Asianet Suvarna News Asianet Suvarna News

ತುಂಗಭದ್ರಾ ಡ್ಯಾಂ ಗೇಟ್ ಹಾಳಾಗಬಾರದಿತ್ತು ಆಗಿದೆ; ಇದಕ್ಕೆ ಕೇಂದ್ರ ದುಡ್ಡು ಕೊಡಬೇಕು: ಮಧು ಬಂಗಾರಪ್ಪ

ತುಂಗಭದ್ರಾ ಡ್ಯಾಂ ಗೇಟ್ ಹಾಳಾಗಿದೆ. ಅದು ಆಗಬಾರದಿತ್ತು ಆಗಿದೆ. ಜಲಾಶಯಕ್ಕೆ ಕೇಂದ್ರ ಸರ್ಕಾರ ಹಣ ಕೊಡಬೇಕು. ಗೇಟ್ ಕಳಚಿದ್ದು ಅದರ ದುರಸ್ತಿ ಕಾರ್ಯಕ್ಕೆ ಕೇಂದ್ರ ಸರ್ಕಾರ ಹಣ ನೀಡಬೇಕು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಆಗ್ರಹಿಸಿದರು.

Karnataka minister Madhu bangarappa reacts abou tungabhadra dam gate washed away rav
Author
First Published Aug 11, 2024, 3:51 PM IST | Last Updated Aug 11, 2024, 3:51 PM IST

ಶಿವಮೊಗ್ಗ (ಆ.11): ತುಂಗಭದ್ರಾ ಡ್ಯಾಂ ಗೇಟ್ ಹಾಳಾಗಿದೆ. ಅದು ಆಗಬಾರದಿತ್ತು ಆಗಿದೆ. ಜಲಾಶಯಕ್ಕೆ ಕೇಂದ್ರ ಸರ್ಕಾರ ಹಣ ಕೊಡಬೇಕು. ಗೇಟ್ ಕಳಚಿದ್ದು ಅದರ ದುರಸ್ತಿ ಕಾರ್ಯಕ್ಕೆ ಕೇಂದ್ರ ಸರ್ಕಾರ ಹಣ ನೀಡಬೇಕು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಆಗ್ರಹಿಸಿದರು.

ಇಂದು ಶಿವಮೊಗ್ಗದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ತುಂಗಭದ್ರಾ ಜಲಾಶಯಕ್ಕಿಂತ ನಮ್ಮ ಜಿಲ್ಲೆಯಲ್ಲಿ ಎಲ್ಲ ಕಡೆ ಚೆನ್ನಾಗಿದೆ. ಎಲ್ಲ ಜಲಾಶಯಗಳದ್ದು ಮಾಹಿತಿ ಸಂಗ್ರಹಿಸಿದ್ದೇನೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಸಹ ಈ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಮೊದಲ ಬಾರಿಗೆ ಈ ರೀತಿ ಆಗಿದೆ. ನಾಲ್ಕು ದಿನದಲ್ಲಿ ರಿಪೇರಿ ಮಾಡ್ತಾರೆ. ಡಿಕೆ ಶಿವಕುಮಾರ ಅವರೇ ಖುದ್ದಾಗಿ ಅಲ್ಲಿಗೆ ಭೇಟಿ ನೀಡಿ ಸಭೆ ನಡೆಸಿದ್ದಾರೆ. ಶೀಘ್ರದಲ್ಲೇ ಸಮಸ್ಯೆ ಬಗೆಹರಿಯುತ್ತದೆ ಎಂದರು.

ತುಂಗಭದ್ರಾ ಜಲಾಶಯದಿಂದ 98 ಟಿಎಂಸಿ ನೀರು ನದಿಪಾಲು!

