Asianet Suvarna News Asianet Suvarna News

ನಾನು ಹಾಸನಕ್ಕೆ ಹೋಗದಿದ್ದರೆ ನೀರು ಬರುತ್ತಿರಲಿಲ್ಲ: ಸಚಿವ ಕೆ.ಎನ್‌.ರಾಜಣ್ಣ

ಹಾಸನ ಜಿಲ್ಲಾ ಉಸ್ತುವಾರಿ ಸಚಿವನಾಗಿ ಅಧಿಕಾರ ವಹಿಸಿಕೊಳ್ಳದಿದ್ದರೆ ಇನ್ನೂ ಐವತ್ತು ವರ್ಷ ಕಳೆದರೂ ನಮ್ಮ ಭಾಗಕ್ಕೆ ಎತ್ತಿನ ಹೊಳೆ ನೀರು ಬರುತ್ತಿರಲಿಲ್ಲ ಎಂದು ಸಹಕಾರ ಸಚಿವ ಕೆ.ಎನ್‌.ರಾಜಣ್ಣ ತಿಳಿಸಿದರು. 

If I had not gone to Hassan water would not have come Says Minister KN Rajanna gvd
Author
First Published Oct 9, 2024, 4:31 PM IST | Last Updated Oct 9, 2024, 4:31 PM IST

ಮಧುಗಿರಿ (ಅ.07): ಹಾಸನ ಜಿಲ್ಲಾ ಉಸ್ತುವಾರಿ ಸಚಿವನಾಗಿ ಅಧಿಕಾರ ವಹಿಸಿಕೊಳ್ಳದಿದ್ದರೆ ಇನ್ನೂ ಐವತ್ತು ವರ್ಷ ಕಳೆದರೂ ನಮ್ಮ ಭಾಗಕ್ಕೆ ಎತ್ತಿನ ಹೊಳೆ ನೀರು ಬರುತ್ತಿರಲಿಲ್ಲ ಎಂದು ಸಹಕಾರ ಸಚಿವ ಕೆ.ಎನ್‌.ರಾಜಣ್ಣ ತಿಳಿಸಿದರು. ತಾಲೂಕಿನ ಬಿಜವರ ಕೆರೆ ಕೋಡಿ ಪರಿಶೀಲಿಸಿ ಮಾತನಾಡಿದ ಅವರು, ಹಾಸನ ಜಿಲ್ಲೆಯ ಉಸ್ತುವಾರಿ ಸಚಿವನಾಗಿ ಆಧಿಕಾರ ವಹಿಸಿಕೊಂಡ ಬಳಿಕ ಅಲ್ಲಿನ ವಸ್ತು ಸ್ಥಿತಿ ನನಗೆ ಅರ್ಥವಾಗಿದ್ದು, ಅಲ್ಲಿನ ರಾಜಕೀಯ ಪರಿಸ್ಥಿತಿಯೇ ಬೇರೆ. ದಕ್ಷ ,ಪ್ರಮಾಣಿಕ ಅಧಿಕಾರಿಗಳಿಗೆ ಅಲ್ಲಿನ ರಾಜಕೀಯ ವ್ಯವಸ್ಥೆ ಕೆಲಸ ಮಾಡಲು ಬಿಡಲ್ಲ, ಹಾಸನ ಡಿಸಿ ಸತ್ಯಭಾಮ ಹಾಗೂ ನಾನು ಇಲ್ಲದಿದ್ದರೆ ನಮ್ಮ ಭಾಗಕ್ಕೆ ಎತ್ತಿನಹೊಳೆ ನೀರು ತರಲು ಆಗುತ್ತಿರಲಿಲ್ಲ ಎಂದರು.

ಡಿಸಿ ಸತ್ಯಭಾಮ ಎತ್ತಿನ ಹೊಳೆ ಯೋಜನೆ ಅನುಷ್ಠಾನಕ್ಕೆ ಹೆಚ್ಚು ಶ್ರಮ ವಹಿಸಿದ್ದು ಅಲ್ಲಿನ ಎಲ್ಲ ಎಂಜಿನಿಯರ್‌ಗಳು ಸಹ ಮುತುವರ್ಜಿ ವಹಿಸಿ ಕೆಲಸ ಮಾಡಿದ್ದಾರೆ. ಅವರ ಶ್ರಮಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಪ್ರಸ್ತುತ ನೀರು ಲಿಪ್ಟ್‌ ಮಾಡಲು ರೆಡಿ ಇದೆ. ಆದರೆ ಕಾಲುವೆಗಳ ದುರಸ್ತಿ ಆಗಬೇಕು. ಸರ್ಕಾರ ಕಾಲುವೆಗಳ ದುರಸ್ಥಿಗೆ ಈಗಾಗಲೇ 300 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಮುಂದಿನ ಮಳೆಗಾಲದ ವೇಳೆಗೆ ಮಧುಗಿರಿ ಮತ್ತು ಕೊರಟೆಗೆರೆ ತಾಲೂಕಿನ ಕೆರೆಗಳಿಗೆ ಎತ್ತಿನಹೊಳೆ ನೀರು ತುಂಬಿಸುವ ಕಾಮಗಾರಿಗೆ ಸರ್ಕಾರ 575 ಕೋಟಿ ಹಣ ಬಿಡುಗಡೆ ಮಾಡಿದ್ದು, ಟೆಂಡರ್‌ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದರು.

