ಸಾಮಾಜಿಕ ಭದ್ರತೆ ಪಿಂಚಣಿ ನೀಡುವಲ್ಲಿ ಕರ್ನಾಟಕವೇ ನಂ.1

ಸಾಮಾಜಿಕ ಭದ್ರತೆ ಯೋಜನೆಗಳ ಅಡಿ ಕರ್ನಾಟಕ ದೇಶದಲ್ಲೇ ಅತಿ ಹೆಚ್ಚು ಮಂದಿಗೆ ಪಿಂಚಣಿ ನೀಡುತ್ತಿದೆ. ಕರ್ನಾಟಕದಲ್ಲಿ 6.60 ಕೋಟಿ ಜನಸಂಖ್ಯೆಯಿದ್ದು, ಈ ಪೈಕಿ 77 ಲಕ್ಷ ಮಂದಿಗೆ ವೃದ್ಧಾಪ್ಯ, ವಿಧವಾ ವೇತನ, ಅಂಗವಿಕಲರ ವೇತನ ಸೇರಿ ವಿವಿಧ ಪಿಂಚಣಿಗಳನ್ನು ನೀಡುತ್ತಿದೆ: ಕಂದಾಯ ಸಚಿವ ಕೃಷ್ಣ ಬೈರೇಗೌಡ 

Karnataka is No.1 in India Providing Social Security Pension grg

ಸುವರ್ಣ ವಿಧಾನ ಪರಿಷತ್(ಡಿ.19):  ರಾಜ್ಯದಲ್ಲಿ ಸಾಮಾಜಿಕ ಭದ್ರತೆ ಯೋಜನೆಗಳ ಅಡಿ 77 ಲಕ್ಷ ಮಂದಿಗೆ ವರ್ಷಕ್ಕೆ 10,500 ಕೋಟಿ ರು. ಪಿಂಚಣಿ ನೀಡಲಾಗುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು. 

ಕಾಂಗ್ರೆಸ್ ಸದಸ್ಯ ಐವಾನ್ ಡಿಸೋಜಾ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸಾಮಾಜಿಕ ಭದ್ರತೆ ಯೋಜನೆಗಳ ಅಡಿ ಕರ್ನಾಟಕ ದೇಶದಲ್ಲೇ ಅತಿ ಹೆಚ್ಚು ಮಂದಿಗೆ ಪಿಂಚಣಿ ನೀಡುತ್ತಿದೆ. ಕರ್ನಾಟಕದಲ್ಲಿ 6.60 ಕೋಟಿ ಜನಸಂಖ್ಯೆಯಿದ್ದು, ಈ ಪೈಕಿ 77 ಲಕ್ಷ ಮಂದಿಗೆ ವೃದ್ಧಾಪ್ಯ, ವಿಧವಾ ವೇತನ, ಅಂಗವಿಕಲರ ವೇತನ ಸೇರಿ ವಿವಿಧ ಪಿಂಚಣಿ" ಗಳನ್ನು ನೀಡುತ್ತಿದೆ. ತಮಿಳುನಾಡಿನಲ್ಲಿ ಸುಮಾರು 9 ಕೋಟಿ ಜನಸಂಖ್ಯೆ ಇದ್ದು, 47 ಲಕ್ಷ ಮಂದಿಗೆ ಈ ಪಿಂಚಣಿ ನೀಡಲಾಗುತ್ತಿದೆ. ಕರ್ನಾಟಕ ಈ ಪಿಂಚಣಿಗಾಗಿಯೇ ವರ್ಷಕ್ಕೆ 10,500 ಕೋಟಿ ರು. ವೆಚ್ಚ ಮಾಡುತ್ತಿದೆ ಎಂದು ಮಾಹಿತಿ ನೀಡಿದರು.

ಈ ಯೋಜನೆಯಲ್ಲಿ ಹೂಡಿಕೆ ಮಾಡಿ ತಿಂಗಳಿಗೆ ಪಡೆಯಿರಿ 61,000 ರೂ ತೆರಿಗೆ ರಹಿತ ಪಿಂಚಣಿ!

