ಕನ್ನಡ ಚಿತ್ರರಂಗಕ್ಕೆ ಹಿಟ್ ಸಿನಿಮಾಗಳನ್ನು ನೀಡಿದ ಕಿರಣ್ ರಾಜ್, ಸಂತೋಷ್ ಆನಂದ್‌ರಾಮ್, ನರ್ತನ್, ಪವನ್ ಕುಮಾರ್, ತರುಣ್ ಸುಧೀರ್ ಸೇರಿದಂತೆ ಹಲವು ನಿರ್ದೇಶಕರ ಮುಂದಿನ ಸಿನಿಮಾ ಏನು? ಸ್ಯಾಂಡಲ್‌ವುಡ್‌ನ ಸದ್ಯದ ಸ್ಥಿತಿಯ ಕುರಿತ ವಿಶೇಷ ವರದಿ.
- Home
- News
- State
- Karnataka Latest News Live: ಗೆಲುವು ಕೊಟ್ಟ ನಿರ್ದೇಶಕರು ಕಾಣೆಯಾಗಿದ್ದಾರೆ - ಸ್ಯಾಂಡಲ್‌ವುಡ್‌ನಲ್ಲಿ ಏನಾಗುತ್ತಿದೆ?
Karnataka Latest News Live: ಗೆಲುವು ಕೊಟ್ಟ ನಿರ್ದೇಶಕರು ಕಾಣೆಯಾಗಿದ್ದಾರೆ - ಸ್ಯಾಂಡಲ್‌ವುಡ್‌ನಲ್ಲಿ ಏನಾಗುತ್ತಿದೆ?

ಬೆಂಗಳೂರು: ತಮಿಳುನಾಡಿಗೆ ನಿತ್ಯ 12000 ಕ್ಯು.ನಂತೆ 15 ದಿನ 16 ಟಿಎಂಸಿ ನೀರು ಹರಿಸುವಂತೆ ಆದೇಶ ನೀಡಿರುವ ಕಾವೇರಿ ನೀರು ನಿಯಂತ್ರಣ ಸಮಿತಿಯ ಶಿಫಾರಸು ವಿರೋಧಿಸಿ ಕಾವೇರಿ ಕೊಳ್ಳದ ರೈತರು ವಿವಿಧೆಡೆ ಮಂಗಳವಾರ ಪ್ರತಿಭಟನೆ ನಡೆಸಿದರು. ಮಂಡ್ಯದಲ್ಲಿ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ರೈತ ಸಂಘಟನೆಗಳ ಕಾರ್ಯಕರ್ತರು ಕೆಲ ಕಾಲ ರಸ್ತೆ ತಡೆ ನಡೆಸಿ, ಹೆದ್ದಾರಿ ಸಂಚಾರಕ್ಕೆ ಅಡ್ಡಿಪಡಿಸಿದರು. ಶ್ರೀರಂಗಪಟ್ಟಣದ ಕುವೆಂಪು ವೃತ್ತದಲ್ಲಿ ರೈತ ಸಂಘಟನೆಯ ಕಾರ್ಯಕರ್ತರು ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿದರು.
ಮದ್ದೂರಿನಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ, ರಾಜ್ಯ ರೈತ ಸಂಘದ ಕಾರ್ಯಕರ್ತರು ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
Karnataka Latest News Live 12 August 2026 ಗೆಲುವು ಕೊಟ್ಟ ನಿರ್ದೇಶಕರು ಕಾಣೆಯಾಗಿದ್ದಾರೆ - ಸ್ಯಾಂಡಲ್‌ವುಡ್‌ನಲ್ಲಿ ಏನಾಗುತ್ತಿದೆ?
Karnataka Latest News Live 12 August 2026 ಭಾರತೀಯ ರೈಲ್ವೆಯೊಂದಿಗೆ ಕೊಂಕಣ್ ರೈಲ್ವೆ ವಿಲೀನಕ್ಕೆ ವಿಘ್ನ - ಗೋವಾ ಒಪ್ಪಿಗೆ, ಮಹಾರಾಷ್ಟ್ರ, ಕರ್ನಾಟಕದಿಂದ ಕಂಡಿಷನ್!
