ಆಂಬುಲೆನ್ಸ್‌ಗೆ ಅಡ್ಡ ನಿಂತಿದ್ದ ಗಾಡಿ ತೆಗೆಯಿರಿ ಎಂದಿದ್ದಕ್ಕೆ ದುಷ್ಕರ್ಮಿಗಳು ಚಾಲಕನನ್ನೇ ಹೊರಗೆ ಎಳೆದು ಮನಸೋ ಇಚ್ಛೆ ಅಮಾನವೀಯವಾಗಿ ಹಲ್ಲೆ ಮಾಡಿದ ಘಟನೆ ಚಿಕ್ಕಮಗಳೂರು ಜಿಲ್ಲಾಸ್ಪತ್ರೆ ಆವರಣದಲ್ಲಿ ನಡೆದಿದೆ.
ಚಿಕ್ಕಮಗಳೂರು (ಜು.29) ಎಷ್ಟೇ ಟ್ರಾಫಿಕ್ ಜಾಮ್ ಇರಲಿ, ವಾಹನ ಸವಾರರಿಗೆ ಎಷ್ಟೇ ಅವಸರವಿರಲಿ. ಹಿಂದೆ ಆಂಬುಲೆನ್ಸ್ ಸೈರನ್ ಕೇಳಿಸುತ್ತಿದ್ದಂತೆ ವಾಹನ ಸವಾರರು ಬದಿಗೆ ಮುಂದೆ ಹೋಗಲು ಅನುವು ಮಾಡಿಕೊಡುವುದನ್ನ ನೋಡಿರುತ್ತೀರಿ, ಅದು ಮಾನವೀಯತೆ. ಅದರೆ ಇಲ್ಲಿ ನೋಡಿ ಆಂಬುಲೆನ್ಸ್‌ಗೆ ಅಡ್ಡ ನಿಂತಿದ್ದ ಗಾಡಿ ತೆಗೆಯಿರಿ ಎಂದಿದ್ದಕ್ಕೆ ದುಷ್ಕರ್ಮಿಗಳು ಚಾಲಕನನ್ನೇ ಹೊರಗೆ ಎಳೆದು ಮನಸೋ ಇಚ್ಛೆ ಅಮಾನವೀಯವಾಗಿ ಹಲ್ಲೆ ಮಾಡಿದ ಘಟನೆ ಚಿಕ್ಕಮಗಳೂರು ಜಿಲ್ಲಾಸ್ಪತ್ರೆ ಆವರಣದಲ್ಲಿ ನಡೆದಿದೆ.
ಸಂಜಯ್ ಹಲ್ಲೆಗೊಳಗಾದ ಆಂಬುಲೆನ್ಸ್ ಚಾಲಕ, ತಡರಾತ್ರಿ ಜಿಲ್ಲಾಸ್ಪತ್ರೆ ಆವರಣದಲ್ಲಿ ಘಟನೆ ನಡೆದಿದೆ. ಹಲ್ಲೆಗೊಳಗಾದ ಸಂಜಯ್ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಾಗಿನ ಅರ್ಪಣೆ ಕಾರ್ಯಕ್ರಮದಲ್ಲಿ ಬಾಡೂಟ ಆಯೋಜನೆ! ಸಂಪ್ರದಾಯಕ್ಕೆ ಎಳ್ಳು-ನೀರು ಬಿಟ್ಟ ಕಾವೇರಿ ನಿಗಮ ಅಧಿಕಾರಿಗಳು!
ತಡರಾತ್ರಿ ರೋಗಿಯೊಬ್ಬರನ್ನ ಜಿಲ್ಲಾಸ್ಪತ್ರೆಗೆ ಕರೆತಂದಿದ್ದ 108 ಆಂಬುಲೆನ್ಸ್. ಆ ವೇಳೆ ಆಂಬುಲೆನ್ಸ್ ಮುಂದೆ ಸಾಗದಂತೆ ಅಡ್ಡವಾಗಿ ನಿಂತಿದ್ದ ದುಷ್ಕರ್ಮಿಗಳು. ರೋಗಿಗೆ ಸೀರಿಯೆಸ್ ದಾರಿ ಬಿಡಿ, ಅಡ್ಡ ನಿಂತ ಬೈಕ್ ತೆಗೆಯಿರಿ ಎಂದಿರುವ ಚಾಲಕ. ಇಷ್ಟಕ್ಕೆ ಕೋಪಗೊಂಡ ದುಷ್ಕರ್ಮಿಗಳು ಚಾಲಕನೊಂದಿಗೆ ಗಲಾಟೆ ಗಲಾಟೆ ಮಾಡಿದ್ದಾರೆ. ಬಳಿಕ ಹೊರಗೆಳೆದು ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ. ದುಷ್ಕರ್ಮಿಗಳ ಹಲ್ಲೆಯಿಂದ ಗಾಯಗೊಂಡಿರುವ ಚಾಲಕ.
ಸದ್ಯ ಘಟನೆ ಸಂಬಂಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
