ಬೆಂಗಳೂರು ಹಾಗೂ ಮೈಸೂರು ರಸ್ತೆ ಇದೀಗ ದೇಶಾದ್ಯಂತ ಸದ್ದು ಮಾಡುತ್ತಿದೆ. ಎಕ್ಸ್‌ಪ್ರೆಸ್‌ವೇನಲ್ಲಿನ ಟೋಲ್ ಸಂಗ್ರಹ ಪ್ರತಿಭಟನೆ, ಗಲಾಟೆಗೆ ಕಾರಣವಾಗಿದೆ. ಇದರ ಬೆನ್ನಲ್ಲೇ ಸ್ವಯಂಪ್ರೇರಿತವಾಗಿ ಪ್ರಕರಣ ಕೈಗೆತ್ತಿಕೊಂಡ ಕರ್ನಾಟಕ ಹೈಕೋರ್ಟ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಮಹತ್ವದ ಸೂಚನೆ ನೀಡಿದೆ

ಬೆಂಗಳೂರು(ಮಾ.15): ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇ ಲೋಕಾರ್ಪಣೆಗೊಂಡಿದ್ದರು, ರಾಜಕೀಯ ಮುಗಿಯುತ್ತಿಲ್ಲ. ಉದ್ಘಾಟನೆಗೂ ಮೊದಲು ಕಾಂಗ್ರೆಸ್ ಜೆಡಿಎಸ್ ಪಕ್ಷಗಳು ಕ್ರಿಡಿಟ್ ವಾರ್‌ಗೆ ಹೋರಾಟ ನಡೆಸಿತ್ತು. ಇದೀಗ ಟೋಲ್ ಸಂಗ್ರಹ ವಿರುದ್ಧ ಪ್ರತಿಭಟನೆ ಮಾಡುತ್ತಿದೆ. ಸರ್ವೀಸ್ ರಸ್ತೆ ಆಗಿಲ್ಲ, ಫಾಸ್ಟಾಗ್ ಕಾರ್ಯನಿರ್ವಹಿಸುತ್ತಿಲ್ಲ. ಟೋಲ್ ಸಂಗ್ರಹದ ಮೂಲಕ ಹಗಲು ದರೋಡೆ ನಡೆಯುತ್ತಿದೆ ಅನ್ನೋ ಆರೋಪ ಕೇಳಿಬಂದಿದೆ. ಇದರ ಬೆನ್ನಲ್ಲೇ ಕರ್ನಾಟಕ ಹೈಕೋರ್ಟ್ ಸ್ವಯಂ ಪ್ರೇರಿತವಾಗಿ ಪ್ರಕರಣ ಕೈಗೆತ್ತಿಕೊಂಡಿದೆ. ಜನರ ಪ್ರತಿಭಟಟನೆ, ವಿಪಕ್ಷಗಳ ಆರೋಪ ಕುರಿತು ಉಲ್ಲೇಖಿಸಿದ ಹೈಕೋರ್ಟ್, ಟೋಲ್ ಸಂಗ್ರಹ ಕುರಿತು 3 ವಾರಗಳಲ್ಲಿ ಉತ್ತರ ನೀಡುವಂತೆ ಹೈಕೋರ್ಟ್ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸೂಚನೆ ನೀಡಿದೆ.

ಹೆದ್ದಾರಿಗಳಿಗೆ ಶುಲ್ಕ ವಿಧಿಸಲು 2008ರ ನಿಯಮದಡಿ ಅವಕಾಶವಿದೆ. ಆದರೆ ಅದಕ್ಕೂ ಮೊದಲು ಅಗತ್ಯೆತೆಗಳನ್ನು ಪೂರೈಸಬೇಕು. ಸರ್ವೀಸ್ ರಸ್ತೆ ಅನೂಕೂಲತೆ ಇರಬೇಕು. ರಾಮನಗರ ಸಮೀಪದ ಹೆಚ್ಚುವರಿ ಟೋಲ್ ಸಂಗ್ರಹ ಮಾಡಲಾಗುತ್ತಿದೆ ಅನ್ನೋ ಆರೋಪವೂ ಕೇಳಿಬಂದಿದೆ. ಟೋಲ್ ಸಂಗ್ರಹದಲ್ಲಿ ಸಮಸ್ಯೆಗಳಿಗೆ ಅನ್ನೋ ದೂರುಗಳು ಬಂದಿದೆ. ಫಾಸ್ಟಾಗ್ ಕಾರ್ಯನಿರ್ವಹಿಸುತ್ತಿಲ್ಲ. ಸರ್ವೀಸ್ ರಸ್ತೆ ಬಳಸಲು ಸೂಚಿಸಿದ ಘಟನೆ ಸೇರಿದಂತೆ ಹೆದ್ದಾರಿಯ ಎಲ್ಲಾ ದೂರು ದುಮ್ಮಾನ ಕುರಿತು ಹೈಕೋರ್ಟ್ ಬೆಳಕು ಚೆಲ್ಲಿದೆ. ಹೀಗಾಗಿ ಈ ಎಲ್ಲಾ ಆರೋಪಗಳಿಗೆ 3 ವಾರಗಳಲ್ಲಿ ಉತ್ತರಿಸುವಂತೆ ಹೆದ್ದಾರಿ ಪ್ರಾಧಿಕಾರಕ್ಕೆ ಸೂಚನೆ ನೀಡಿದೆ.