ಕೊಂಕಣ ರೈಲ್ವೆ ಕಾರ್ಪೊರೇಶನ್ ಲಿಮಿಟೆಡ್ (KRCL) ಅನ್ನು ಸಂಪೂರ್ಣವಾಗಿ ತನ್ನ ಸುಪರ್ದಿಗೆ ಪಡೆಯಲು ಕೇಂದ್ರ ಸರ್ಕಾರ ಮುಂದಾಗಿದೆ. ಪ್ರಯಾಣಿಕರ ಸುರಕ್ಷತೆ ಮತ್ತು ಅಭಿವೃದ್ಧಿ ಕಾಮಗಾರಿಗಳನ್ನು ವೇಗಗೊಳಿಸುವುದು ಇದರ ಮುಖ್ಯ ಉದ್ದೇಶವಾಗಿದೆ.
Karnataka Latest News Live 12 August 2026 ಮಗಳಿಗಾಗಿ ತಂದೆಯ ಹೋರಾಟ, ಅಯ್ಯಪ್ಪ ಭಕ್ತನ ರೌದ್ರಾವತಾರ - ರವಿತೇಜ 'ಇರುಮುಡಿ' ಟ್ರೇಲರ್ ಹೇಗಿದೆ?
ಮಾಸ್ ಮಹಾರಾಜ ರವಿತೇಜ ನಟನೆಯ 'ಇರುಮುಡಿ' ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಕುತೂಹಲ ಕೆರಳಿಸಿರುವ ಈ ಟ್ರೇಲರ್, ರವಿತೇಜ ಅವರ ಮಾಮೂಲಿ ಮಾಸ್ ಮಸಾಲಾ ಸಿನಿಮಾಗಳಿಗಿಂತ ವಿಭಿನ್ನವಾಗಿದೆ ಅನ್ನೋದು ವಿಶೇಷ.
Karnataka Latest News Live 12 August 2026 ಚರಂಡಿಯೂ ಇಲ್ಲ, ಡಾಂಬರೂ ಇಲ್ಲ! - ಎಲೆಕ್ಟ್ರಾನಿಕ್ ಸಿಟಿಯ ಅನಂತನಗರದ ಕಳಪೆ ರಸ್ತೆಗೆ ಬಲಿಯಾಯ್ತು EPF ಉದ್ಯೋಗಿ ಜೀವ!
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಬಳಿ ಕೆಟ್ಟ ರಸ್ತೆಯಿಂದಾಗಿ ಬೈಕ್‌ನಿಂದ ಬಿದ್ದ ಕೇರಳ ಮೂಲದ ಯುವತಿ ಮೇಧಾ ಪೃಥ್ವಿರಾಜ್ ಮೇಲೆ ಗೂಡ್ಸ್ ವಾಹನ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಘಟನೆಯು ಅನಂತನಗರದ ರಸ್ತೆಗಳ ದುಸ್ಥಿತಿಯನ್ನು ಎತ್ತಿ ತೋರಿಸಿದೆ.
Karnataka Latest News Live 12 August 2026 ಸ್ಟೀಲ್ ಸಿಂಕ್ ಮೇಲಿನ ಕಲೆ, ಮಂಕು ಕ್ಷಣದಲ್ಲೇ ಹೋಗಬೇಕಾ? ಹೊಳಪು ತರಲು ಇಲ್ಲಿವೆ 6 ಸುಲಭ ಟಿಪ್ಸ್
Sink Cleaning Hacks: ಸ್ಟೇನ್‌ಲೆಸ್ ಸ್ಟೀಲ್ ಸಿಂಕ್ ಮಂಕಾಗಿ ಕಾಣಿಸುತ್ತಿದೆಯೇ? ಕಲೆ, ಖನಿಜಾಂಶ ಹಾಗೂ ಸ್ಕ್ರಾಚ್‌ಗಳಿಂದ ಸಿಂಕ್ ಹೊಳಪು ಕಳೆದುಕೊಳ್ಳದಂತೆ ಮಾಡಲು ಈ 6 ಸರಳ ಕ್ಲೀನಿಂಗ್ ಟಿಪ್ಸ್ ತಿಳಿಯಿರಿ.
