Asianet Suvarna News

ಸೋಂಕು ತಡೆಯಲು ಸಚಿವರ ಮೆಗಾ ಪ್ಲಾನ್: ರಾಜ್ಯದ ರೆಡ್‌ ಲೈಟ್‌ ಏರಿಯಾಗೆ ಬೀಗ?

ಲೈಂಗಿಕ ಚಟುವಟಿಕೆ ತಾಣಗಳಿಗೆ ಬೀಗ ಹಾಕಿದ್ರೆ ಶೇ 72ರಷ್ಟು ಕೊರೋನಾ ತಡೆಯಬಹುದು| ವಿಜ್ಞಾನಿಗಳ ಎಚ್ಚರಿಕೆ ಬೆನ್ನಲ್ಲೇ ರಾಜ್ಯದಲ್ಲಿ ಕಾರ್ಯ ಪ್ರವೃತ್ತರಾದ ಆರೋಗ್ಯ ಸಚಿವ| ರಾಜ್ಯದ ರೆಡ್‌ ಲೈಟ್‌ ಏರಿಯಾಗಳನ್ನು ಮುಚ್ಚುವಂತೆ ಆದೇಶಿಸಿ ಎಂದು ಗೃಹ ಇಲಾಖೆಗೆ ಮನವಿ ಮಾಡಿದ ಸಚಿವ

Karnataka Health Minister B Sriramulu seeks Home department aid to curb sex work
Author
Bangalore, First Published May 18, 2020, 1:10 PM IST
  • Facebook
  • Twitter
  • Whatsapp

ಬೆಂಗಳೂರು(ಮೇ.18): ಲೈಂಗಿಕ ಚಟುವಟಿಕೆಗಳ ತಾಣಗಳ ಮೇಲಿನ ನಿರ್ಬಂಧವನ್ನು ಸಡಿಲಿಸಿದರೆ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತವೆ ಎಂದು ವಿಜ್ಞಾನಿಗಳು ಈಗಾಗಲೇ ಎಚ್ಚರಿಸಿದ್ದಾರೆ. ಈ ಎಚ್ಚರಿಕೆ ಬೆನ್ನಲ್ಲೇ ಸೋಂಕು ತಡೆಯುವ ನಿಟ್ಟಿನಲ್ಲಿ ಕರ್ನಾಟಕ ಆರೋಗ್ಯ ಸಚಿವ ಶ್ರೀರಾಮುಲು, ರಾಜ್ಯ ಗೃಹ ಇಲಾಖೆಗೆ ಮಹತ್ವದ ಮನವಿಯೊಂದನ್ನು ಮಾಡಿಕೊಂಡಿದ್ದು, ರಾಜ್ಯದ ವಿವಿಧ ಭಾಗದಲ್ಲಿರುವ ಲೈಂಗಿಕ ಚಟುವಟಿಕೆ ತಾಣ(ರೆಡ್‌ ಲೈಟ್‌ ಏರಿಯಾ)ಗಳನ್ನು ಮುಚ್ಚುವಂತೆ ಆಗ್ರಹಿಸಿದ್ದಾರೆ.

ಇಂತಹ ಸಂಕಷ್ಟದ ಸಮಯದಲ್ಲಿ ಜೀವಕ್ಕೆ ಮಾರಕವಾಗುವಂತಹ ರೆಡ್‌ ಲೈಟ್‌ ಏರಿಯಾಗಳನ್ನು ಮುಚ್ಚಿ, ಈ ಉದ್ಯಮದ ಮೇಲೆ ನಿರ್ಬಂಧ ಹೇರುವಂತೆ ನಾನು ಗೃಹ ಇಲಾಖೆಗೆ ಮನವಿ ಮಾಡಿಕೊಂಡಿದ್ದೇನೆ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ. ಇದೇ ವೇಳೆ ಲೈಂಗಿಕ ಕಾರ್ಯಕರ್ತೆಯರ ಸುರಕ್ಷತೆಗಾಗಿ ಅವರು ಆರೋಗ್ಯ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣಾ ಸಂಸ್ಥೆಗೆ ಲೈಂಗಿಕ ಕಾರ್ಯಕರ್ತರು ಹಾಗೂ ತೃತೀಯ ಲಿಂಗಿಗಳಿಗೆ ಪುನರ್ವಸತಿ ಕಲ್ಪಿಸುವ ವಿಚಾರವಾಗಿ ಸವಿಸ್ತಾರವಾದ ವರದಿ ನೀಡುವಂತೆಯೂ ಆದೇಶಿಸಿದ್ದಾರೆ.

