ಸದನದಲ್ಲಿ ಉತ್ತರ ನೀಡುವಾಗ ಸಾಕ್ಷ್ಯಾಧಾರ ಇರಲಿಲ್ಲ: ಗೃಹ ಸಚಿವ ಜ್ಞಾನೇಂದ್ರ
ಪಿಎಸ್‌ಐ ಪರೀಕ್ಷೆ ಹಗರಣಕ್ಕೆ ಸಂಬಂಧಿಸಿದಂತೆ ಎಡಿಜಿಪಿ ಅಮೃತ್ ಪಾಲ್ ಬಂಧನದಿಂದ ಸರ್ಕಾರಕ್ಕೆ ಮುಜುಗರ ಆಗುವ ಪ್ರಶ್ನೆಯೇ ಇಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಬೆಂಗಳೂರು (ಜು.05): ಪಿಎಸ್‌ಐ ಪರೀಕ್ಷೆ ಹಗರಣಕ್ಕೆ ಸಂಬಂಧಿಸಿದಂತೆ ಎಡಿಜಿಪಿ ಅಮೃತ್ ಪಾಲ್ ಬಂಧನದಿಂದ ಸರ್ಕಾರಕ್ಕೆ ಮುಜುಗರ ಆಗುವ ಪ್ರಶ್ನೆಯೇ ಇಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. ಸೋಮವಾರ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಸದನದಲ್ಲಿ ಉತ್ತರ ನೀಡುವ ವೇಳೆ ಆಗ ಸೂಕ್ತ ಸಾಕ್ಷ್ಯಾಧಾರ ಇರಲಿಲ್ಲ. ತಿದ್ದಿದ್ದ ಒಎಂಆರ್ ಶಿಟ್ ದೊರಕಿದ ತಕ್ಷಣ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಉನ್ನತ ತನಿಖೆಗಾಗಿ ಸಿಐಡಿಗೆ ನೀಡಲಾಯಿತು. ಎರಡು ಗಂಟೆಯಲ್ಲಿ ಓರ್ವ ಆರೋಪಿಯನ್ನು ಬಂಧಿಸಲಾಯಿತು ಎಂದರು.
ಅತ್ಯಂತ ಪಾರದರ್ಶಕವಾಗಿ ವಿಚಾರಣೆಯಾಗಿದೆ. ಸರ್ಕಾರದ ಯಾವುದೇ ಹಸ್ತಕ್ಷೇಪ ಇಲ್ಲದೆ ವಿಚಾರಣೆ ನಡೆದಿದೆ. ಪರೀಕ್ಷೆಯಲ್ಲಾಗುವ ಅಪರಾಧ ತಡೆಗಟ್ಟಲು ತನಿಖೆ ನಡೆಸಿ ಪ್ರಕರಣದ ರೂವಾರಿಗಳನ್ನು ಪತ್ತೆ ಹಚ್ಚುವ ಕೆಲಸ ನಡೆಯುತ್ತಿದೆ. ಪಿಎಸ್‌ಐ ಪರೀಕ್ಷೆಯಲ್ಲಿ ಅಕ್ರಮದ ಬಗ್ಗೆ ಸಾಕ್ಷ್ಯಾಧಾರ ಸಿಕ್ಕಿದ ಬಳಿಕ ತನಿಖೆ ನಡೆದಿದ್ದು, ಹಲವರನ್ನು ಬಂಧಿಸಲಾಗಿದೆ. ಈಗ ಹಿರಿಯ ಪೊಲೀಸ್ ಅಧಿಕಾರಿ ಅಮೃತ್ ಪಾಲ್ ಬಂಧನವಾಗಿದೆ ಎಂದು ಹೇಳಿದರು. ವರ್ಷಗಟ್ಟಲೇ ಕಷ್ಟಪಟ್ಟು ಓದಿದ ವಿದ್ಯಾರ್ಥಿಗಳು ಬೀದಿಯಲ್ಲಿ ನಿಂತಿದ್ದಾರೆ. ಅವರ ಬಾಯಿಗೆ ಮಣ್ಣು ಹಾಕುವ ಕೆಲಸವನ್ನು ಮಾಡಲಾಗಿದೆ.