Karnataka Latest News Live 12 August 2026 ಪ್ರಜ್ವಲ್ ರೇವಣ್ಣ ಜೈಲಲ್ಲಿ ಜಾಲಿ ಜಾಲಿ.. ಬಿಂದಾಸ್ ಆಗಿ ಫೋನ್‌ನಲ್ಲಿ ಮಾತಾಡೋ ವಿಡಿಯೋ ವೈರಲ್
ಪರಪ್ಪನ ಅಗ್ರಹಾರದ ಜೈಲಿನ ಬ್ಯಾರೆಕ್‌ನಲ್ಲಿ ಪ್ರಜ್ವಲ್ ರೇವಣ್ಣ ಮೊಬೈಲ್ ಫೋನ್‌ನಲ್ಲಿ ಧೈರ್ಯವಾಗಿ ಮಾತನಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಸಿಸಿಬಿ ದಾಳಿಯ ಬೆನ್ನಲ್ಲೇ ಈ ಆಘಾತಕಾರಿ ದೃಶ್ಯಾವಳಿಗಳು ಲಭ್ಯವಾಗಿದ್ದು, ಕರ್ತವ್ಯ ನಿರ್ಲಕ್ಷ್ಯ ತೋರಿದ ಜೈಲು ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಡಿಜಿಪಿ ಅಲೋಕ್ ಕುಮಾರ್ ಸೂಚಿಸಿದ್ದಾರೆ.
Karnataka Latest News Live 12 August 2026 'ಜೀವನ ನೋಡುವ ದೃಷ್ಟಿಕೋನವೇ ಬದಲಾಯ್ತು..' ಬೆಂಗಳೂರು ಬ್ಯೂಟಿ ಬಗ್ಗೆ ಯುವತಿಯ ಭಾವುಕ ಪೋಸ್ಟ್ ವೈರಲ್
ಕಂಟೆಂಟ್ ಕ್ರಿಯೇಟರ್ ಸುರುಚಿ, ಗುರುಗ್ರಾಮ್‌ನಿಂದ ಬೆಂಗಳೂರಿಗೆ ಸ್ಥಳಾಂತರಗೊಂಡಾಗ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಆರಂಭದಲ್ಲಿ ಒಂಟಿತನ ಮತ್ತು ಮನೆ ನೆನಪಿನಿಂದ ಬಳಲಿದ ಅವರು, ನಂತರ ಬೆಂಗಳೂರಿನ ಫಿಲ್ಟರ್ ಕಾಫಿ, ಹವಾಮಾನ ಮತ್ತು ಸ್ವತಂತ್ರ ಬದುಕನ್ನು ಪ್ರೀತಿಸಲು ಆರಂಭಿಸಿದ್ದಾರೆ.
Karnataka Latest News Live 12 August 2026 ಆಟಿ ಅಮಾವಾಸ್ಯೆ ವಿಶೇಷ! ಅಮೃತಕ್ಕೆ ಸಮಾನ ಹಾಲೆ ಮರದ ಕಷಾಯ.. ತುಳುನಾಡಿನಲ್ಲಿ ಇವತ್ತು ಇದನ್ನ ಕುಡಿಯೋದು ಯಾಕೆ?
ತುಳುನಾಡಿನಾದ್ಯಂತ ಪಾರಂಪರಿಕ 'ಪಾಲೆ' ಮರದ ತೊಗಟೆಯ ಕಷಾಯ ಮತ್ತು ಪಿತೃ ಕಾರ್ಯಗಳೊಂದಿಗೆ ಆಟಿ ಅಮಾವಾಸ್ಯೆಯನ್ನು ಆಚರಿಸಲಾಯಿತು. ವಿಶೇಷವೆಂದರೆ, ಇದೇ ಮೊದಲ ಬಾರಿಗೆ ಕೇರಳ ಸಮಾಜಂ ವತಿಯಿಂದ ಮಲ್ಪೆ ಕಡಲತೀರದಲ್ಲಿ ಕೇರಳ ಶೈಲಿಯ 'ಬಲಿತರ್ಪಣಂ' ಆಯೋಜಿಸಲಾಗಿತ್ತು.
Karnataka Latest News Live 12 August 2026 '2 ವರ್ಷದ ಮಗನನ್ನು ಹೊರಗೆ ನಿಲ್ಲಿಸಿ, ಲ್ಯಾಪ್‌ಟಾಪ್ ಕೊಟ್ಟು ಬಂದೆ..' ಲೇಆಫ್ ಬೆನ್ನಲ್ಲೇ ಆಫೀಸ್‌ನಲ್ಲಿ ಬೆಂಗಳೂರು ಉದ್ಯೋಗಿಗೆ ಕಹಿ ಅನುಭವ!
