Udaipur Murder; ಬುದ್ದಿ ಜೀವಿಗಳ ನಾಲಿಗೆಗೆ ಲಕ್ವಾ ಹೊಡೆದಿದೆಯಾ? :ಗೃಹ ಸಚಿವ
ರಾಜಸ್ಥಾನದ ಉದಯಪುರದಲ್ಲಿ ನಡೆದ ಟೈಲರ್ ಕೊಲೆ ಪ್ರಕರಣವನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಖಂಡಿಸಿದ್ದು, ಈ ಕೊಲೆಯನ್ನು ಎಲ್ಲರೂ ಖಂಡಿಸಬೇಕು ಎಂದಿದ್ದಾರೆ.
ಬೆಂಗಳೂರು (ಜೂನ್ 29): ರಾಜಸ್ಥಾನದ ಉದಯಪುರದಲ್ಲಿ ನಡೆದ ಟೈಲರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿದರುವ ಗೃಹ ಸಚಿವ ಆರಗ ಜ್ಞಾನೇಂದ್ರ ಮೀಡಿಯಾದಲ್ಲಿ ನೋಡಿದ್ದೇನೆ, ಅದು ನೊಡಬಾರದ ದೃಶ್ಯ. ಅತ್ಯಂತ ಕ್ರೂರ ಹಾಗೂ ಅಮಾನವೀಯವಾಗಿ ಅವರು ಎನ್ ಮಾಡ್ಲಿಕೆ ಸಾಧ್ಯ ಅಂತ ತೋರ್ಸಿದ್ದಾರೆ. ಅವರು ಮನುಷ್ಯರು ಹೌದೋ ಅಲ್ವೋ ಎಂಬ ಅನುಮಾನ ಶುರುವಾಗಿದೆ. ಈ ರೀತಿಯ ರಾಕ್ಷಸಿ ಪೈಶಾಚಿಕ ಕೃತ್ಯ ಮಾಡುವಂತವರಿಗೆ ಶಿಕ್ಷ ಕೊಡಿಸುವ ಬಗ್ಗೆ ಯೋಚನೆ ಮಾಡಬೇಕು. ಎಲ್ಲಾ ವರ್ಗದವರು ಈ ತಪ್ಪನ್ನು ಖಂಡಿಸಬೇಕು. ಕೇವಲ ಒಂದು ವರ್ಗದವರ ಪರ ನಿಲ್ಲೋದು, ಇನ್ನೊಂದು ವರ್ಗದ ವಿರುದ್ಧ ಮಾತಾಡೋದು ಅಪಾಯಕಾರಿ. ಈ ಕೊಲೆಯನ್ನು ಎಲ್ಲಾರೂ ಖಂಡಿಸಬೇಕು ಎಂದಿದ್ದಾರೆ.
ರಾಜಸ್ಥಾನದ ಕಾಂಗ್ರೆಸ್ ಸರ್ಕಾರ ಖಂಡಿತವಾಗಿ ಇದಕ್ಕೆ ಉತ್ತರ ಕೊಡಬೇಕು. ಹಂತಕರು ಅದೇ ರಾಜ್ಯದಲ್ಲಿ ಬೆಳೆದಿದ್ದಾರೆ. ಆ ಶಕ್ತಿಗಳನ್ನು ಮಟ್ಟ ಹಾಕುವಲ್ಲಿ ಸರ್ಕಾರ ವಿಫಲವಾಗಿದೆ. ಖಂಡಿತವಾಗಿ ಇಡೀ ಜನ ಸಮುದಾಯ ಎದ್ದು ಖಂಡಿಸಬೇಕು. ಆಗ ಇಂತಹ ದ್ರೋಹಿಗಳು ತಲೆ ಎತ್ತಲ್ಲ. ಖಡಿವಾಣ ಆಗುತ್ತೆ. ಇದು ಅತ್ಯಂತ ದುರದೃಷ್ಟಕರ ಸಂಗತಿ, ಮತಾಂಧ ಶಕ್ತಿಗಳು ಧರ್ಮ ಅಂದರೆ ಕೊಲೆ, ಧರ್ಮ ಅಂದ್ರೆ ರಕ್ತಪಾತ ಈ ರೀತಿಯ ತಿಳುವಳಿಕೆಯಿಂದ ಇಡೀ ಜಗತ್ತಿನಲ್ಲಿ ಅವರು ಸುಖವಾಗಿಲ್ಲ ಜಗತ್ತಿನಲ್ಲಿಯೂ ಯಾರಿಗೂ ಸುಖವಾಗಿ ಶಾಂತಿಯಿಂದ ಇರಲು ಬಿಡುತ್ತಿಲ್ಲ. ಎಲ್ಲಾಕಡೆ ಈ ಕೃತ್ಯ ನಡೆಯುತ್ತಿದೆ. ಈ ಮತಾಂಧ ಶಕ್ತಿಗಳು ತಲೆ ಎತ್ತದಂತೆ ಎಲ್ಲಾ ಸರ್ಕಾರ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಉದಯಪುರ ಕನ್ಹಯ್ಯಾಲಾಲ್ ಶಿರಚ್ಛೇದ, ಭಾರತದಲ್ಲಿ ಹಿಂದೂಗಳು ಸುರಕ್ಷಿತವಾಗಿಲ್ಲ ಎಂದ ತಸ್ಲೀಮಾ
ಆರೋಪಿಗಳನ್ನು ಎನ್ ಕೌಂಟರ್ ಮಾಡಿ ಎಂಬ ಮುತಾಲಿಕ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಆರಗ ಜ್ಞಾನೇಂದ್ರ ಅವರು, ಮುತಾಲಿಕ್ ಏನ್ ಹೇಳ್ತಾರೆ ಎಂಬುವುದು ಮುಖ್ಯ ಅಲ್ಲ. ದೇಶದಲ್ಲಿ ಸಂವಿಧಾನ ಕಾನೂನು ಶಿಕ್ಷೆ ಎಲ್ಲವೂ ಇದೆ. ಕೊಲೆ ಮಾಡಿದವರು ಈ ಸಂವಿಧಾನ ,ಕಾನೂನಿಂದ ಲಾಭ ಇಲ್ಲ ಅಂತ ತಿಳಿದುಕೊಂಡವರು. ನಾವೇ ಶಿಕ್ಷೆ ಕೊಡುವವರು ಅಂತಾನೇ ಹೀಗೆ ಮಾಡಿದ್ದು, ಕಾನೂನು ಚೌಕಟ್ಟಿನಲ್ಲಿ ಏನ್ ಮಾಡಬೇಕೋ ಅದನ್ನು ಮಾಡ್ತೀವಿ. ನಮಗೂ ಸಿಟ್ಟು ಬರುತ್ತೆ, ನೋವು ಆಗುತ್ತೆ. ಜಂಗಲ್ ರಾಜ್ಯ ಅಲ್ಲ ಇದು. ಇಂತಹ ಮತಾಂಧ ಶಕ್ತಿಗಳಿಗೆ ಮೆಸೇಜ್ ಕೊಡಬೇಕು. ಇದು ಮಾತನಾಡಲಾರದಂತ ದೃಶ್ಯ, ಮೌನವಾಗಿ ಒಂದ್ ಕ್ಷಣ ಯೋಚನೆ ಮಾಡಬೇಕು. ಮಾತಿನಲ್ಲಿ ಘಟನೆ ಖಂಡಿಸಲು ಆಗಲ್ಲ ಎಂದು ಉತ್ತರಿಸಿದ್ದಾರೆ.
ಘಟನೆ ಖಂಡಿಸಿ ಸಿದ್ದರಾಮಯ್ಯ ಟ್ವೀಟ್ ಮಾಡಿರುವ ವಿಚಾರಕ್ಕೆ ಸಂಬಂಧಿಸಿದ ಪ್ರತಿಕ್ರಿಯೆ ನೀಡಿದ ಸಚಿವರು ಪಕ್ಷ ಬೇದ ಮರೆತು, ಮಾನವೀಯ ದೃಷ್ಟಿಯಿಂದ ಎಲ್ಲಾರೂ ಈ ಘಟನೆಯನ್ನು ಖಂಡಿಸಬೇಕಿದೆ ಎಂದಿದ್ದಾರೆ.