ಅಗ್ನಿಶಾಮಕಕ್ಕೆ ಈ ವರ್ಷ 2000 ಜನ ನೇಮಕ: ಗೃಹ ಸಚಿವ ಜ್ಞಾನೇಂದ್ರ
ಇನ್ನು ಮುಂದೆ ದುಡ್ಡು ಕೊಟ್ಟರೆ ಜೈಲಿಗೆ ಹೋಗಲಾಗುತ್ತದೆ ಎಂಬುದನ್ನು ನಮ್ಮ ಸರ್ಕಾರ ತೋರಿಸಿಕೊಟ್ಟಿದೆ. ಸದನದಲ್ಲಿ ಉತ್ತರ ನೀಡುವ ವೇಳೆ ಆಗ ಸೂಕ್ತ ಸಾಕ್ಷ್ಯಾಧಾರ ಇರಲಿಲ್ಲ. ತಿದ್ದಿದ್ದ ಒಎಂಆರ್ ಶಿಟ್ ದೊರಕಿದ ತಕ್ಷಣ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಉನ್ನತ ತನಿಖೆಗಾಗಿ ಸಿಐಡಿಗೆ ನೀಡಲಾಯಿತು. ಎರಡು ಗಂಟೆಯಲ್ಲಿ ಓರ್ವ ಆರೋಪಿಯನ್ನು ಬಂಧಿಸಲಾಯಿತು. ಸತ್ಯಾಸತ್ಯತೆ ತಿಳಿಯುವವರೆಗೆ ಹೇಗೆ ಉತ್ತರ ನೀಡಲು ಸಾಧ್ಯ? ನಾನು ಉತ್ತರ ನೀಡುವ ದಿನ ತನಿಖೆಗೆ ಆದೇಶ ಆಗಿರಲಿಲ್ಲ ಎಂದರು. ರಾಜೀನಾಮೆಗೆ ಕಾಂಗ್ರೆಸ್ ಒತ್ತಾಯಿಸಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಹಳ ವರ್ಷ ಸರ್ಕಾರ ನಡೆಸಿದವರು.
Udaipur Murder: ಬುದ್ದಿ ಜೀವಿಗಳ ನಾಲಿಗೆಗೆ ಲಕ್ವಾ ಹೊಡೆದಿದೆಯಾ?: ಗೃಹ ಸಚಿವ
ನಾನು ಮೊದಲ ಬಾರಿ ಸಚಿವನಾಗಿದ್ದೇನೆ. 2014-15ರಲ್ಲಿ ಎಪಿಪಿ ನೇಮಕಾತಿಯಲ್ಲಿ ನಡೆದ ಅಕ್ರಮವನ್ನು ಪತ್ತೆ ಹಚ್ಚಲಿಲ್ಲ, ಬಂಧನವೂ ಆಗಿರಲಿಲ್ಲ. ಆದರೆ, ನಮ್ಮ ಸರ್ಕಾರ ಬಂದ ಬಳಿಕ ಕ್ರಮ ಕೈಗೊಂಡೆವು. ಪ್ರಶ್ನೆ ಪತ್ರಿಕೆ ಸೋರಿಕೆ ಕಾಂಗ್ರೆಸ್ ಅವಧಿಯಲ್ಲಿ ನಡೆದಿತ್ತು. ನಾನು ಸಚಿವನಾಗಿ ಅಧಿಕಾರ ಸ್ವೀಕಾರ ಮಾಡಿದ ಒಂದು ತಿಂಗಳಲ್ಲಿ ಪರೀಕ್ಷೆ ನಡೆದಿದೆ. ನಾನು ಬಂಧ ಬಳಿಕ ನೇಮಕಾತಿಯಾಗಿಲ್ಲ. ಅವರ ಕಾಲದ ಪೊಲೀಸ್ ಅಧಿಕಾರಿಗಳು ನೇಮಕಾರಿ ಮಾಡಿದ್ದಾರೆ. ರಾಜೀನಾಮೆ ಕೇಳುವ ಮೊದಲು ಇದನ್ನು ತಿಳಿದುಕೊಳ್ಳಬೇಕು ಎಂದು ತಿರುಗೇಟು ನೀಡಿದರು. ಇನ್ನು, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಸಾಕ್ಷ್ಯಾಧಾರ ಮುಚ್ಚಿಡಬೇಡಿ, ಸಾಕ್ಷ್ಯಾಧಾರ ಕೊಡಿ ಎಂದಿದ್ದೆವು. ಆದರೆ, ಕೊಡಲಿಲ್ಲ ಎಂದು ತಿಳಿಸಿದರು.