ಲೇಆಫ್ ಆದ ಬೆಂಗಳೂರಿನ ಉದ್ಯೋಗಿಯೊಬ್ಬರು, ಕಂಪನಿಯ ಲ್ಯಾಪ್‌ಟಾಪ್ ಹಿಂತಿರುಗಿಸಲು ತಮ್ಮ 2 ವರ್ಷದ ಮಗನೊಂದಿಗೆ ಕಚೇರಿಗೆ ಹೋದಾಗ ಅವಮಾನ ಎದುರಿಸಿದ್ದಾರೆ. ಮಗುವನ್ನು ಒಳಗೆ ಬಿಡದ ಈ ಘಟನೆಯು ಕಾರ್ಪೊರೇಟ್ ಜಗತ್ತಿನ ಸ್ವಾರ್ಥ ಸ್ವರೂಪವನ್ನು ಬಯಲು ಮಾಡಿದ್ದಾರೆ.
Karnataka Latest News Live 12 August 2026 ಕರ್ನಾಟಕದಲ್ಲಿ ಗುಟ್ಕಾ, ಪಾನ್ ಮಸಾಲಾ ಬ್ಯಾನ್! ರಾಜ್ಯ ಸರ್ಕಾರದಿಂದ ಖಡಕ್ ಆದೇಶ
ಕರ್ನಾಟಕ ಸರ್ಕಾರವು ಗುಟ್ಕಾ ಮತ್ತು ಪಾನ್ ಮಸಾಲಾ ಸೇರಿದಂತೆ ತಂಬಾಕು ಮತ್ತು ನಿಕೋಟಿನ್ ಉತ್ಪನ್ನಗಳ ತಯಾರಿಕೆ, ಸಂಗ್ರಹಣೆ, ಮಾರಾಟ ಹಾಗೂ ವಿತರಣೆಯನ್ನು ಒಂದು ವರ್ಷದ ಅವಧಿಗೆ ನಿಷೇಧಿಸಿದೆ. 'ವ್ಯಸನಮುಕ್ತ ಕರ್ನಾಟಕ' ನಿರ್ಮಾಣದ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಂಡಿದೆ.
Karnataka Latest News Live 12 August 2026 ಕನ್ನಡದ ಚೆಲುವೆಗೆ ಬಂಪರ್ ಚಾನ್ಸ್ - ಯಶ್, ಜೂ.ಎನ್‌ಟಿಆರ್ ಬಳಿಕ ರುಕ್ಮಿಣಿ ವಸಂತ್ ಮುಂದಿನ ಹೆಜ್ಜೆ ಏನು?
Rukmini Vasanth: ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಟಿ ರುಕ್ಮಿಣಿ ವಸಂತ್, ಇದೀಗ ಸಾಲು ಸಾಲು ಸಿನಿಮಾಗಳ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ.
Karnataka Latest News Live 12 August 2026 ನೆಟ್‌ವರ್ಕ್ ಕಂಪನಿಗಳ ಬುಡಕ್ಕೆ ತಂದಿಟ್ಟ ಪ್ರಜ್ವಲ್ ರೇವಣ್ಣ -ಏರ್‍ಟೆಲ್ ಕಂಪನಿಗೆ ಅಲೋಕ್ ಕುಮಾರ್ ಎಚ್ಚರಿಕೆ
ಜೈಲಿನ ಜಾಮರ್‌ಗಳನ್ನು ಮೀರಿ ಆಂಧ್ರ ಮೂಲದ 5ಜಿ ಸಿಮ್‌ಗಳನ್ನು ಅಕ್ರಮವಾಗಿ ಬಳಸುತ್ತಿರುವುದನ್ನು ಉಲ್ಲೇಖಿಸಿದ ಡಿಜಿಪಿ ಅಲೋಕ್ ಕುಮಾರ್, ಪ್ರಜ್ವಲ್ ರೇವಣ್ಣ ಮೊಬೈಲ್ ಪತ್ತೆ ಪ್ರಕರಣದಲ್ಲಿ ಏರ್‌ಟೆಲ್ ಸಂಸ್ಥೆಗೆ ಎಚ್ಚರಿಕೆ ನೀಡಿದ್ದಾರೆ ಮತ್ತು ಅವರನ್ನು 'ಸಹ ಆರೋಪಿ' ಎಂದು ಹೆಸರಿಸಲು ಸೂಚಿಸಿದ್ದಾರೆ.
Karnataka Latest News Live 12 August 2026 Fashion Mistakes - ವಯಸ್ಸಿಗಿಂತ ಚಿಕ್ಕವರಾಗಿ ಕಾಣಬೇಕಾ? ಈ ಫ್ಯಾಷನ್ ತಪ್ಪುಗಳನ್ನು ಮಾತ್ರ ಮಾಡಬೇಡಿ!
