Asianet Suvarna News Asianet Suvarna News

ಬೆಂಗಳೂರು: ವಿಕ್ಟೋರಿಯಾ ಆಸ್ಪತ್ರೆಗೆ ಲೋಕಾಯುಕ್ತ ನ್ಯಾಯಮೂರ್ತಿ ದಿಢೀರ್ ಭೇಟಿ; ಅವ್ಯವಸ್ಥೆ ಕಂಡು ಗರಂ

ರಸ್ತೆಯಲ್ಲಿ ರೋಗಿ ಬಿದ್ದು ನರಳಾಡ್ತಿದ್ರೂ ಯಾಕೆ ಟ್ರೀಟ್ಮೆಂಟ್ ನೀಡಿಲ್ಲ, ಏನು ಮಾಡ್ತಾ ಇದ್ದೀರಾ?' ವಿಕ್ಟೋರಿಯಾ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಲೋಕಾಯುಕ್ತರು ವೈದ್ಯರನ್ನು ತರಾಟೆಗೆ ತೆಗೆದುಕೊಂಡರು.

Karnataka lokayukta justice suddent visit to Bengaluru Victoria hospital rav
Author
First Published Jul 29, 2024, 7:06 PM IST | Last Updated Jul 30, 2024, 9:44 AM IST

ಬೆಂಗಳೂರು (ಜು.29): ವಿಕ್ಟೋರಿಯಾ ಆಸ್ಪತ್ರೆ ಅವ್ಯವಸ್ಥೆ ವಿರುದ್ಧ ಸಾರ್ವಜನಿಕರಿಂದ ದೂರುಗಳು ಬರುತ್ತಿರುವ ಹಿನ್ನೆಲೆ ಇಂದು ಲೋಕಾಯುಕ್ತ ನ್ಯಾಯಮೂರ್ತಿಗಳಾದ (Lokayukta Justice) ಬಿ.ಎಸ್.ಪಾಟೀಲ್‌(BS Patil) ಹಾಗೂ ಉಪ ಲೋಕಾಯುಕ್ತ ನ್ಯಾ.ಫಣೀಂದ್ರ ಮತ್ತು ನ್ಯಾ.ವೀರಪ್ಪ ಭೇಟಿ ನೀಡಿದರು. ಈ ವೇಳೆ ವ್ಯಕ್ತಿಯೋರ್ವ ಆಸ್ಪತ್ರೆಯ ಆವರಣದಲ್ಲಿ ಬಿದ್ದಿದ್ದ ಫೋಟೊ ತೋರಿಸಿ, ಯಾಕೆ ಟ್ರೀಟ್ಮೆಂಟ್ ನೀಡಿಲ್ಲ, ಏನು ಮಾಡ್ತಾ ಇದ್ದೀರಾ? ಎಂದು ವೈದ್ಯರನ್ನ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.

ಆಸ್ಪತ್ರೆಯ ಇಂಚಿಂಚು ಪರಿಶೀಲನೆ ನಡೆಸಿದ ಲೋಕಾಯುಕ್ತ ನ್ಯಾಯಾಧೀಶರು. ಡೆಂಗ್ಯೂ ವಾರ್ಡ್, ಟ್ರಾಮಾ ಹಾಗೂ ಎಮರ್ಜೆನ್ಸಿ ಸೆಂಟರ್‌ಗೆ ಭೇಟಿ ನೀಡಿ ವಿಶೇಷ ಅಧಿಕಾರಿ ಬಾಲಾಜಿ ಪೈ ಅವರಿಂದ ಮಾಹಿತಿ ಪಡೆದರು. ಬಳಿಕ ಮೆಡಿಸಿನ್ ಸ್ಟೋರ್‌ಗೆ ಭೇಟಿ ನೀಡಿದ ಲೋಕಾಯುಕ್ತರು ಮೆಡಿಸಿನ್ ಲಭ್ಯತೆ ಹಾಗೂ ಅಲಭ್ಯತೆ ಕುರಿತು ಮಾಹಿತಿ ಪಡೆದರು. ಈ ವೇಳೆ ಮೆಡಿಷನ್ ಎಕ್ಸ್ಪೇರಿ  ಬಗ್ಗೆ  ಪರಿಶೀಲಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಅಡ್ಡ ನಿಂತಿದ್ದ ಗಾಡಿ ತೆಗೆಯಿರಿ ಎಂದಿದ್ದಕ್ಕೆ 108 ಆಂಬುಲೆನ್ಸ್ ಚಾಲಕನಿಗೆ ಮನಬಂದಂತೆ ಥಳಿಸಿದ ದುಷ್ಕರ್ಮಿಗಳು!

