ಸಿಬಿಐ ತನಿಖೆಗೆ ಸರ್ಕಾರದ ಅನುಮತಿ ಪಡೆಯುವುದು ಹೊಸದೇನಲ್ಲ: ಗೃಹ ಸಚಿವ
ಸಿಬಿಐ ತನಿಖೆಗೆ ರಾಜ್ಯ ಸರ್ಕಾರದ ಅನುಮತಿ ಪಡೆಯುವ ವಿಚಾರ ತೀರ್ಮಾನ ಹೊಸದೇನಲ್ಲ, ಹಿಂದೆ ಎರಡು ಮೂರು ಬಾರಿ ಸರ್ಕಾರ ಈ ರೀತಿ ತೀರ್ಮಾನ ಮಾಡಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದರು.
ತುಮಕೂರು (ಸೆ.28) : ಸಿಬಿಐ ತನಿಖೆಗೆ ರಾಜ್ಯ ಸರ್ಕಾರದ ಅನುಮತಿ ಪಡೆಯುವ ವಿಚಾರ ತೀರ್ಮಾನ ಹೊಸದೇನಲ್ಲ, ಹಿಂದೆ ಎರಡು ಮೂರು ಬಾರಿ ಸರ್ಕಾರ ಈ ರೀತಿ ತೀರ್ಮಾನ ಮಾಡಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದರು.
ಅವರು ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ದೆಹಲಿ ಪೊಲೀಸ್ ಎಸ್ಟಾಬ್ಲಿಷ್ ಮೆಂಟ್ ಕ್ಟ್ ಅಡಿಯಲ್ಲಿ ಸಿಬಿಐ ನವರು ಬೇರೆ ಬೇರೆ ರಾಜ್ಯ ಗಳಿಗೆ ತೆರಳಿ ಅಧಿಕಾರಿ, ಜನಪ್ರತಿನಿಧಿಗಳ ಮೇಲೆ ತನಿಖೆ ಮಾಡುವ ಅವಕಾಶವಿದೆ.
Muda case: ನನ್ನ ಮೇಲೆ ರಾಜಕೀಯ ಪ್ರೇರಿತ ಕೇಸ್ ಇದೇ ಮೊದಲು -ಸಿಎಂ
ಇತ್ತೀಚೆಗೂ ಅದೇ ಇತ್ತು. ಈ ಸಲ ಅದು ಬೇಡ ನಮ್ಮ ಅನುಮತಿ ತೆಗೆದುಕೊಂಡು ಮಾಡಲಿ ಎಂದು ತೀರ್ಮಾನ ಮಾಡಿದ್ದಾಗಿ ತಿಳಿಸಿದರು.ಅನುಮತಿ ಕೊಡುವ ಸಂದರ್ಭ ಬಂದರೆ ಕೊಡಬೇಕಾಗುತ್ತದೆ. ಕೊಡುವುದಿಲ್ಲ ಅಂತಾ ನಾವು ಹೇಳುತ್ತಿಲ್ಲ ಎಂದರು.
ಯಾವ್ಯಾವುದುಕ್ಕೋ ಹೇಳದೇ ಕೇಳದೇ ಹೋಗುತ್ತಾರಲ್ಲ, ಹಾಗಾಗಿ ಅನುಮತಿ ತೆಗೆದುಕೊಳ್ಳಬೇಕೆಂದು ತೀರ್ಮಾನ ಮಾಡಿದ್ದಾಗಿ ತಿಳಿಸಿದರು. ಈ ಆದೇಶ ಸಿಬಿಐಗೆ ಮಾತ್ರ ಸೀಮಿತ. ಇಡಿ ಡೆಲ್ಲಿ ಎಸ್ಟಾಬ್ಲಿಷ್ಮೆಂಟ್ ಮೆಂಟ್ ಆಕ್ಟ್ ನಲ್ಲಿ ಬರುವುದಿಲ್ಲ ಎಂದರು.
ಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್‌ಐಆರ್ ಆದ್ರೂ ಸಮಾಧಾನವಾಗದ ಸ್ನೇಹಮಯಿ ಕೃಷ್ಣ: ಸಿಬಿಐಗೆ ವಹಿಸಲು ಅರ್ಜಿ ಸಲ್ಲಿಕೆ!
ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ನ್ಯಾಯಾಲಯ ಆದೇಶ ಹಿನ್ನೆಲೆ ಎಫ್ಐಆರ್ ದಾಖಲು ಮಾಡಿಕೊಂಡಿದ್ದಾರೆ. ಯಾವುದೇ ತನಿಖೆಗೆ ಸಿದ್ಧ ಅಂತಾ ಈಗಾಗಲೇ ಮುಖ್ಯಮಂತ್ರಿಗಳು ಹೇಳಿದ್ದಾರೆ. ತನಿಖೆಯಲ್ಲಿ ವರದಿ ಏನು ಬರುತ್ತೆ. ಅದರ ಆಧಾರದ ಮೇಲೆ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ. ಪಾರದರ್ಶಕ ತನಿಖೆ ನಡೆಯುತ್ತದೆ. ಲೋಕಾಯುಕ್ತ ಪೊಲೀಸ್ ಸ್ವತಂತ್ರವಾಗಿ ಕೆಲಸ ಮಾಡುತ್ತಾರೆ. ಅವರು ನಮ್ಮ ಸರ್ಕಾರದ ಅಧೀನದಲ್ಲಿ ಇಲ್ಲ ಎಂದರು. ಪ್ರಕರಣವನ್ನು ಸಿಬಿಐಗೆ ಕೊಡಬೇಕು ಅನ್ನುವ ಸ್ನೇಹಮಯಿ ಕೃಷ್ಣ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು ಹೇಳಲಿ ಬಿಡಿ. ಅವರು ಹೇಳೋದು ಅವರು ಹೇಳುತ್ತಾರೆ ಎಂದರು. ಮುಖ್ಯಮಂತ್ರಿಗಳು ರಾಜಿನಾಮೆ ಕೊಡುವ ಅಗತ್ಯವಿಲ್ಲ ಎಂದರು.