Asianet Suvarna News Asianet Suvarna News

ಪಕ್ಷದ ವರಿಷ್ಠರು ಕರೆದಿದ್ದಾರೆ ನಾನು ಸಿಎಂ ಡಿಸಿಎಂ ದೆಹಲಿಗೆ ಹೊರಟಿದ್ದೇವೆ: ಗೃಹ ಸಚಿವ

ನಮ್ಮ ಪಕ್ಷದ ನಾಯಕರು ದೆಹಲಿಗೆ ಕರೆದಿದ್ದಾರೆ. ನಾನು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ ಹೋಗುತ್ತಿದ್ದೇವೆ ಎಂದು ಗೃಹಸಚಿವ ಡಾ ಜಿ ಪರಮೇಶ್ವರ ತಿಳಿಸಿದರು.

karnataka home minister g parameshwar stats about governor prosecution against cm siddaramaiah rav
Author
First Published Aug 23, 2024, 11:26 AM IST | Last Updated Aug 23, 2024, 11:25 AM IST

ಬೆಂಗಳೂರು (ಆ.23): ನಮ್ಮ ಪಕ್ಷದ ನಾಯಕರು ದೆಹಲಿಗೆ ಕರೆದಿದ್ದಾರೆ. ನಾನು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ ಹೋಗುತ್ತಿದ್ದೇವೆ ಎಂದು ಗೃಹಸಚಿವ ಡಾ ಜಿ ಪರಮೇಶ್ವರ ತಿಳಿಸಿದರು.

ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು,  ನಾವೆಲ್ಲಾ ಸ್ವಯಂ ಪ್ರೇರಿತವಾಗಿ ಹೋಗ್ತಾ ಇದ್ದೀವಿ. ನನಗೆ ಇಲಾಖೆ ಕೆಲಸ ಕೂಡ ಇದೆ. ಮನೆಗಳಿಗೆ ಹಣ ಕೊಡಿ ಅಂತ ಕೇಳಿದ್ವಿ. ಅದರ ಬಗ್ಗೆ ಚರ್ಚೆ ಮಾಡಲು ಹೋಗ್ತಾ ಇದ್ದೀವಿ. ನಾವ್ಯಾರು ಮೂಡಾ ವಿವರ ಕೊಡಲು ಹೋಗ್ತಾ ಇಲ್ಲ ಎಂದರು. 

ರಾಜ್ಯಪಾಲರಿಗೆ ಬೆದರಿಕೆ ಇರೋ ವಿಚಾರ ನನಗೆ ಗೊತ್ತಿಲ್ಲ: ಗೃಹ ಸಚಿವ

ಸಿಎಂ ಡಿಸಿಎಂ ಅಜೆಂಡಾ ಏನು ಅನ್ನೋದು ನನಗೆ ಗೊತ್ತಿಲ್ಲ. ನಾಯಕರು ಇಲ್ಲಿ ಬಂದಾಗಲೇ ಎಲ್ಲವನ್ನು ಹೇಳಿದ್ದೆವು. ನಾವು ಇಂಡಿಯಾ ಅಲಯನ್ಸ್ ನಲ್ಲಿ ಇದ್ದೀವಿ. ಇಂಡಿಯಾ ಒಕ್ಕೂಟದ ಹೋರಾಟದ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡತ್ತೆ ಎಂದರು. ಇದೇ ವೇಳೆ ರಾಜ್ಯಪಾಲರ ವಿಚಾರ ಪ್ರಸ್ತಾಪಿಸಿದ ಸಚಿವರು, ಸ್ವಾಭಾವಿಕವಾಗಿ ಸರ್ಕಾರ ರಾಜ್ಯಪಾಲರಿಗೆ ಹೊಂದಾಣಿಕೆ ಇಲ್ಲದೆ ಇದ್ದರೆ ಇಂತಹ ಬೆಳವಣಿಗೆ ನಡೆಯುತ್ತೆ. ಒಂದೆರಡು ಬಿಲ್ ಕ್ಲಾರಿಫಿಕೆಷನ್ ಕೇಳಿದ್ದು ಬಿಟ್ರೆ ಹೀಗೆ ಸಾರಾಸಗಟಾಗಿ ಬಿಲ್ ವಾಪಸ್ ಕಳಿಸಿರಲಿಲ್ಲ.  ಸಾಮಾನ್ಯ ಬಿಲ್ ನೂ ವಾಪಸ್ ಕಳಿಸಿದ್ದಾರೆ. ನಮ್ಮ ಸರ್ಕಾರದ ವಿರುದ್ಧವಾಗಿ ರಾಜ್ಯಪಾಲರು ಇದ್ದಾರೆ ಅನ್ನೋದು ಇದರಿಂದ ಸ್ಪಷ್ಟವಾಗುತ್ತೆ ಎಂದರು.

