ಲಾಕ್‌ಡೌನ್ ಘೋಷಣೆ ಬೆನ್ನಲ್ಲೇ ಜನರ ಓಡಾಟ ಜೋರಾಗಿದೆ. ಅದರಲ್ಲೂ ಖಾಸಗಿ ಬಸ್ ಸಂಸ್ಥೆಗಳು ಸುಲಿಗೆಗೆ ಇಳಿದಿವೆ.

ಬೆಂಗಳೂರು, (ಏ.26): ಕೋವಿಡ್‌ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಇದೇ 27ರಿಂದ 14 ದಿನಗಳ ವರೆಗೆ ಕರ್ನಾಟಕ ಲಾಕ್‌ಡೌನ್ ಘೋಷಣೆ ಮಾಡಿದೆ. ಈ ಹಿನ್ನೆಲೆಯಲ್ಲಿ ವಲಸೆ ಕಾರ್ಮಿಕರು ಸೇರಿದಂತೆ ಹಲವು ತವರ ಜನರ ಪರದಾಟ ಶುರುವಾಗಿದೆ.

ಅದರಲ್ಲೂ ಸಿಲಿಕಾನ್ ಸಿಟಿಯಲ್ಲಿ ಕೆಲಸ ಮಾಡುತ್ತಿದ್ದ ಜನರು ತವರಿನತ್ತ ತೆರಳು ಬಸ್‌ಗಾಗಿ ಕಾಯುತ್ತಿದ್ದಾರೆ. ಇದರಿಂದ ಮೆಜೆಸ್ಟಿಕ್‌ನಲ್ಲಿ ಫುಲ್ ರಷ್ ಆಗಿದೆ.

14 ದಿನ ಕರ್ನಾಟಕ ಲಾಕ್‌ಡೌನ್: ಏನಿರುತ್ತೆ? ಏನಿರಲ್ಲ? ಇಲ್ಲಿದೆ ಮಾಹಿತಿ

ಸುಲಿಗೆಗೆ ಇಳಿದ ಖಾಸಗಿ ಬಸ್ ಸಂಸ್ಥೆಗಳು
ಹೌದು...ಇಂತಹ ಸಂದರ್ಭಗಳು ಖಾಸಗಿ ಬಸ್ ಸಂಸ್ಥೆಗಳಿಗೆ ಹಬ್ಬವಿದ್ದಂತೆ. ಸಿಕ್ಕಿದ್ದೇ ಸೀರುಂಡೆ ಎನ್ನುವಂತೆ ಟಿಕೆಟ್‌ ದರವನ್ನು ಭಾರೀ ಪ್ರಮಾಣದಲ್ಲಿ ಏರಿಕೆ ಮಾಡಿದೆ.

ಲಾಕ್‌ಡೌನ್ ಘೋಷಣೆಯಾಗಿರುವುದರಿಂದ ಇಂದು (ಸೋಮವಾರ) ಬಿಟ್ರೆ ನಾಳೆಯಿಂದ (ಏ.27) ಸಾರ್ವಜನಿಕ ಸಾರಿಗೆ ಇಲ್ಲ. ಇದರಿಂದ ಅನಿರ್ವಾಯವಾಗಿ ಜನರು ಊರಿಗೆ ತೆರಳಬೇಕಾದ ಪರಿಸ್ಥಿತಿ ಎದುರಾಗಿದೆ. ಇದೇ ಸಿಕ್ಕಿದ್ದೇ ಚಾನ್ಸ್ ಎಂದು ಖಾಸಗಿ ಬಸ್ ಸಂಸ್ಥೆಗಳು ಸುಲಿಗೆಗೆ ಇಳಿದಿವೆ. 500 ರೂ ಇದ್ದ ಟಿಕೆಟ್ ಬೆಲೆ 2000ಗೆ ಏರಿಕೆ ಮಾಡಿವೆ. ಇದನ್ನು ಹಗಲು ದರೋಡೆ ಎನ್ನದೇ ಮತ್ತೇನು ಎನ್ನಬೇಕು ಅಲ್ವೇ?