Asianet Suvarna News Asianet Suvarna News

ಫಲಭರಿತ ತೆಂಗಿನ ಮರ ಕಡಿಯದಂತೆ ಹೈಕೋರ್ಟ್ ತಡೆ!

ಪುದು ಗ್ರಾಮ ಪಂಚಾಯತಿ ವ್ಯಾಪ್ತಿಯ ಮಾರಿಪಳ್ಳ ಎಂಬಲ್ಲಿ ಫ್ರಾನ್ಸಿಸ್ ವಾಸ್ ಎಂಬವರಿಗೆ ಸೇರಿದ್ದ ಫಲಭರಿತ ತೆಂಗಿನಮರವನ್ನು ಕಡಿಯುಂತೆ ಪಂಚಾಯತಿ ಪಿಡಿಓ ನೀಡಿದ್ದ ನೋಟಿಸ್‌ಗೆ ಹೈಕೋರ್ಟ್ ತಡೆಯಾಜ್ಞೆ ನೀಡಿ ಆದೇಶಿಸಿದೆ. 

Karnataka High Court stopped the cutting of coconut trees gvd
Author
First Published Oct 9, 2024, 7:58 PM IST | Last Updated Oct 9, 2024, 11:06 PM IST

ಬಂಟ್ವಾಳ (ಅ.09): ಪುದು ಗ್ರಾಮ ಪಂಚಾಯತಿ ವ್ಯಾಪ್ತಿಯ ಮಾರಿಪಳ್ಳ ಎಂಬಲ್ಲಿ ಫ್ರಾನ್ಸಿಸ್ ವಾಸ್ ಎಂಬವರಿಗೆ ಸೇರಿದ್ದ ಫಲಭರಿತ ತೆಂಗಿನಮರವನ್ನು ಕಡಿಯುಂತೆ ಪಂಚಾಯತಿ ಪಿಡಿಓ ನೀಡಿದ್ದ ನೋಟಿಸ್‌ಗೆ ಹೈಕೋರ್ಟ್ ತಡೆಯಾಜ್ಞೆ ನೀಡಿ ಆದೇಶಿಸಿದೆ. ಅದೇ ಪಂಚಾಯತಿನ ಪ್ರಭಾವಿಯೊಬ್ಬರು ನೀಡಿದ ದೂರಿನ ಆಧಾರದಲ್ಲಿ  ಸರಿಯಾಗಿ ಪರಿಶೀಲಿಸದೆ ಸಮೃದ್ಧ ಫಲಭರಿತ ತೆಂಗಿನ ಮರವನ್ನು ತಕ್ಷಣ ಕಡಿಯುವಂತೆ ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿಯವರ ಸೂಚನೆಯಂತೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನೋಟಿಸ್ ನೀಡಿದ್ದರು.  

ಸದ್ರಿ ನೋಟಿಸನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ಫ್ರಾನ್ಸಿಸ್ ವಾಸ್ ರವರ  ಅರ್ಜಿಯನ್ನು ಬುಧವಾರ ವಿಚಾರಿಸಿದ ನ್ಯಾಯಮೂರ್ತಿ ಜಸ್ಟಿಸ್ ಮಹಮ್ಮದ್ ನವಾಝ್ ರವರ ಪೀಠವು ಅರ್ಜಿಯನ್ನು ಪರಿಶೀಲಿಸಿ ಮರ ಕಡಿಯದಂತೆ ತಡೆಯಾಜ್ಞೆ ನೀಡಿದೆ. ಅರ್ಜಿದಾರರ ಪರವಾಗಿ ಬೆಂಗಳೂರಿನ ಆರ್. ಪಿ ಡಿಸೋಜಾ ಅಸೋಸಿಯೇಟ್ಸ್ ನ ಯುವ ವಕೀಲ ಆರ್. ಪಿ ಡಿʼಸೋಜಾರವರು ವಾದ ಮಂಡಿಸಿದರು.