ಅವ್ಯವಸ್ಥೆಯ ಆಗರ ವಿಕ್ಟೋರಿಯಾ ಆಸ್ಪತ್ರೆ!

ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ಬಳಿಕ ಮಾತನಾಡಿದ  ಲೋಕಾಯುಕ್ತರಾದ ಬಿಎಸ್ ಪಾಟೀಲ್, ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆ ಸರಪ್ರೈಸ್ ವಿಸಿಟ್ ಮಾಡಿದ್ದೇವೆ. ಈ ವೇಳೆ ಆಸ್ಪತ್ರೆ ಆವರಣದಲ್ಲಿ ರೋಗಿಯೊಬ್ಬ ನರಳಾಡ್ತಾ ಬಿದ್ದಿದ್ರೂ ಯಾರೂ ಚಿಕಿತ್ಸೆ ನೀಡಿಲ್ಲ. ರೋಗಿಗಳಿ ಚಿಕಿತ್ಸೆ ಸರಿಯಾಗ ನೀಡದೆ, ವೈದ್ಯರು ಸ್ಪಂದಿಸದ ಹಿನ್ನೆಲೆ ಸಾಕಷ್ಟು ದೂರುಗಳು ಬಂದಿವೆ. ಹೀಗಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ ಎಂದರು. 

ಬಾಗಿನ ಅರ್ಪಣೆ ಕಾರ್ಯಕ್ರಮದಲ್ಲಿ ಬಾಡೂಟ ಆಯೋಜನೆ! ಸಂಪ್ರದಾಯಕ್ಕೆ ಎಳ್ಳು-ನೀರು ಬಿಟ್ಟ ಕಾವೇರಿ ನಿಗಮ ಅಧಿಕಾರಿಗಳು!

ರೋಗಿಗಳಿಗೆ ಕೊಟ್ಟ ಮೆಡಿಸಿನ್ ರಿಜಿಸ್ಟ್ರರ್‌ನಲ್ಲಿ ಎಂಟ್ರಿ ಆಗ್ತಿರಲಿಲ್ಲ. ಮೂರು ಜನ ಡಾಟಾ ಎಂಟ್ರಿ ಅಪರೇಟರ್ ನೇಮಕ ಮಾಡಿಕೊಂಡಿದ್ದಾರೆ. ಎಮರ್ಜೆನ್ಸಿ ಮೆಡಿಸಿನ್ ಕೇಳಿದ್ರೆ ಇಲ್ಲ ಅಂತಿದ್ದಾರೆ. ಕಾಂಟ್ರಾಕ್ಟರ್ ಬಿಲ್ ಪೆಂಡಿಂಗ್ ಇರೋದ್ರಿಂದ ಸಪ್ಲೇ ಮಾಡಿಲ್ಲ ಎಂದಿದ್ದಾರೆ. ಇನ್ನು ಓಪಿಡಿಯಲ್ಲಿ ಎಲ್ಲ ಡಾಕ್ಟರ್ ಗೈರಾಗಿರುವುದು ಕಂಡುಬಂತು. ಅವರ ಬದಲು ಪಿಜಿ ಡಾಕ್ಟರ್ ಇದ್ದರು. ಸೂಪರಿಡೇಂಟ್ ಕರೆಸಿದ್ವಿ ಕೆಲವರು ಬಂದರು. ಇನ್ನು ಕೆಲವರು ರಜೆಯಲ್ಲಿದ್ದೇವೆ ಅಂದಿದ್ದಾರೆ. ರೋಗಿಗಳಿಗೆ ಗೈಡ್ ಮಾಡ್ತಾ ಇರಲಿಲ್ಲ. ರೋಗಿಗಳಿಗೆ ಸರಿಯಾದ ಮಾರ್ಗದರ್ಶನ ಸಿಗಬೇಕು. ವೈದ್ಯರು ಬೇಜವಾಬ್ದಾರಿತನ ತೋರದೇ ರೋಗಿಗಳೊಂದಿಗೆ ಸ್ಪಂದಿಸಿ ಚಿಕಿತ್ಸೆ ನೀಡಬೇಕು. ಯಾರೂ ಚಿಕಿತ್ಸೆ ವಂಚಿತರಾಗಿ ರಸ್ತೆಯಲ್ಲಿ ನರಳಾಡುವಂತಾಗಬಾರದು ಎಂದರು.

Latest Videos
Follow Us:
Download App:
  • android
  • ios