Asianet Suvarna News Asianet Suvarna News

ರಾಜ್ಯಪಾಲರ ಪ್ರಾಸಿಕ್ಯೂಷನ್ ಅನುಮತಿಯಿಂದ ಸರ್ಕಾರ ಸಲ್ಪ ಶೇಕ್ ಆಗಿರೋದು ನಿಜ: ಸಚಿವ ಪರಮೇಶ್ವರ್

ರಾಜ್ಯಪಾಲರ ಪ್ರಾಸಿಕ್ಯೂಷನ್ ಅನುಮತಿಯಿಂದ ಸರ್ಕಾರ ಸ್ವಲ್ಪಮಟ್ಟಿಗೆ ಶೇಕ್ ಆಗಿರುವುದು ನಿಜ. ಇಲ್ಲ ಎಂದು ಹೇಳಿದರೆ ನಾನು ಸುಳ್ಳು ಹೇಳಿದಂತಾಗುತ್ತದೆ. ಆದರೆ ಇದನ್ನು ಕಾನೂನು ಹಾಗೂ ರಾಜಕೀಯ ಹೋರಾಟದಿಂದಲೇ ಎದುರಿಸುತ್ತೇವೆ ಎಂದುಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. 
 

It is true that government has been shaken by Governors prosecution permission Says Minister Dr G Parameshwar gvd
Author
First Published Aug 19, 2024, 12:49 PM IST | Last Updated Aug 19, 2024, 12:49 PM IST

ಬೆಂಗಳೂರು (ಆ.19): ರಾಜ್ಯಪಾಲರ ಪ್ರಾಸಿಕ್ಯೂಷನ್ ಅನುಮತಿಯಿಂದ ಸರ್ಕಾರ ಸ್ವಲ್ಪಮಟ್ಟಿಗೆ ಶೇಕ್ ಆಗಿರುವುದು ನಿಜ. ಇಲ್ಲ ಎಂದು ಹೇಳಿದರೆ ನಾನು ಸುಳ್ಳು ಹೇಳಿದಂತಾಗುತ್ತದೆ. ಆದರೆ ಇದನ್ನು ಕಾನೂನು ಹಾಗೂ ರಾಜಕೀಯ ಹೋರಾಟದಿಂದಲೇ ಎದುರಿಸುತ್ತೇವೆ ಎಂದುಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. 

ರಾಜ್ಯಪಾಲರು ರಾಜಕೀಯ ಕಾರಣಕ್ಕೆ ಇದನ್ನೆಲ್ಲಾ ಮಾಡುತ್ತಿದ್ದಾರೆ.ರಾಜ್ಯಪಾಲರಕಚೇರಿಯೇ ದುರ್ಬಳಕೆಯಾಗುತ್ತದೆ. ಸರ್ಕಾರ ಅಸ್ಥಿರಗೊಳಿಸುವ ಈ ಹುನ್ನಾರದ ವಿರುದ್ಧ ಕಾನೂನು ಹಾಗೂ ರಾಜಕೀಯ ಹೋರಾಟಕ್ಕೆ ಸಂಪುಟದಲ್ಲಿ ನಿರ್ಧರಿಸಿದ್ದೇವೆ. ನಾವ್ಯಾರ ರೂ ಬಿಜೆಪಿ ಹುನ್ನಾರಕ್ಕೆ ಬಲಿಯಾಗೋದು ಬೇಡ ಎಂದು ತೀರ್ಮಾನಿಸಿದ್ದೇವೆ ಎಂದು ಹೇಳಿದರು.  ನಡೆಸಲು ಜಿಲ್ಲೆ, ತಾಲೂಕುಗಳಲ್ಲಿ ನಮ್ಮ ಕಾರ್ಯಕರ್ತರು ಹೋರಾಟಕ್ಕೆ ಇಳಿಯುವ ಅನಿವಾರ್ಯತೆ ಬಂದಿದೆ.ಬಿಜೆಪಿಯವರಿಗೆ ರಾಜಕೀಯವಾಗಿ ಉತ್ತರಕೊಡಲು ರಾಜಕೀಯಹೋರಾಟವೇ ಮಾಡಬೇಕು. 