ಕಾಮಾಟಿಪುರದ ವೇಶ್ಯೆಯರು ಈಗೇನು ಮಾಡುತ್ತಿದ್ದಾರೆ!

ಇನ್ನು ಬರಹಗಾರ್ತಿ ಹಾಗೂ ಸಾಮಾಜಿಕ ಕಾರ್ಯಕರ್ತೆ ರೂಪಾ ಹಾಸನ ಕೂಡಾ ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರಿ ಈ ಸಂಬಂಧ ಪತ್ರ ಬರೆದಿದ್ದು‘ಕೊರೋನಾ ಸೋಂಕು ಹರಡುವಿಕೆ ತಡೆಯುವ ನಿಟ್ಟಿನಲ್ಲಿ ವೇಶ್ಯಾವಾಟಿಕೆಗೆ ನಿರ್ಬಂಧ ಹೇರಿ, ಲೈಂಗಿಕ ಕಾರ್ಯಕರ್ತರಿಗೆ ಪುನರ್ವಸತಿ ಒದಗಿಸಬೇಕು’ ಎಂದು ಅಗ್ರಿಸಿದ್ದರು. ಈ ಪತ್ರದ ಬೆನ್ನಲ್ಲೇ ಶ್ರೀರಾಮುಲು ಇಂತಹುದ್ದೊಂದು ಮನವಿ ಮಾಡಿದ್ದಾರೆಂಬುವುದು ಉಲ್ಲೇಖನೀಯ.

ರೆಡ್‌ ಲೈಟ್ ಏರಿಯಾ ಮುಚ್ಚಿದರೆ ಶೇ 72ರಷ್ಟು ಕೊರೋನಾ ತಡೆಯಬಹುದು

ಕೋರೋನಾ ವೈರಸ್‌ಗೆ ಲಸಿಕೆ ಕಂಡುಹಿಡಿಯುವವರೆಗೆ ಭಾರತದಲ್ಲಿ ಕಾರ್ಯ ನಿರ್ವಿಸುತ್ತಿರುವ ರೆಡ್‌ ಲೈಟ್ ಪ್ರದೇಶಗಳನ್ನು ಮುಚ್ಚಿದರೆ, ಅಂದಾಜಿಸಲಾದ ಹೊಸ ಪ್ರಕರಣಗಳ ಪೈಕಿ ಶೇ 72ರಷ್ಟು ಸೋಂಕು ತಡೆಗಟ್ಟಲು ಸಾಧ್ಯವಿದೆ ಎಂದು ಈಗಾಗಲೇ ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಇನ್ನು ಈ ಪ್ರದೇಶಗಳ ಚಟುವಟಿಕೆ ಸ್ಥಗಿತಗೊಂಡರೆ ದೇಶದಲ್ಲಿ ಪ್ರಕರಣಗ ಕೂಡಾ ಗರಿಷ್ಠ ಮಟ್ಟ ತಲುಪುವುದು ಸದ್ಯದ ಲೆಕ್ಕಾಚಾರಕ್ಕಿಂತ 17 ದಿನ ವಿಳಂಬವಾಗಲಿದೆ’ ಎಂದೂ ತಿಳಿಸಿದ್ದಾರೆ.

ಕೊರೋನಾ ವೈರಸ್ ಹೊಡೆತಕ್ಕೆ ಸೆಕ್ಸ್ ಇಂಡಸ್ಟ್ರಿಯೇ ಮಟಾಷ್!

ವಿಜ್ಞಾನಿಗಳ ಈ ವರದಿಯನ್ನು ಕೇಂದ್ರ ಸರ್ಕಾರಕ್ಕೆ ತಲುಪಿದ್ದು, ಇಂತಹ ಚಟುವಟಿಕೆ ನಡೆಯುತ್ತಿರುವ ಎಲ್ಲಾ ರಾಜ್ಯ ಸರ್ಕಾರಗಳಿಗೂ ರವಾನೆಯಾಗಿದೆ. ಹೀಗಾಗಿ ಲಾಕ್‌ಡೌನ್ ತಸಡಿಲ ಹಾಗೂ ತೆರವುಗೊಳಿಸಿದರೂ ರೆಡ್‌ ಲೈಟ್ ಏರಿಯಾಗಳ ಮೇಲಿನ ನಿರ್ಭಂಧ ಮುಂದುವರೆಸಲು ಶಿಫಾರಸು ಮಾಡಲಾಗಿದೆ.

Follow Us:
Download App:
  • android
  • ios