ಇನ್ನು ವಿಎಸ್‌ಐಎಲ್ ವಿಚಾರವಾಗಿ ಮಾತನಾಡಿದ ಸಚಿವರು, ನಾನು ಚುನಾವಣೆ ಸಂದರ್ಭದಲ್ಲೇ ಹೇಳಿದ್ದೆ. ಜನರು ನಂಬಿಕೊಂಡು ಚುನಾವಣೆಯಲ್ಲಿ ಸಹಕಾರ ಮಾಡುವುದು ಸಹಜ. ಚುನಾವಣೆಯಲ್ಲಿ ಸಂಸದ ರಾಘವೇಂದ್ರ ಎಷ್ಟು ಸುಳ್ಳು ಹೇಳಿದ್ದಾರೆ ಎನ್ನುವುದು ಜನರಿಗೆ ಗೊತ್ತಿಲ್ಲ. 15 ಸಾವಿರ ನೌಕರರು ಇದ್ದ ವಿಎಸ್‌ಐಎಲ್‌ನಲ್ಲಿ ಕೆಲಸ ಇಲ್ಲದೆ ಬೀದಿಗೆ ಬಿದ್ದಿದ್ದಾರೆ. ಪ್ರಧಾನಿ ಮೋದಿಯವರು 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇನೆ ಎಂದು ಹೇಳಿದ್ದಾರೆ. ಆದರೆ ವಾಸ್ತವದಲ್ಲಿ ಕೆಲಸದಿಂದ ತೆಗೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದರು.

ಕೆಆರ್‌ಎಸ್ ಆಣೆಕಟ್ಟು ಶೇ.100 ಭರ್ತಿ; ರೈತರ ಮೊಗದಲ್ಲಿ ಸಂತಸ, ಕಾವೇರಿ ನದಿ ಪಾತ್ರಗಳಲ್ಲಿ ಪ್ರವಾಹದ ಆತಂಕ

ಇವತ್ತು ಜನರು ಬೀದಿಗೆ ಬಿದ್ದಿದ್ದರೆ ಅದಕ್ಕೆ ವಿಜಯೇಂದ್ರ ನೇತೃತ್ವದಲ್ಲಿ ನೇರವಾಗಿ ರಾಘವೇಂದ್ರನೇ ಕಾರಣ. ರಾಘವೇಂದ್ರ ಭದ್ರಾವತಿಯ ವಿಐಎಸ್‌ಎಲ್‌ ಮುಚ್ಚಿಹಾಕುವ ಕೆಲಸ ಮಾಡುತ್ತಿದ್ದಾರೆ. ಅವರ ಕೊಡುಗೆ ಎಂದರೆ ವಿಎಸ್‌ಐಎಲ್‌ ಮುಚ್ಚಿಸಿದ್ದು. ಚೋಟಾ ಸಿಗ್ನೇಚರ್ ಮಾಡಿ ಅವರ ಅಪ್ಪನ ನ್ನು ಜೈಲಿಗೆ ಕಳುಹಿಸಿದ್ದು ವಿಜಯೇಂದ್ರ ಅವರು. ಇಂತಹ ದೊಡ್ಡ ದೊಡ್ಡ ಇಂಡಸ್ಟ್ರೀಸ್ ನನ್ನು ಮುಚ್ಚುವ ಕೆಲಸ ಮಾಡುತ್ತಿರುವ ರಾಘವೇಂದ್ರ ಹಾಗೂ ವಿಜಯೇಂದ್ರ ಮಾಡುತ್ತಿದ್ದಾರೆ. ಈ ಎಂಪಿ ಎಷ್ಟು ಪೆದ್ದ ಎಂದರೆ ಯಾರಿಗೆ ಅರ್ಜಿ ಕೊಡಬೇಕು ಎಂಬುದು ಸಹ ಗೊತ್ತಿಲ್ಲ. ಹಡಬೆ ದುಡ್ಡನ್ನು ಮಾಡುವುದರಲ್ಲಿ ಮಾತ್ರ ಬುದ್ಧಿವಂತರು ಇವರು. ಯಾಕೆಂದರೆ ಅದರಲ್ಲಿ ಅನುಭವ ಇದೆ ಎಂದು ಸಂಸದ ರಾಘವೇಂದ್ರ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

Latest Videos
Follow Us:
Download App:
  • android
  • ios