ಉದಯಪುರ ಟೈಲರ್ ಹತ್ಯೆ ಭಯೋತ್ಪಾದಕ ಘಟನೆ ಎಂದ ಕೇಂದ್ರ, NIA ತಂಡ ರವಾನೆ!
ಉದಯಪುರ ಕೊಲೆ ಪ್ರಕರಣವನ್ನು ಖಂಡಿಸಿದ ಮಾಜಿ ಸಚಿವ ಹೆಚ್ ಸಿ .ಮಹಾದೇವಪ್ಪ: ಉದಯಪುರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನವದೆಹಲಿಯಲ್ಲಿ ವಿಧಾನ ಪರಿಷತ್ ನಾಯಕ ಬಿ.ಕೆ ಹರಿಪ್ರಸಾದ್ ಹೇಳಿಕೆ ನೀಡಿ ಇಂತಹ ಘಟನೆ ಆಘಾತಕಾರಿ, ಧರ್ಮಾಂಧರನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ. ಯಾವುದೇ ಧರ್ಮ ಆಗಲಿ - ಧರ್ಮಾಂದರು ಅಪಾಯಕಾರಿ. ಸಂವಿಧಾನ ಇದನ್ನು ಒಪ್ಪಲ್ಲ. ನಾವು ಬಯಸೋದು ಸಹಬಾಳ್ವೆ, ಶಾಂತಿ, ನೆಮ್ಮದಿ. ಅವರಿಗೆ ಶಿಕ್ಷೆ ನೀಡಲೇಬೇಕು. ಇದು ಅಪಾಯಕಾರಿ ಬೆಳವಣಿಗೆಯಾಗಿದೆ.
ರಾಜಸ್ಥಾನದಲ್ಲಿ ನಡೆದಿರುವುದು ಘೋರವಾದ ಘಟನೆ, ಇದು ಖಂಡನೀಯ. ಇದನ್ನು ಮುಂದಿಟ್ಟುಕೊಂಡು ರಾಜಕೀಯ ಹೇಳಿಕೆ ನೀಡುಬಹದು ತಪ್ಪು. ಎಲ್ಲ ಧರ್ಮ ಭಾಷೆಗಳು ಅನ್ಯೂನವಾಗಿರುವ ದೇಶ. ಘಟನೆಗೆ ಹಲವಾರು ಕಾರಣ ಇರಬಹುದು. ಸಾವನ್ನು ವೈಭವಿಕರಿಸಬಾರದು. ಹಿಂದೆ ಶಂಕರಲಾಲ್ ಎನ್ನುವವರು ಓರ್ವ ಹುಡ್ಗನ ಹತ್ಯೆ ಮಾಡಿಸಿದ್ದರು. ಫರಿದಾಬಾದ್ ನಲ್ಲಿ ಅಲ್ಪ ಸಂಖ್ಯಾತ ಅನ್ನೋ ಈ ಕಾರಣಕ್ಕೆ ಹತ್ಯೆ ಮಾಡಲಾಗಿತ್ತು. ಕಟುವಾದಲ್ಲಿ ಐದು ವರ್ಷದ ಹೆಣ್ಣು ಮಗು ಕೊಲೆ ಮಾಡಲಾಗಿತ್ತು. ಈ ಎಲ್ಲ ಬೆಳವಣಿಗೆಗಳನ್ನು ಖಂಡಿಸಬೇಕು. ಅಸಹಿಷ್ಣುತೆ ಎನ್ನುವುದು ಭಾರತದಲ್ಲಿ ಇರಲಿಲ್ಲ. ಎಂಟು ವರ್ಷದ ಹಿಂದೆ ವಿಶ್ವಗುರು ಬಂದ ಬಳಿಕ ಈ ಬೆಳವಣಿಗೆಗಳು ನಡೆಯುತ್ತಿದೆ. ಇದನ್ನು ಸಭ್ಯ ನಾಗರಿಕ ಸಮಾಜ ವಿರೋಧಿಸಬೇಕು ಎಂದಿದ್ದಾರೆ.