ನಾವು ಧರಿಸುವ ಬಟ್ಟೆ, ಆಯ್ಕೆ ಮಾಡಿಕೊಳ್ಳುವ ಬಣ್ಣ, ಆಭರಣ, ಶೂ ಹಾಗೂ ಮೇಕಪ್-ಇವೆಲ್ಲವೂ ನಮ್ಮ ಒಟ್ಟಾರೆ ಲುಕ್ ಮೇಲೆ ದೊಡ್ಡ ಪರಿಣಾಮ ಬೀರುತ್ತವೆ. ಕೆಲವೊಮ್ಮೆ ಫ್ಯಾಷನ್ ಬಗ್ಗೆ ಮಾಡುವ ಸಣ್ಣ ತಪ್ಪುಗಳೇ ನಮ್ಮ..
Karnataka Latest News Live 12 August 2026 ಸ್ಯಾಂಡಲ್‌ವುಡ್‌ನಲ್ಲಿ ಭೀಮನ ಅಮವಾಸ್ಯೆ ಕಳೆ ಹೆಚ್ಚಿಸಿದ ನಟಿ-ನಟಿಯರು!
ಭೀಮನ ಅಮಾವಾಸ್ಯೆಯ ಪ್ರಯುಕ್ತ ಸ್ಯಾಂಡಲ್‌ವುಡ್ ಹಾಗೂ ಕಿರುತೆರೆಯ ತಾರೆಯರು ತಮ್ಮ ಪತಿಯರ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸಿ, ಪಾದಪೂಜೆ ನೆರವೇರಿಸಿದ್ದಾರೆ. ನೆನಪಿರಲಿ ಪ್ರೇಮ್ ಪತ್ನಿ, ಉಗ್ರಂ ಮಂಜು ದಂಪತಿ ಸೇರಿದಂತೆ ಹಲವು ಸೆಲೆಬ್ರಿಟಿಗಳು ಸಂಪ್ರದಾಯಬದ್ಧವಾಗಿ ಹಬ್ಬ ಆಚರಿಸಿದ್ದಾರೆ.
Karnataka Latest News Live 12 August 2026 40 ವರ್ಷಗಳ ಕಲಾ ಪಯಣಕ್ಕೆ ತಾರಾ ಅನುರಾಧ - ನೆನಪುಗಳ ಹಾದಿಯಲ್ಲಿ ಭಾವುಕರಾದ ‘ತಾರಮ್ಮ’!
ಕನ್ನಡ ಚಿತ್ರರಂಗದಲ್ಲಿ ನಾಯಕಿಯಾಗಿ ಬೆಳ್ಳಿ ತೆರೆಗೆ ಕಾಲಿಟ್ಟು ನಾಲ್ಕು ದಶಕಗಳೇ ಕಳೆದಿವೆ. 1986ರ ಆಗಸ್ಟ್ 10ರಂದು ನಾಯಕಿಯಾಗಿ ಸಿನಿಪಯಣ ಆರಂಭಿಸಿದ್ದ ಹಿರಿಯ ನಟಿ ತಾರಾ ಅನುರಾಧ, ಇದೀಗ ಚಿತ್ರರಂಗದಲ್ಲಿ 40 ವರ್ಷಗಳನ್ನು ಪೂರೈಸಿದ್ದಾರೆ.