ಬೆಂಗ್ಳೂರು-ಮೈಸೂರು ಟೋಲ್‌ ಸಂಗ್ರಹ ಆರಂಭ: ಬಸ್‌ ದುಬಾರಿ, ಟಿಕೆಟ್‌ ದರ ಏರಿಕೆ..!

ಬೆಂಗಳೂರು ಮೈಸೂರು ಹೆದ್ದಾರಿ ಟೋಲ್ ಬೆಲೆ ಮಾಹಿತಿ:
 ಕಾರು, ಜೀಪು, ವ್ಯಾನುಗಳಿಗೆ
- ಏಕಮುಖ ಸಂಚಾರಕ್ಕೆ 135ರು.
- ಅದೇ ದಿನ ಮರು ಸಂಚಾರಕ್ಕೆ 205ರು.
- ಸ್ಥಳೀಯ ವಾಹನಗಳಿಗೆ 70ರು., ಒಂದು ತಿಂಗಳ 50 ಏಕಮುಖ ಸಂಚಾರದ ಪಾಸ್‌ಗೆ 4,525 ರು.

* ಲಘು ವಾಣಿಜ್ಯ ವಾಹನಗಳು/ಲಘು ಸರಕು ವಾಹನಗಳು/ಮಿನಿ ಬಸ್‌.
- ಏಕಮುಖ ಸಂಚಾರಕ್ಕೆ 220 ರು.
- ಅದೇ ದಿನ ಮರು ಸಂಚಾರಕ್ಕೆ 320 ರು.
- ಸ್ಥಳೀಯ ವಾಹನಗಳಿಗೆ 110 ರು., ಒಂದು ತಿಂಗಳ 50 ಏಕಮುಖ ಸಂಚಾರದ ಪಾಸ್‌ಗೆ 7,315 ರು.

ಬೆಂಗ್ಳೂರು-ಮೈಸೂರು ಟೋಲ್‌ ಸಂಗ್ರಹ ಆರಂಭ: ಬಸ್‌ ದುಬಾರಿ, ಟಿಕೆಟ್‌ ದರ ಏರಿಕೆ..!

* ಬಸ್‌ ಅಥವಾ ಟ್ರಕ್‌ (ಎರಡು ಆಕ್ಸೆಲ…)
- ಏಕಮುಖ ಸಂಚಾರಕ್ಕೆ 460 ರು.
- ಅದೇ ದಿನ ಮರು ಸಂಚಾರಕ್ಕೆ 690ರು. ಸ್ಥಳೀಯ ವಾಹನಗಳಿಗೆ 230 ರು. ಒಂದು ತಿಂಗಳ 50 ಏಕಮುಖ ಸಂಚಾರದ ಪಾಸ್‌ಗೆ 15,325 ರು.

*ವಾಣಿಜ್ಯ ವಾಹನಗಳು (ಮೂರು ಆಕ್ಸೆಲ್‌)
- ಏಕಮುಖ ಸಂಚಾರಕ್ಕೆ 500 ರು.
- ಅದೇ ದಿನ ಮರು ಸಂಚಾರಕ್ಕೆ 750 ರು. ಸ್ಥಳೀಯ ವಾಹನಗಳಿಗೆ 250 ರು. ಒಂದು ತಿಂಗಳ 50 ಏಕಮುಖ ಸಂಚಾರದ ಪಾಸ್‌ಗೆ 16,715ರು.

* ಭಾರಿ ನಿರ್ಮಾಣ ಯಂತ್ರ, ಭೂ ಅಗೆತ ಸಾಧನ,ಬಹು ಆಕ್ಸೆಲ… ವಾಹನ (6ರಿಂದ 8 ಆಕ್ಸೆಲ…)
- ಏಕಮುಖ ಸಂಚಾರಕ್ಕೆ 720 ರು.
- ಅದೇ ದಿನ ಮರು ಸಂಚಾರಕ್ಕೆ 1,080 ರು. ಸ್ಥಳೀಯ ವಾಹನಗಳಿಗೆ 360 ರು., ಒಂದು ತಿಂಗಳ 50 ಏಕಮುಖ ಸಂಚಾರದ ಪಾಸ್‌ಗೆ 24,030 ರು.

* ಅತಿ ಗಾತ್ರದ ವಾಹನಗಳು (7ರಿಂದ ಹೆಚ್ಚಿನ ಆಕ್ಸೆಲ…)
- ಏಕಮುಖ ಸಂಚಾರಕ್ಕೆ 880 ರು.
- ಅದೇ ದಿನ ಮರು ಸಂಚಾರಕ್ಕೆ 1,315ರು. ಸ್ಥಳೀಯ ವಾಹನಗಳಿಗೆ 440ರು. ಒಂದು ತಿಂಗಳ 50 ಏಕಮುಖ ಸಂಚಾರದ ಪಾಸ್‌ಗೆ 29,255 ರು.