ಬೆಂಗಳೂರು, (ಡಿ.3): ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಸರ್ಕಾರದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಈಗಾಗಲೇ ರೈತರ ಬೆಳೆ ಸಾಲ ಮನ್ನಾ ಮಾಡಿ ಘೋಷಣೆ ಮಾಡಿದ್ದಾರೆ.

ಆದರೆ, ಸಾಲ ಮನ್ನಾ ಘೋಷಣೆ ಮಾಡಿ ಐದು ತಿಂಗಳುಗಳು ಕಳೆದರೂ ರೈತರಿಗೆ ಮಾತ್ರ ಸಾಲ ಮನ್ನಾ ಆಗಿರುವ ಹಣ ಸಿಕ್ಕಿಲ್ಲ. ಮತ್ತೊಂದೆಡೆ ಸಾಲ ಮನ್ನಾ ಆಗಿದೆಯೋ ಇಲ್ಲವೋ ಎನ್ನುವ ಗೊಂದಲದಲ್ಲಿದ್ದಾರೆ.

ಇ ನ್ನುಬ್ಯಾಂಕುಗಳಿಂದ ಇದುವರೆಗೂ ರೈತರಿಗೆ ಯಾವುದೇ ಋಣಮುಕ್ತ ಪತ್ರ ಸಿಕ್ಕಿಲ್ಲ. ಇದೀಗ ರೈತರ ಸಾಲ ಮನ್ನಾ ವಿಷಯವಾಗಿ ಒಂದು ಹೆಜ್ಜೆ ಮುಂದೆ ಬಂದಿರುವ ಸರ್ಕಾರ ಎಲ್ಲರಿಗೂ ತಿಳಿಸಲು, ಯಾವೆಲ್ಲ ರೈತರ ಬೆಳೆ ಸಾಲ ಮನ್ನಾ ಆಗಿದೆ ಎಂಬುದನ್ನು ಒಂದು ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ.

ಯಾವೆಲ್ಲ ರೈತರ ಸಾಲ ಮನ್ನಾ ಆಗಿದೆ ಎಂಬುದನ್ನು ( http://clws.karnataka.gov.in/…/p…/pacsreports/DataEntry.aspx ) ಲಿಂಕ್​ ಮೂಲಕ ತಿಳಿದುಕೊಳ್ಳಬಹುದು. ಮೊದಲು ಈ ಲಿಂಕ್​ ಕ್ಲಿಕ್​ ಮಾಡಿ, ಅಲ್ಲಿ ನೀಡಿರುವ ಆಯ್ಕೆಗಳಲ್ಲಿ ಜಿಲ್ಲೆಯ ಹೆಸರನ್ನು ನಮೂದಿಸಿ, ಬ್ಯಾಂಕಿನ ಹೆಸರು ಮತ್ತು ಯಾವ ಶಾಖೆ ಎಂಬುದನ್ನು ಆಯ್ಕೆ ಮಾಡಿ.

ನಂತರ ಎಕ್ಸ್​ಪೋರ್ಟ್ ಮೇಲೆ ಕ್ಲಿಕ್ ಮಾಡಿ. ಆಗ ಆ ಶಾಖೆಯಲ್ಲಿ ಯಾವೆಲ್ಲ ರೈತರ ಸಾಲ ಮನ್ನಾ ಆಗಿದೆ ಎಂಬುದರ ಪಟ್ಟಿ ಕಾಣಿಸಿಕೊಳ್ಳುತ್ತದೆ. ಅಲ್ಲಿ ನಿಮ್ಮ ಹೆಸರು ಇದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಿ.

ಹಾಗಾದ್ರೆ ಏನ್ನೇಕೆ ತಡ ನೀವು ಕೂಡಾ ಆನ್ ಲೈನ್ ನಲ್ಲಿ ನಿಮ್ಮ ಸಾಲ ಮನ್ನಾ ಆಗಿರುವುದನ್ನು ಚೆಕ್ ಮಾಡಿಕೂಳ್ಳುವುದಕ್ಕೆ ಇಲ್ಲಿ ಕ್ಲಿಕ್ ಮಾಡಿ.