Karnataka Latest News Live 12 August 2026 ಪ್ರಜ್ವಲ್ ರೇವಣ್ಣಗೆ ಮೊದಲೇ ವಾರ್ನ್ ಮಾಡಿದ್ವಿ - ಅಲೋಕ್ ಕುಮಾರ್ ಬಿಚ್ಚಿಟ್ರು ಅಸಲಿ ಸತ್ಯ
ಎಚ್ಚರಿಕೆ ನೀಡಿದ ಹೊರತಾಗಿಯೂ ಪ್ರಜ್ವಲ್ ರೇವಣ್ಣ ಕಡ್ಡಾಯವಾದ ಬಿಳಿ ಸಮವಸ್ತ್ರ ಧರಿಸಲು ನಿರಾಕರಿಸುವ ಮೂಲಕ ಜೈಲಿನ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ ಎಂದು ಡಿಜಿಪಿ ಅಲೋಕ್ ಕುಮಾರ್ ಬಹಿರಂಗಪಡಿಸಿದ್ದಾರೆ. ಅವರ ಬ್ಯಾರೆಕ್‌ನಲ್ಲಿ ಮೊಬೈಲ್ ಪತ್ತೆಯಾದ ಸಿಸಿಬಿ ದಾಳಿಯ ಬೆನ್ನಲ್ಲೇ, ಓರ್ವ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ ಮತ್ತು ಜೈಲು ಎಸ್ಪಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ
Karnataka Latest News Live 12 August 2026 Chamarajanagara - ಹುಲಿ ಹಲ್ಲು, ಉಗುರು ಮಾರಾಟಕ್ಕೆ ಯತ್ನ; ಮೂವರ ಬಂಧನ
ಆರೋಪಿಗಳಿಂದ ನಾಲ್ಕು ಹುಲಿಯ ಕೋರೆ ಹಲ್ಲುಗಳು, ಎರಡು ದವಡೆ ಹಲ್ಲುಗಳು, ಒಂದು ಹುಲಿ ಉಗುರು ಹಾಗೂ ವನ್ಯಜೀವಿ ಅಂಗಾಂಗಗಳ ಸಾಗಣೆಗೆ ಬಳಸುತ್ತಿದ್ದ ಒಂದು ಆಟೋವನ್ನು ವಶಪಡಿಸಿಕೊಳ್ಳಲಾಗಿದೆ.
Karnataka Latest News Live 12 August 2026 ಪತ್ನಿ ಜೊತೆ ಜಗಳ, 6 ವರ್ಷದ ಮಗನ ನದಿಗೆ ಎಸೆದ ಅಪ್ಪ.. ಅಯ್ಯೋ ಪಾಪಿ..
ಪತ್ನಿಯ ಮೇಲಿನ ಕೋಪಕ್ಕೆ ತಂದೆಯೊಬ್ಬ ತನ್ನ ಆರು ವರ್ಷದ ಮಗುವನ್ನ ರಭಸವಾಗಿ ಹರಿಯುತ್ತಿದ್ದ ರಾವಿ ನದಿಗೆ ಎಸೆದು ಹೋದ ಘಟನೆ ಬೆಳಕಿಗೆ ಬಂದಿದೆ. ಅಷ್ಟಕ್ಕೂ ಆಗಿದ್ದೇನು ಅನ್ನೋ ವಿವರ ಈ ಸ್ಟೋರಿಯಲ್ಲಿದೆ..
Karnataka Latest News Live 12 August 2026 ಅರುಣ್ ಸಾಗರ್ ಪುತ್ರಿಗೆ ನಾಯಕಿ ಪಟ್ಟ - ಡಾಲಿ ಧನಂಜಯ ‘ಹೆಗ್ಗಣ ಮುದ್ದು’ಗೆ ರಿಲೀಸ್ ಡೇಟ್ ಫಿಕ್ಸ್
ಕನ್ನಡ ಚಿತ್ರರಂಗದಲ್ಲಿ ನಟನಾಗಿ ಮಾತ್ರವಲ್ಲದೆ ನಿರ್ಮಾಪಕರಾಗಿಯೂ ತಮ್ಮದೇ ಛಾಪು ಮೂಡಿಸಿರುವ ಡಾಲಿ ಧನಂಜಯ, ಇದೀಗ ಮತ್ತೊಂದು ವಿಭಿನ್ನ ಸಿನಿಮಾದೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ.
Karnataka Latest News Live 12 August 2026 700 ವರ್ಷ ಹಿಂದಿನ ಕಥೆ, 400ಕ್ಕೂ ಹೆಚ್ಚು ಜೂನಿಯರ್ ಆರ್ಟಿಸ್ಟ್ - ಶ್ರೀಮುರಳಿ ‘ಉಗ್ರಾಯುಧಮ್’ ಶೂಟಿಂಗ್ ಜೋರು!
ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಬಹುನಿರೀಕ್ಷಿತ ‘ಉಗ್ರಾಯುಧಮ್’ ಸಿನಿಮಾ ಇದೀಗ ಶೂಟಿಂಗ್ ಹಂತದಲ್ಲಿ ವೇಗ ಪಡೆದುಕೊಂಡಿದೆ. 700 ವರ್ಷಗಳ ಹಿಂದಿನ ಕಾಲಘಟ್ಟದ ಕಥೆಯನ್ನು ಒಳಗೊಂಡಿರುವ ಈ ಪೀರಿಯಡ್..