Asianet Suvarna News Asianet Suvarna News

Government ಕೆಲಸ ಮಾಡ್ತಿಲ್ಲ, ಹೇಳಿದ್ರೂ ಕೇಳ್ತಿಲ್ಲ: ಬೊಮ್ಮಾಯಿ ಸರ್ಕಾರಕ್ಕೆ ಹೈಕೋರ್ಟ್‌ ತರಾಟೆ

*  ಸರ್ಕಾರ ಕೆಲಸ ಮಾಡ್ತಿಲ್ಲ, ಹೇಳಿದರೂ ಕೇಳುತ್ತಿಲ್ಲ!
*  ತಂತ್ರಜ್ಞಾನ ಅಳವಡಿಕೆಗೆ ನೀಡಿದ್ದ ಆ.31ರ ಗಡುವು ಏಕೆ ಮೀರಿದ್ದೀರಿ?
*  10 ದಿನ ಕಾಲಾವಕಾಶ ನೀಡಿದರೆ ಕ್ರಮ: ಸರ್ಕಾರ
 

Karnataka High Court Slams on Basavaraj Bommai Government grg
Author
Bengaluru, First Published Nov 11, 2021, 7:51 AM IST

ಬೆಂಗಳೂರು(ನ.11):  ‘ಗೋಲ್ಡನ್‌ ಅವರ್‌’(Golden Hour) ಅವಧಿಯಲ್ಲಿ ರೋಗಿಗಳು(Patients) ಅಥವಾ ಗಾಯಾಳುಗಳನ್ನು ಆಸ್ಪತ್ರೆಗಳಿಗೆ ಸಾಗಿಸುವಾಗ ಆ್ಯಂಬುಲೆನ್ಸ್‌ಗಳ(Ambulance) ಸುಗಮ ಸಂಚಾರಕ್ಕೆ ‘ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ಆ್ಯಂಬುಲೆನ್ಸ್‌ ನಿರ್ವಹಣಾ ವ್ಯವಸ್ಥೆ’ ಜಾರಿಗೆ ಹೊಸದಾಗಿ 1,800 ಕೋಟಿ ಮೊತ್ತದ ಟೆಂಡರ್‌ ಕರೆಯಲು ಅನುಮೋದನೆ ನೀಡಲು ರಾಜ್ಯ ಸಚಿವ ಸಂಪುಟ ವಿಳಂಬ ಮಾಡಿರುವುದಕ್ಕೆ ಹೈಕೋರ್ಟ್‌(HighCourt) ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ಈ ಕುರಿತು ‘ಭಾರತ್‌ ಪುನರುತ್ಥಾನ ಟ್ರಸ್ಟ್‌’ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ, ಸರ್ಕಾರದ(Government) ಕಾರ್ಯ ವೈಖರಿಯ ಬಗ್ಗೆ ತೀವ್ರ ಬೇಸರ ಮೂಡುತ್ತಿದೆ. ಸರ್ಕಾರದ ವ್ಯವಹಾರಗಳು ಹೇಗೆ ನಡೆಯುತ್ತಿವೆ, ಏನು ಮಾಡುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಲಾಗುತ್ತಿಲ್ಲ. ಸರ್ಕಾರ ಕಾರ್ಯ ವೈಖರಿ ಹೀಗಿರುವುದಕ್ಕೆಯೇ ನ್ಯಾಯಾಲಯಕ್ಕೆ(Court) ಸಾಕಷ್ಟು ಪಿಐಎಲ್‌ಗಳು(PIL) ಬರುತ್ತಿವೆ. ಸರ್ಕಾರವು ಸ್ವಂತವಾಗಿಯೂ ಕೆಲಸ ಮಾಡುವುದಿಲ್ಲ. ಕೋರ್ಟ್‌ ನಿರ್ದೇಶನ ನೀಡಿದರೂ ಕೆಲಸ ಮಾಡುವುದಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿತು.

ಅನಧಿಕೃತ ಕಟ್ಟಡ ತೆರವಿಗೆ ನಿರ್ಲಕ್ಷ್ಯ: ಹೈಕೋರ್ಟ್‌ ತರಾಟೆ

ನಂತರ ಎರಡು ವಾರ ಕಾಲಾವಕಾಶ ನೀಡಿದ ನ್ಯಾಯಪೀಠ, ರಾಜ್ಯ ಸರ್ಕಾರ(Government of Karnataka) ಈ ವಿಚಾರವನ್ನು ತುರ್ತಾಗಿ ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂಬುದಾಗಿ ನ್ಯಾಯಾಲಯ ನಂಬಿದೆ ಎಂದು ಭರವಸೆ ವ್ಯಕ್ತಪಡಿಸಿದೆ.

ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲ(Advocate) ವೆಂಕಟೇಶ್‌ ದಳವಾಯಿ, ‘ಅತ್ಯಾಧುನಿಕ ತಂತ್ರಜ್ಞಾನ(Advanced Technology) ಆಧಾರಿತ ಆ್ಯಂಬುಲೆನ್ಸ್‌ ನಿರ್ವಹಣಾ ವ್ಯವಸ್ಥೆ’ ಜಾರಿಗೆ ಮೊದಲು ಕರೆದಿದ್ದ .1,800 ಕೋಟಿ ಮೊತ್ತದ ಟೆಂಡರ್‌ ಅನ್ನು ಸರ್ಕಾರ ರದ್ದುಪಡಿಸಿ ಆದೇಶಿಸಿತ್ತು. ಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿದ ಪರಿಣಾಮ ಆ ಆದೇಶ ಹಿಂಪಡೆದಿದ್ದ ಸರ್ಕಾರ ಹೊಸದಾಗಿ ಟೆಂಡರ್‌ ಕರೆಯುವುದಾಗಿ ಹೇಳಿತ್ತು. ಈವರೆಗೂ ಟೆಂಡರ್‌ ಕರೆದಿಲ್ಲ ಎಂದು ನ್ಯಾಯಾಲಯದ ಗಮನಕ್ಕೆ ತಂದರು.

ಗಡಿನಾಡ ಸಂಚಾರ ತಡೆದ ಕರ್ನಾಟಕ ಸರ್ಕಾರಕ್ಕೆ ಕೇರಳ ಹೈಕೋರ್ಟ್‌ ತರಾಟೆ

ಸರ್ಕಾರಿ ವಕೀಲರು ಹಾಜರಾಗಿ, ಟೆಂಡರ್‌(Tender) ಕರೆಯಲು ಅನುಮತಿ ನೀಡುವ ವಿಚಾರವನ್ನು ಸಚಿವ ಸಂಪುಟದ ಮುಂದಿದೆ. ಎರಡು ವಾರ ಕಾಲಾವಕಾಶ ನೀಡಿದರೆ ಸಚಿವ ಸಂಪುಟದ(Cabinet) ಅನುಮೋದನೆ ಪಡೆದು ನ್ಯಾಯಾಲಯಕ್ಕೆ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.

ಅದನ್ನು ಆಕ್ಷೇಪಿಸಿದ ನ್ಯಾಯಪೀಠ, ಸಚಿವ ಸಂಪುಟದ ಅನುಮತಿ ಪಡೆಯಲು ಹೈಕೋರ್ಟ್‌ 2021ರ ಆ.31ರಂದು ಕಾಲಾವಕಾಶ ನೀಡಿತ್ತು. ಅದೇ ಸ್ಥಿತಿ ಇಂದು ಸಹ ಇದೆ. ಈವರೆಗೆ ಏಕೆ ಸಚಿವ ಸಂಪುಟದ ಮುಂದೆ ಈ ವಿಚಾರವನ್ನು ಇಡಲಿಲ್ಲ, ಈ ನಡುವೆ ಸಚಿವ ಸಂಪುಟ ಸಭೆ ನಡೆದಿಲ್ಲವೇ ಎಂದು ಖಾರವಾಗಿ ಪ್ರಶ್ನಿಸಿತು.

8 ವರ್ಷ, ದಿನಗೂಲಿ ಕಾರ್ಮಿಕನಿಗೆ ಸಿಗದ ರೇಷನ್ ಕಾರ್ಡ್‌: ದೆಹಲಿ ಸರ್ಕಾರಕ್ಕೆ ಹೈಕೋರ್ಟ್‌ ತರಾಟೆ!

ಪ್ರತ್ಯೇಕ ಕಂಟ್ರೋಲ್‌ ರೂಂ ತೆರೆಯಲು ಏಕೆ ಪರಿಗಣಿಸಿಲ್ಲ

ಸರ್ಕಾರಿ ವಕೀಲರು, 10 ದಿನ ಕಾಲಾವಕಾಶ ನೀಡಿದರೆ ಅಗತ್ಯ ಕ್ರಮ ಜರುಗಿಸಲಾಗುವುದು ಎಂದು ತಿಳಿದಾಗ ಬೇಸರ ವ್ಯಕ್ತಪಡಿಸಿದ ನ್ಯಾಯಪೀಠ, ಎಲ್ಲ ಪ್ರಕರಣಗಳಲ್ಲೂ ಸರ್ಕಾರ ಇದೇ ರೀತಿ ಹೇಳುತ್ತದೆ. ನಿತ್ಯ ಅಧಿಕಾರಿಗಳನ್ನು ಕೋರ್ಟ್‌ ಕರೆಯಿಸಿ ಸೂಚನೆ ನೀಡಬೇಕೆ? ಸರ್ಕಾರದ ಈ ಧೋರಣೆ ನಿಜಕ್ಕೂ ಸರಿಯಲ್ಲ ಎಂದು ಹೇಳಿತಲ್ಲದೇ, ಹಾಲಿಯಿರುವ 108 ಆ್ಯಂಬುಲೆನ್ಸ್‌ಗೆ ಜಿಪಿಎಸ್‌(GPS) ಅಳವಡಿಸಿ, ಅವುಗಳ ಸಂಚಾರವನ್ನು ನಿರ್ವಹಣೆ ಮಾಡಲು ಪ್ರತ್ಯೇಕ ಕಂಟ್ರೋಲ್‌ ರೂಂ(Separate Control Room) ತೆರೆಯುವ ವಿಚಾರವನ್ನು ಈವರೆಗೂ ಏಕೆ ಪರಿಗಣಿಸಿಲ್ಲ ಎಂಬುದು ಸಹ ಅರ್ಥವಾಗುತ್ತಿಲ್ಲ ಎಂದು ತರಾಟೆಗೆ ತೆಗೆದುಕೊಂಡಿತು.
 

Follow Us:
Download App:
  • android
  • ios