಫ್ ಆಸ್ತಿ ವಿವಾದ ವಿಚಾರವಾಗಿ ಬಿಜೆಪಿಯವರು ಸುಳ್ಳಿನ ಕಂತೆ ಕಟ್ಟುತ್ತಿದ್ದಾರೆ. ಚಲವಾದಿ ನಾರಾಯಣ ಸ್ವಾಮಿ, ಸಿ.ಟಿ ರವಿ ಏನು ಮಾತಾಡಿದರು? ಕಾಲಂ 11 ನಲ್ಲಿ ಹೆಸರಿದ್ದರೆ ಓನರ್ ಶಿಪ್ ಅಂತ ಹೇಳ್ತಾರೆ. ಪರಿಷತ್ ನಲ್ಲಿ ರೈತರ ಹಿತಾಸಕ್ತಿ ಕಾಪಾಡ್ತೀವಿ ಅಂತ ಹೇಳಿದಿವಿ. ಅದನ್ನೇ ವಿಧಾನಸಭೆಯಲ್ಲೂ ಹೇಳ್ತೀವಿ. ವಕ್ಫ್ ವಿಚಾರದಲ್ಲಿ ಬಿಜೆಪಿಯವರು ರಾಜಕಾರಣ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

10 ಸಾವಿರ ಜನ ನುಗ್ಗಿದಾಗ ಲಾಠಿ ಬೀಸದೆ ಮುತ್ತು ಕೊಡಬೇಕಾ? : ಪರಮೇಶ್ವರ್‌

ಪಂಚಸಾಲಿ ಮೀಸಲಾತಿ: ಬಿಜೆಪಿ ಎರಡು ನಾಲಗೆ:

ಪಂಚಮಸಾಲಿ ವಿಚಾರದಲ್ಲಿ ಬಿಜೆಪಿಗೆ ಎರಡು ನಾಲಗೆ ಇದೆ. ಬೇಕು ಅಂತಲೇ ಗೊಂದಲ ಸೃಷ್ಟಿ ಮಾಡ್ತಿದ್ದಾರೆ. ಹಿಂದಿನ ಸರ್ಕಾರದಲ್ಲಿ 2C 2D ಮಾಡಿದರು. ಕಾನೂನಿನ ಗಂಟು ಕಟ್ಟಿದ್ದೇ ಬಿಜೆಪಿಯವರು. ನಿನ್ನೆ ಒಬ್ಬರಾದ್ರೂ ಈ ಬಗ್ಗೆ ಮಾತನಾಡಿದ್ರ? ಕಾನೂನಾತ್ಮಕವಾಗಿ ಮಾತನಾಡಲು ಅವರು ತಯಾರಿಲ್ಲ. ಯತ್ನಾಳ್ ಬಸವಣ್ಣನ ಬಗ್ಗೆ ಮಾತಾಡಿದಾಗ ಒಬ್ರಾದರೂ ಮಾತಾಡಿದ್ರಾ ಅವನ್ಯಾರೋ ಚಕ್ರತೀರ್ಥ ಬಸವಣ್ಣನ ಬಗ್ಗೆ ಏನು ಹೇಳಿದ್ದ? ಬಸವಣ್ಣನ ಬಗ್ಗೆ ಬಿಜೆಪಿ ರಾಜ್ಯಾದ್ಯಕ್ಷರು ಬಹಳ ಮಾತಾಡ್ತಾರೆ ಹಾಗಾದರೆ ಯತ್ನಾಳ್ ಬಸವಣ್ಣನ ಬಗ್ಗೆ ಮಾತಾಡಿದಾಗ ಅದನ್ನ ತಪ್ಪು ಅಂತ ಹೇಳಿದ್ರಾ? ನಿನ್ನೆ ಆರ್ ಎಸ್ ಎಸ್ ಅಂದ ತಕ್ಷಣ ಇಡೀ‌ ಬಿಜೆಪಿ ಎದ್ದು ನಿಂತರು. ಆರೆಸ್ಸೆಸ್ ಡಿಪೆಂಡ್ ಮಾಡದಿದ್ದರೆ ಇವರನ್ನು ಮಂಡಿ ಊರಿಸಿ ಕೂರಿಸ್ತಾರೆ. ಬಿಜೆಪಿಯಲ್ಲಿ ವೈಜೆಪಿ, ಕೆಜೆಪಿ, ಬಿಜೆಪಿ ಮೂರು ಇವೆ. ನಾವು ಯಾರಿಗೆ ಉತ್ತರ ಕೊಡೋಣ? ಎಂದು ವ್ಯಂಗ್ಯ ಮಾಡಿದರು.