ಕೇಂದ್ರ ಸರ್ಕಾರದ ಈ ಪಿಂಚಣಿಗಳಿಗೆ ಕೇವಲ 500 ಕೋಟಿ ರು. ಮಾತ್ರ ಅನುದಾನ ನೀಡುತ್ತಿದೆ. ಉಳಿದ 10 ಸಾವಿರ ಕೋಟಿ ರು. ರಾಜ್ಯ ಸರ್ಕಾರವೇ ಭರಿಸುತ್ತಿದೆ. ನಮ್ಮ ರಾಜ್ಯದಲ್ಲಿ ಕಟ್ಟಕಡೆಯ ವ್ಯಕ್ತಿಗೂ ಪಿಂಚಣಿ ತಲುಪುತ್ತಿದೆ. ಕೆಲ ಕಡೆ ಈ ಪಿಂಚಣಿ ಯೋಜನೆಗಳ ಬಗ್ಗೆ ಗೊತ್ತಿಲ್ಲದವರೂ ಇದ್ದಾರೆ. ಪಿಂಚಣಿ ನೀಡುವಲ್ಲಿ ಏನಾದರೂ ಸಮಸ್ಯೆಗಳಿದ್ದಲ್ಲಿ ಪರಿಶೀಲಿಸಿ ಪರಿಹರಿಸಲು ಕ್ರಮ ಕೈಗೊಳ್ಳುವುದಾಗಿ ಹೇಳಿದರು.

100 ರೂನಿಂದ ಆರಂಭಿಸಿ ಅಟಲ್ ಪೆನ್ಶನ್ ಮೂಲಕ ಪಡೆಯಿರಿ ಮಾಸಿಕ 5,000 ರೂ ಪಿಂಚಣಿ!

ನವದೆಹಲಿ: ಬದುಕಿನಲ್ಲಿ ಭದ್ರತೆ ಅತೀ ಮುಖ್ಯ. ಹೀಗಾಗಿ ಕೆಲಸ, ಉದ್ಯೋಗ, ಉದ್ಯಮದಲ್ಲಿ ತೊಡಗಿಸಿಕೊಂಡರೂ ಒಂದಷ್ಟು ಹೂಡಿಕೆ ಮಾಡುತ್ತಾರೆ. ಆದರೆ ಮಧ್ಯಮ  ವರ್ಗಕ್ಕೆ ಸಣ್ಣ ಮೊತ್ತ ಹೂಡಿಕೆ ಕೂಡ ಸವಾಲು. ಆದರೆ ಕೆಲ ವರ್ಷಗಳ ಬಳಿಕ ಪಶ್ಚಾತ್ತಾಪ ಪಡುತ್ತಾರೆ. ಭವಿಷ್ಯದಲ್ಲಿ ಅದರಲ್ಲೂ ಪ್ರಮುಖವಾಗಿ ನಿವೃತ್ತಿ ವೇಳೆ ಅಥವಾ 60 ವರ್ಷದ ಬಳಿಕ ಪ್ರತಿ ತಿಂಗಳು ಖರ್ಚಿನ ಆದಾಯ ಬರುತ್ತಿರಬೇಕು, ಯಾರನ್ನೂ ಅವಲಂಬಿತವಾಗಿರಬಾರದು ಅನ್ನೋದಾದರೇ ಕೇಂದ್ರ ಸರ್ಕಾರ ಜಾರಿಗೆ ತಂದ ಅಟಲ್ ಪೆನ್ಶನ್ ಯೋಜನೆ ಉತ್ತಮವಾಗಿದೆ. ನಿಮ್ಮ ಕೈಯಲ್ಲಿ ಎಷ್ಟು ಸಾಧ್ಯವೋ? ಅಂದರೆ 100 ರೂ, 200 ರೂ ಸೇರಿದಂತೆ ಒಂದು ಮೊತ್ತವನ್ನು ಪ್ರತಿ ತಿಂಗಳು ಹೂಡಿಕೆ ಮಾಡಿದರೆ ಸಾಕು, ನಿಗಧಿತ ಅವಧಿ ಬಳಿಕ ಪ್ರತಿ ತಿಂಗಳು ಗರಿಷ್ಠ 5,000 ರೂಪಾಯಿ ಪಿಂಚಣಿ ಪಡೆಯಬಹುದು.

ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡಿ ಪಿಂಚಣಿ ಪಡೆಯಲು ವಯಸ್ಸಿನ ಮಿತಿ ಕನಿಷ್ಠ 18 ವರ್ಷ, ಗರಿಷ್ಠ 40 ವರ್ಷ. ಪ್ರಮುಖವಾಗಿ ಬಡವರು, ಮಧ್ಯಮ ವರ್ಗದ ಜನರಿಗೆ ಈ ಯೋಜನೆ ಅತ್ಯುತ್ತಮವಾಗಿದೆ. ಕಾರಣ ತಿಂಗಳಿಗೆ 42 ರೂಪಾಯಿಯಂತೆ ಹೂಡಿಕೆ ಮಾಡಿದರೂ 1,000 ರೂಪಾಯಿ ಪಿಂಚಣಿ ಪಡೆಯಲು ಈ ಯೋಜನೆಯಲ್ಲಿ ಸಾಧ್ಯವಿದೆ. 

7 ಸಾವಿರ ರೂ ಉಳಿತಾಯ ಮಾಡಿ ನಿವೃತ್ತಿ ಬಳಿಕ ತಿಂಗಳಿಗೆ ಪಡೆಯಿರಿ 1.5 ಲಕ್ಷ ರೂ ಪೆನ್ಶನ್!

ಅಟಲ್ ಪೆನ್ಶನ್ ಯೋಜನೆ ಮೂಲಕ ಹೂಡಿಕೆ ಮಾಡಿದರೆ ತಿಂಗಳಿಗೆ 1,000 ರೂಪಾಯಿ, 2,000 ರೂಪಾಯಿ, 3,000 ರೂಪಾಯಿ, 4,000 ರೂಪಾಯಿ ಹಾಗೂ 5,000 ರೂಪಾಯಿ ಪಿಂಚಣಿ ಪಡೆಯಲು ಸಾಧ್ಯವಿದೆ. 60ನೇ ವಯಸ್ಸಿಗೆ ಪಿಂಚಣಿ ಮೊತ್ತ ಬರಲು ಆರಂಭಗೊಳ್ಳಲಿದೆ. ಅಟಲ್ ಪೆನ್ಶನ್ ಯೋಜನೆ ಮೂಲಕ ಹಣ ಹೂಡಿಕೆ ಮಾಡಿದ ವ್ಯಕ್ತಿ ಮೃತಪಟ್ಟರೆ, ಸಂಗಾತಿ ಅಂದರೆ ಪತಿ ಅಥವಾ ಪತ್ನಿ ಪಿಂಚಣಿ ಮೊತ್ತ ಪಡೆಯಲಿದ್ದಾರೆ.

ಕನಿಷ್ಠ 20 ವರ್ಷಗಳ ಕಾಲ ಹೂಡಿಕೆ ಮಾಡಬೇಕು. ವಿಶೇಷ ಅಂದರೆ ಪ್ರತಿ ತಿಂಗಳ ಮೊತ್ತ ಹೆಚ್ಚಿಲ್ಲ. 18ನೇ ವಯಸ್ಸಿಗೆ ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಆರಂಭಿಸಲು ಸಾಧ್ಯವಿದೆ. 1,000 ರೂಪಾಯಿ ಮಾಸಿಕ ಪಿಂಚಣಿಗೆ ಪ್ರತಿ ತಿಂಗಳು 42 ರೂಪಾಯಿ ಹೂಡಿಕೆ ಮಾಡಿಬೇಕು. ತಿಂಗಳು 84 ರೂಪಾಯಿ ಹೂಡಿಕೆ ಮಾಡಿದರೆ 2,000 ರೂಪಾಯಿ ಮಾಸಿಕ ಪಿಂಚಣಿ, 126 ರೂಪಾಯಿಗೆ 3,000 ರೂಪಾಯಿ ಪಿಂಚಣಿ, 168 ರೂಪಾಯಿಗೆ 4,000 ರೂಪಾಯಿ ಪಿಂಚಣಿ, 210 ರೂಪಾಯಿ ಹೂಡಿಕೆ ಮಾಡಿದರೆ 5,000 ರೂಪಾಯಿ ಮಾಸಿಕ ಪಿಂಚಣಿ ಸಿಗಲಿದೆ.18ನೇ ವಯಸ್ಸಿಗೆ ಹೂಡಿಕೆ ಆರಂಭಿಸಿದರೆ ಒಟ್ಟು 42 ವರ್ಷ ಹೂಡಿಕೆ ಮಾಡಿದರೆ ಅಂದರೆ ನಿಮ್ಮ 60ನೇ ವಯಸ್ಸಿಗೆ ಪಿಂಚಣಿ ಮೊತ್ತ ಬರಲು ಆರಂಭಗೊಳ್ಳಲಿದೆ.

Latest Videos
Follow Us:
Download App:
  • android
  • ios