ಹೀಗಾಗಿ ಕೆಪಿಸಿಸಿ ಅಧ್ಯಕ್ಷರು ರಾಜ್ಯಾದ್ಯಂತ ಶಾಂತಿಯುತ ಪ್ರತಿಭಟನೆ ಕರೆ ಕೊಟ್ಟಿದ್ದಾರೆ. ಸೋಮವಾರದಿಂದ ರಾಜ್ಯದಲ್ಲಿ ಪ್ರತಿಭಟನೆ ಮಾಡಲಾಗುತ್ತದೆ ಎಂದು ತಿಳಿಸಿದರು. ರಾಜ್ಯಪಾಲರ ಕ್ರಮದ ವಿರುದ್ಧ ಕಾನೂನು ಹೋರಾಟ ನಡೆಯಲಿದೆ. ಇದರ ಹೊರತಾಗಿಯೂ ನ್ಯಾಯಾಲಯ ತನಿಖೆಗೆ ನೀಡಿದರೆ ಲೋಕಾಯುಕ್ತದಲ್ಲೇ ಅರ್ಜಿದಾರರು ದೂರು ಕೊಟ್ಟಿರುವುದರಿಂದ ತನಿಖೆಯನ್ನೂ ಲೋಕಾಯುಕ್ತಕ್ಕೇ ಕೊಡುವ ಸಾಧ್ಯತೆ ಇದೆ ಎಂದು ಮಾಹಿತಿ ನೀಡಿದರು.

ದಿನ ಬೆಳಗ್ಗೆ 6 ಗಂಟೆಗೆ ಹಿಂದಿ ಕ್ಲಾಸ್‌ಗೆ ಹೋಗ್ತಿನಿ, 6 ತಿಂಗಳಲ್ಲಿ ಮಾತಾಡ್ತೀನಿ: ಸಂಸದ ಸೋಮಣ್ಣ

ದಾಖಲೆಗಳು ಇಲ್ಲದೇ ಪ್ರಾಸಿಕ್ಯೂಷನ್: ಭ್ರಷ್ಟಾಚಾರ ನಿರ್ಮೂಲನೆ ಕಾಯ್ದೆಯ ಸೆಕ್ಷನ್ 17-ಎ ಅಡಿ ಯಾರ್ಯಾರಿಗೆ ಹೇಗೆ ಕ್ರಮ ತೆಗೆದುಕೊಳ್ಳಬೇಕು ಎಂಬುದನ್ನು ಕೇಂದ್ರವೇ ವ್ಯಾಖ್ಯಾನಿಸಿದೆ. ಮುಖ್ಯ ಮಂತ್ರಿಗಳಿಗೆ ಯಾರು, ಸಚಿವರಿಗೆ ಯಾರು ಅನುಮತಿ ಕೇಳಬೇಕು ಎಂಬುದನ್ನು ಸ್ಪಷ್ಟಪಡಿಸಿದೆ. ರಾಜ್ಯಪಾಲರು ಈ ಯಾವುದನ್ನೂ ಗಣನೆಗೆ ತೆಗೆದುಕೊಂಡಿಲ್ಲ. ದಾಖಲೆ ಇಲ್ಲದೇ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿದ್ದಾರೆ. ನಮ್ಮ ಸಚಿವ ಸಂಪುಟದ ತೀರ್ಮಾನವನ್ನೂ ತಿರಸ್ಕರಿಸಿದ್ದಾರೆ ಎಂದು ಗೃಹ ಸಚಿವ ಪರಮೇಶ್ವರ್ ಅವರು ಅಸಮಾಧಾನ ವ್ಯಕ್ತಪಡಿಸಿದರು.

Latest Videos
Follow Us:
Download App:
  • android
  • ios