ನಾನು ಹಾಸನಕ್ಕೆ ಹೋಗದಿದ್ದರೆ ನೀರು ಬರುತ್ತಿರಲಿಲ್ಲ: ಸಚಿವ ಕೆ.ಎನ್‌.ರಾಜಣ್ಣ

₹5 ಲಕ್ಷ ಪರಿಹಾರ ಆದೇಶಕ್ಕೆ ಹೈಕೋರ್ಟ್ ದ್ವಿಸದಸ್ಯ ಪೀಠ ತಡೆ: ಬೆಂಗಳೂರಿನಲ್ಲಿ ಓಲಾ ಕ್ಯಾಬ್‌ನಲ್ಲಿ ಪ್ರಯಾಣಿಸುವ ವೇಳೆ ಚಾಲಕನಿಂದ ಲೈಂಗಿಕ ಕಿರುಕುಳ ನೀಡಿದ ಆರೋಪ ಪ್ರಕರಣದಲ್ಲಿ ಸಂತ್ರಸ್ತೆ ಯುವತಿಗೆ ಪರಿಹಾರ ರೂಪದಲ್ಲಿ 5 ಲಕ್ಷ ರು. ಪಾವತಿಸುವಂತೆ ಓಲಾ ಕ್ಯಾಬ್‌ ನಿರ್ವಹಿಸುವ ಎಎನ್‌ಐ ಟೆಕ್ನಾಲಜೀಸ್ ಪ್ರೈವೇಟ್‌ ಲಿಮಿಟೆಡ್‌ಗೆ ಆದೇಶಿಸಿದ್ದ ಹೈಕೋರ್ಟ್‌ ಏಕಸದಸ್ಯ ಪೀಠದ ಆದೇಶಕ್ಕೆ ರಜಾ ಕಾಲದ ವಿಭಾಗೀಯ ಪೀಠ ತಡೆ ನೀಡಿದೆ. ಎಎನ್‌ಐ ಟೆಕ್ನಾಲಜೀಸ್‌ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಎಸ್‌. ಆರ್‌. ಕೃಷ್ಣಕುಮಾರ್‌ ಮತ್ತು ಎಂ. ಜಿ. ಉಮಾ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಎಎನ್‌ಐ ಟೆಕ್ನಾಲಜೀಸ್‌ ಪರ ಹಿರಿಯ ವಕೀಲ ಧ್ಯಾನ್‌ ಚಿನ್ನಪ್ಪ ವಾದಿಸಿ ಇದು 5ಲಕ್ಷ ರು. ಪರಿಹಾರದ ವಿಚಾರವಲ್ಲ. ಕೆಲಸದ ಸ್ಥಳದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ನಿಷೇಧ, ತಡೆ ಮತ್ತು ಪರಿಹಾರ ಕಾಯಿದೆ- 2013ರ ವ್ಯಾಖ್ಯಾನಕ್ಕೆ ಸಂಬಂಧಿಸಿದ್ದಾಗಿದೆ. ಕಂಪನಿಯಿಂದ ಚಾಲಕರಿಗೆ ಉದ್ಯೋಗ ನೀಡಿಲ್ಲ. ಓಲಾ ಒದಗಿಸಿರುವ ವೇದಿಕೆಯನ್ನು ಚಾಲಕರು ಬಳಸಿಕೊಳ್ಳುತ್ತಾರೆ. ಚಾಲಕರು ಸ್ವತಂತ್ರ ಗುತ್ತಿಗೆದಾರರಾಗಿದ್ದಾರೆ ಎಂದರು. ಮೇಲ್ಮನವಿ ಆಲಿಸಿದ ದ್ವಿಸದಸ್ಯ ಪೀಠ, ಪ್ರಕರಣದ ವಿಚಾರಣೆಯ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟು ಏಕಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಿ ಅ.28ಕ್ಕೆ ವಿಚಾರಣೆ ಮುಂದೂಡಿದೆ.

ಕನ್ನಡದ ಅತ್ಯಂತ ದುಬಾರಿ ಸಿನಿಮಾ ಮಾರ್ಟಿನ್‌, ಧ್ರುವ ಸರ್ಜಾ ನಟನೆ ಭರ್ಜರಿ: ನಿರ್ಮಾಪಕ ಉದಯ್‌ ಮೆಹ್ತಾ

ಸೆ. 30 ಏಕಸದಸ್ಯ ಪೀಠವು, 5 ಲಕ್ಷ ರು. ಪರಿಹಾರದ ಜೊತೆಗೆ ಸಂತ್ರಸ್ತೆಗೆ ವ್ಯಾಜ್ಯ ಶುಲ್ಕವಾಗಿ ಹೆಚ್ಚುವರಿ 50000 ರು. ಮೊತ್ತವನ್ನು ಕಂಪನಿ ಪಾವತಿಸಬೇಕು. ಕರ್ನಾಟಕ ರಾಜ್ಯ ಸಾರಿಗೆ ಪ್ರಾಧಿಕಾರದ ಹೆಚ್ಚುವರಿ ಕಾರ್ಯದರ್ಶಿ ಹಾಗೂ ಕಾರ್ಯದರ್ಶಿ ವೈಯಕ್ತಿಕವಾಗಿ 1 ಲಕ್ಷ ರು. ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರಕ್ಕೆ ಪಾವತಿಸಬೇಕು. ಸಂತ್ರಸ್ತೆ ನೀಡಿದ ದೂರಿನ ಕುರಿತು ಕಂಪನಿಯ ಆಂತರಿಕ ದೂರುಗಳ ಸಮಿತಿ ವಿಚಾರಣೆ ನಡೆಸಬೇಕು. ವಿಚಾರಣಾ ಪ್ರಕ್ರಿಯೆಯನ್ನು 90 ದಿನಗಳಲ್ಲಿ ಪೂರ್ಣಗೊಳಿಸಬೇಕು ಎಂದು ಆದೇಶಿಸಿತ್ತು.

Latest Videos
Follow Us:
Download App:
  • android
  • ios