ಸುದ್ದಿ ಮಾಧ್ಯಮಗಳ ಮೇಲೆ ನಿರ್ಬಂಧ ಹಾಕಲು ಸಾಧ್ಯವಿಲ್ಲ; ಹೈಕೋರ್ಟ್

* ಮಾಧ್ಯಮಗಳು ಜನರಲ್ಲಿ ಭಯ ಹುಟ್ಟಿಸುವ ಕೆಲಸ ಮಾಡುತ್ತಿದ್ದು ಅದನ್ನು ತಡೆಯಬೇಕು
* ಕರ್ನಾಟಕ ಹೈಕೋರ್ಟ್ ಗೆ ಸಾರ್ವಜನಿಕ  ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು
* ವೀಕ್ಷಕರು ಚಾನಲ್ ಬದಲಿಸುವ ಆಯ್ಕೆಯೂ ಇದೆ.  ನಿಮಗೆ ಉತ್ತಮವಾದುದ್ದನ್ನು ವೀಕ್ಷಿಸಲು ಚಾನಲ್ ಬದಲಿಸಬಹುದು
*  ಮಾಧ್ಯಮಗಳ ಮೇಲೆ ಈ ರೀತಿ ನಿಯಂತ್ರಣ ಹಾಕಲು ಸಾಧ್ಯವಿಲ್ಲ

Karnataka High Court dismisses PIL seeking order to restrain news channels  mah

ಬೆಂಗಳೂರು(ಮೇ 12) ಕೋವಿಡ್ ನಿಂದ ಸಾವನ್ನಪ್ಪುವ ದೃಶ್ಯಗಳಿಗೆ ಮಾಧ್ಯಮದಲ್ಲಿ ನಿರ್ಬಂಧ ಕೋರಿ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿದ್ದ  ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆದಿದೆ.

ಲೆಟ್ಸ್ ಕಿಟ್ ಫೌಂಡೇಶನ್ ಪಿಐಎಲ್ ಸಲ್ಲಿಸಿತ್ತು. ಮಾಧ್ಯಮಗಳು ಜೀವಭಯದ ಫೋಬಿಯಾ ಹುಟ್ಟಿಸುತ್ತಿವೆ ಕೋವಿಡ್ ನಿಂದ ನರಳುವ ಸಾವಿನ ದೃಶ್ಯ ಪ್ರಸಾರ  ಮಾಡುತ್ತಿವೆ. ಸೋಂಕಿತರಲ್ಲಿ ಸಾವಿನ ಭೀತಿ ಹುಟ್ಟಿಸುವ ರೀತಿಯಲ್ಲಿ ಸುದ್ದಿ ಪ್ರಸಾರ  ಮಾಡಲಾಗುತ್ತಿದೆ ಎಂದು ಆರೋಪಿಸಿತ್ತು.

ಇಂಥ ದೃಶ್ಯಗಳು ಜನರಲ್ಲಿ ಭಯ, ಆತಂಕ, ಖಿನ್ನತೆ ಮೂಡಿಸುತ್ತಿದೆ ಚಿತಾಗಾರಗಳ ದೃಶ್ಯಗಳನ್ನು ಪ್ರಸಾರ ಮಾಡಲಾಗುತ್ತಿದೆ. ವೀಕ್ಷಕರಿಗೆ ಮಾನಸಿಕ ಒತ್ತಡವಾಗಿ ಸಾವು ಸಂಭವಿಸಬಹುದು. ಮಾಧ್ಯಮಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಡಿಸಾಸ್ಟರ್ ಮ್ಯಾನೇಜ್ ಮೆಂಟ್ ಕಾಯ್ದೆಯಡಿ  ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿಕೊಂಡಿತ್ತು.

ಮನೆಯಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳುವುದು ಹೇಗೆ; ತಜ್ಞರಿಂದ ಅಮೂಲ್ಯ ಮಾಹಿತಿ

ಇದನ್ನು ವಿಚಾರಣೆ ನಡೆಸಿದ ನ್ಯಾಯಾಲಯ, ಈ ಬಗ್ಗೆ ಸಂಬಂಧಿಸಿದ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿ ಎಂದು ಸೂಚಿಸಿದೆ.  ವೀಕ್ಷಕರು ಚಾನಲ್ ಬದಲಿಸುವ ಆಯ್ಕೆಯೂ ಇದೆ.  ನಿಮಗೆ ಉತ್ತಮವಾದುದ್ದನ್ನು ವೀಕ್ಷಿಸಲು ಚಾನಲ್ ಬದಲಿಸಬಹುದು ಎಂದು ಸಿಜೆ ಎಎಸ್ ಒಕಾ ನೇತೃತ್ವದ ಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ. ಕೆಲ ದಿನಗಳ ಹಿಂದೆ ದೆಹಲಿ ಹೈಕೋರ್ಟ್ ಸಹ ಇಂಥದ್ದೇ ಮಾತು ಹೇಳಿತ್ತು.

Karnataka High Court dismisses PIL seeking order to restrain news channels  mah

 

Latest Videos
Follow Us:
Download App:
  • android
  • ios