ಐಟಿ ಎಂಪ್ಲಾಯ್ಸ್ 14 ಗಂಟೆ ಎಂದರೆ ಇದು ಯಾವುದೋ ಇಂಡಸ್ಟ್ರಿ ಕಡೆಯಿಂದ ಡಿಮ್ಯಾಂಡ್ ಬಂದಿದೆ. ಐಟಿ ಎಂಪ್ಲಾಯ್ಸ್ ಜೊತೆ ಅಭಿಪ್ರಾಯ ಸಂಗ್ರಹ ಮಾಡಿದ್ದೇವೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದರು.

ಬೆಂಗಳೂರು (ಜು.22) ಮಾಹಿತಿ ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಆಧಾರಿತ ಸೇವೆಗಳು (ಐಟಿ ಮತ್ತು ಐಟಿಇಎಸ್‌) ಕ್ಷೇತ್ರದಲ್ಲಿ ದುಡಿಯುವ ಉದ್ಯೋಗಿಗಳ ಕೆಲಸದ ಅವಧಿಯನ್ನು ಹಾಲಿ 10 (9+1) ತಾಸುಗಳಿಂದ 14 (12+2) ತಾಸುಗಳಿಗೆ ಹೆಚ್ಚಿಸುವ ಪ್ರಸ್ತಾವಕ್ಕೆ ಕಾರ್ಮಿಕ ಸಂಘಟನೆಗಳು, ಉದ್ಯೋಗಿಗಳು ಹಾಗೂ ಕೆಲವು ರಾಜಕೀಯ ಮುಖಂಡರು ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕಾರ್ಮಿಕ ಸಚಿವ ಸಂತೋಷ್ ಲಾಡ್, ಐಟಿ ಎಂಪ್ಲಾಯ್ಸ್ 14 ಗಂಟೆ ಎಂದರೆ ಇದು ಯಾವುದೋ ಇಂಡಸ್ಟ್ರಿ ಕಡೆಯಿಂದ ಡಿಮ್ಯಾಂಡ್ ಬಂದಿದೆ. ಐಟಿ ಎಂಪ್ಲಾಯ್ಸ್ ಜೊತೆ ಅಭಿಪ್ರಾಯ ಸಂಗ್ರಹ ಮಾಡಿದ್ದೇವೆ. ಈ ವಿಚಾರದಲ್ಲಿ ಕೆಲವರು ಪರ ಇದ್ದಾರೆ ಇನ್ನು ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಅಂತಿಮವಾಗಿ ಏನು ಅನ್ನೋದು ತೀರ್ಮಾನ ಮಾಡಬೇಕು ಎಂದರು.

ಮುಡಾ ಹಗರಣ: ಭ್ರಷ್ಟಾಚಾರ ನಡೆದಿದೆಯೋ ಇಲ್ವೋ ವರದಿ ಬಂದಮೇಲೆ ಗೊತ್ತಾಗುತ್ತೆ -ಸಚಿವ ಸಂತೋಷ್ ಲಾಡ್

ಕೇಂದ್ರ ಬಜೆಟ್ ನಲ್ಲಿ ಕರ್ನಾಟಕಕ್ಕೆ ಹೆಚ್ಚಿನ ದುಡ್ಡು ಬೇಕು, ಅಭಿವೃದ್ದಿಗೆ ಹಣ ಬೇಕು, ನೀರಾವರಿಗೆ ದುಡ್ಡು ಬೇಕು, ನಮ್ಮ ಷೇರು ನಮಗೆ ಬೇಕು. ಕಾನೂನು ಪ್ರಕಾರ ನಮಗೆ ಏನೇನು ಬರಬೇಕು ಅದೆಲ್ಲವೂ ಬರಬೇಕು. ಪ್ರತಿ ಬಾರಿ ಪ್ರಧಾನ ಮಂತ್ರಿ ಮೋದಿ ಸುಪ್ರೀಂ ಆಗಿ ಟ್ರೀಟ್ ಮಾಡ್ತಾನೆ ಬರ್ತಿದ್ದಾರೆ. ಕರ್ನಾಟಕಕ್ಕೆ ಪ್ರತೀ ಬಾರಿ ಅನ್ಯಾಯ ಮಾಡ್ತಾನೇ ಬಂದಿದಾರೆ. ಈ ಬಾರಿಯೂ ರಾಜ್ಯಕ್ಕೆ ಒಂದಿಷ್ಟು ಕೊಡುಗೆ ಕೊಡಬೇಕು ಅಂತ ಸರ್ಕಾರ ಮತ್ತು ವೈಯಕ್ತಿಕವಾಗಿ ನಾನು ಮಾಡುತ್ತೇನೆ. ಎಂದರು.