ಕ್ಯಾಬಿನೆಟ್‌ನಲ್ಲಿ ಜಿಂದಾಲ್‌ಗೆ ಜಾಗ ಕೊಡುವ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಸಚಿವರು, ಹಿಂದೆ ನಾವು ವಿರೋಧ ಮಾಡಿದ್ದು ನಿಜ. ಕೆಲವು ಪ್ರಶ್ನೆಗಳನ್ನ ನಾವು ಕೇಳಿದ್ದೆವು. ಅದಕ್ಕೆ ಕ್ಲಾರಿಫಿಕೇಷನ್ ಕೂಡ ಸಿಕ್ಕಿದೆ. ಕೋರ್ಟ್ ಕೂಡ ಆದೇಶ ಮಾಡಿದೆ. ಬೆಲೆಯಲ್ಲೂ ಕೂಡ ಒಂದಿಷ್ಟು ಕ್ಲಾರಿಟಿ ಸಿಕ್ಕಿದೆ. ಗ್ಲೋಬಲ್ ಇನ್ವೆಸ್ಟರ್ ಮಾಡ್ತೀವಿ. ಪ್ರಪಂಚದಾದ್ಯಂತ ಹಲವು ಕಂಪೆನಿಗಳು ಇದರಲ್ಲಿ ಭಾಗಿಯಾಗ್ತಾರೆ. ಒಂದಿಷ್ಟು ವಿನಾಯಿತಿಗಳನ್ನ ಅವರಿಗೆ ಕೊಡ್ತೀವಿ.  ನೀರು, ಜಾಗ, ವಿದ್ಯುತ್ ಹೀಗೆ ಒಂದಿಷ್ಟು ವಿನಾಯಿತಿ ಇರುತ್ತದೆ. ಇಲ್ಲಿ ಇರೋವ್ರನ್ನ ಉಳಿಸಿಕೊಂಡು ಹೊಸಬರನ್ನೂ ತರಬೇಕಾಗಿದೆ. ನಾವು ಒಂದಿಷ್ಟು ಪ್ರೋತ್ಸಾಹ ಕೊಡದೇ ಇದ್ರೆ ಹೇಗೆ. ಡಿಸ್ಕರೇಜ್ ಮಾಡಿದ್ರೆ ರಾಜ್ಯ ಬಿಟ್ಟು ಹೋಗ್ತಾರೆ. ತಮಿಳುನಾಡು ಆಂಧ್ರದಲ್ಲಿ ಫ್ರೀ ಲ್ಯಾಂಡ್ ಕೊಡ್ತಾರೆ ನಾವು ಕೊಟ್ಟಿಲ್ಲ ಅಂದ್ರೆ ಅವ್ರು ಬಳಿ ಹೋಗ್ತಾರೆ. ಹಿಂದೆ ಒಂದಿಷ್ಟು ಘಟನೆ ನಡೆದಾಗ ಕಂಪನಿಗಳು ಬಿಟ್ಟು ಹೋಗ್ತಿನಿ ಅಂದ್ರು. ಹಾಗಾಗಿ ತೀರ್ಮಾನ ಮಾಡಿದ್ದೇನೆ ಎಂದರು.

ರಾಜ್ಯಪಾಲರ ಪ್ರಾಸಿಕ್ಯೂಷನ್ ಅನುಮತಿಯಿಂದ ಸರ್ಕಾರ ಸಲ್ಪ ಶೇಕ್ ಆಗಿರೋದು ನಿಜ: ಸಚಿವ ಪರಮೇಶ್ವರ್

ಇನ್ನು ಬಿಜೆಪಿ ಅವಧಿಯ ಹಗರಣ ತನಿಖೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಹಿಂದಿನ ಸರ್ಕಾರದ ಸುಮಾರು ಹಗರಣಗಳು ಬೆಳಕಿಗೆ ಬಂದಿವೆ. ಒಂದೊಂದಾಗಿ ತನಿಖೆ ಮಾಡಲು ಮುಂದಾಗುತ್ತೇವೆ. ಒಂದು ಹಂತ ತಲುಪಿದಾಗ ತನಿಖೆ ಮಾಡಿ ಚಾರ್ಜ್ ಶೀಟ್ ಹಾಕಿದ್ದೇವೆ. ನಿನ್ನೆ ಕೂಡ ಒಂದು ಚಾರ್ಜ್ ಶೀಟ್ ಹಾಕಿದ್ದೇವೆ. ಹಂತ ಹಂತವಾಗಿ ಎಲ್ಲವೂ ತನಿಖೆ ನಡೆಸುವ ಬಗ್ಗೆ ಸಚಿವರು ಸುಳಿವು ನೀಡಿದರು.

Latest Videos
Follow Us:
Download App:
  • android
  • ios