ವಿಜಯೇಂದ್ರ-ಜಾರಕಿಹೊಳಿ ಭೇಟಿಯನ್ನು ರಾಜಕೀಯವಾಗಿ ಬೇರೆ ಅರ್ಥ ಕಲ್ಪಿಸುವುದು ಬೇಡ: ಸಂಸದ ಸುನಿಲ್ ಬೋಸ್

ವಿಧಾನ ಪರಿಷತ್‌ ಸದಸ್ಯ ಆರ್‌.ರಾಜೇಂದ್ರ ರಾಜಣ್ಣ, ಜಿಪಂಮಾಜಿ ಅಧ್ಯಕ್ಷೆ ಶಾಂತಲಾ ರಾಜಣ್ಣ, ಎಸಿ ಶಿವಪ್ಪ, ತಹಸೀಲ್ದಾರ್‌ ಶಿರೀನ್‌ತಾಜ್‌, ತಾಪಂಇಓ ಲಕ್ಷ್ಮಣ್‌, ಮಧುಸೂದನ್‌, ಪುರಸಭೆ ಅಧ್ಯಕ್ಷ ಲಾಲಪೇಟೆ ಮಂಜುನಾಥ್‌, ಉಪಾಧ್ಯಕ್ಷೆ ಸುಜಾತ ಶಂಕರನಾರಾಯಣ್‌, ಮುಖಂಡರಾದ ತುಂಗೋಟಿ ರಾಮಣ್ಣ,ಸುವರ್ಣಮ್ಮ, ಡಿಸಿಸಿ ಬ್ಯಾಂಕ್‌ ನಿರ್ದೇಶಕ ಬಿ.ನಾಗೇಶ್‌ಬಾಬು, ಪುರಸಭೆ ಸದಸ್ಯರಾದ ಎಂ.ವಿ.ಗೋವಿಂದರಾಜು, ಶೋಭರಾಣಿ, ಶ್ರೀಧರ್‌, ಮುಖ್ಯಾಧಿಕಾರಿ ಸುರೇಶ್‌ ಸೇರಿದಂತೆ ಅನೇಕರಿದ್ದರು.

ಸದೃಢ ದೇಹಕ್ಕೆ ಕ್ರೀಡೆಗಳು ಅವಶ್ಯ: ಮನುಷ್ಯನ ವ್ಯಕ್ತಿತ್ವ ವಿಕಸನ, ಮಾನಸಿಕ ನೆಮ್ಮದಿ ಹಾಗೂ ಸದೃಢ ದೇಹಕ್ಕಾಗಿ ಕ್ರೀಡೆ ಸಹಕಾರಿ ಎಂದು ಸಹಕಾರ ಸಚಿವ ಕೆ.ಎನ್‌.ರಾಜಣ್ಣ ತಿಳಿಸಿದರು. ಇಲ್ಲಿನ ರಾಜೀವ್‌ಗಾಂಧಿ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಬೆಂಗಳೂರು ವಿಭಾಗ ಮಟ್ಟದ ವಾಲಿಬಾಲ್‌ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು. ವಿದ್ಯೆ ಜೊತೆಗೆ ಆಟೋಟ ಚಟುವಟಿಕೆಗಳಿಗೂ ವಿದ್ಯಾರ್ಥಿಗಳು ಆಸಕ್ತಿ ವಹಿಸಬೇಕು. ಕ್ರೀಡೆಯಲ್ಲಿ ಸೋಲು ಗೆಲುವು ಸಾಮಾನ್ಯ ಎರಡನ್ನು ಸಮಾನಂತರವಾಗಿ ಸ್ವೀಕರಿಸಬೇಕು. 

ಸಿಎಂ ಸೀಟು ಖಾಲಿ ಇದ್ರೆ ಟವಲ್ ಹಾಕಬಹುದು, ಆದ್ರೆ ಜಾಗ ಖಾಲಿ ಇಲ್ಲ: ಸಚಿವ ಕೆ.ಎನ್.ರಾಜಣ್ಣ

ಸರ್ಕಾರ ಉನ್ನತ ಶಿಕ್ಷಣದಲ್ಲಿ ಕ್ರೀಡಾಪಟುಗಳಿಗೆ ಉದ್ಯೋಗದಲ್ಲಿ ಮೀಸಲಾತಿ ನಿಗಿದಿಗೊಳಿಸಿದ್ದು ಇಂತಹ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ತಾವು ಓದಿದ ಶಾಲೆಗೆ , ಗುರು ಹಿರಿಯರಿಗೆ ಮತ್ತು ಪೋಷಕರಿಗೆ ಕೀರ್ತಿ ತರಬೇಕು ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಮಧುಗಿರಿ ಏಕಶಿಲಾ ಬೆಟ್ಟ ಏಷ್ಯಾಖಂಡದಲ್ಲೇ ಅತ್ಯಂತ ದೊಡ್ಡ ಬೆಟ್ಟ ಎಂಬ ಹೆಸರು ಗಳಿಸಿದ್ದು ಇಲ್ಲಿನ ರಮಣಿಯ ಪ್ರಕೃತಿಯ ಸೊಬಗನ್ನು ಕಣ್ತುಂಬಿಕೊಂಡು ಪ್ರೀತಿ, ವಿಶ್ವಾಸದಿಂದ , ಸೌಹಾರ್ದತೆಯಿಂದ ಆಟ ಆಡಿ ,ಓದುವ ಮಕ್ಕಳಿಗೆ ಯಾವುದೇ ತೊಂದರೆ ಆಗದಂತೆ ಕ್ರಮ ವಹಿಸಲಾಗುವುದು ಎಂದು ಸಚಿವ ರಾಜಣ್ಣ ಭರವಸೆ ನೀಡಿದರು.

Latest Videos
Follow Us:
Download App:
  • android
  • ios