Asianet Suvarna News Asianet Suvarna News

Coronavirus:ಕೊರೋನಾ ಹೊಸ ತಳಿ ಆತಂಕ, ಕರ್ನಾಟಕದಲ್ಲಿ ಕಟ್ಟೆಚ್ಚರ ವಹಿಸಲು ಸೂಚನೆ

* ಕೊರೋನಾ ವೈರಸ್ ಪ್ರಕರಣ ಹೊಸ ತಳಿ ಆತಂಕ
* ಹೊಸ ತಳಿಯ ಬಗ್ಗೆ ಕರ್ನಾಟಕದಲ್ಲಿ ಹೈಅಲರ್ಟ್
* ಕರ್ನಾಟಕದಲ್ಲೂ ಕಟ್ಟೆಚ್ಚರ ವಹಿಸಲು ಆರೋಗ್ಯ ಇಲಾಖೆ ಸೂಚನೆ

Karnataka Health Dept Takes strict measures against new variant coronavirus rbj
Author
Bengaluru, First Published Nov 26, 2021, 7:17 PM IST

ಬೆಂಗಳೂರು, (ನ.26): ಕೊರೋನಾ ವೈರಸ್​ನ( Coronavirus) ಹೊಸ ತಳಿಯ ಪ್ರಕರಣಗಳು ವಿದೇಶಗಳಲ್ಲಿ ಕಂಡುಬಂದಿರುವ ಹಿನ್ನೆಲೆಯಲ್ಲಿ ಕರ್ನಾಟಕ ಆರೋಗ್ಯ ಇಲಾಖೆ (Karnataka Health Department) ಅಲರ್ಟ್ ಆಗಿದೆ.

 ಹೊಸ ತಳಿ ವೇಗವಾಗಿ ಹರಡಲಿದೆ ಎಂದು ತಜ್ಞರಿಂದ ಎಚ್ಚರಿಕೆ ಹಾಗೂ ವ್ಯಾಕ್ಸಿನ್ ಪ್ರೊಟೆಕ್ಷನ್ ಮೀರಿ ಸೋಂಕು ತೀವ್ರತೆ ಬಗ್ಗೆ ಎಚ್ಚರಿಕೆ ಹಿನ್ನೆಲೆ ರಾಜ್ಯದಲ್ಲೂ ಕಟ್ಟೆಚ್ಚರ ವಹಿಸಲು ಆರೋಗ್ಯ ಇಲಾಖೆ ಸೂಚನೆ ನೀಡಿದೆ. 

Covid19: ಬೆಂಗ್ಳೂರಲ್ಲಿ ಮತ್ತೆ ಏರುತ್ತಿದೆ ಕೊರೋನಾ ಸೋಂಕು

ಹೊಸ ತಳಿಯ ಬಗ್ಗೆ ಕೇಂದ್ರದಿಂದಲೂ ಕಟ್ಟೆಚ್ಚರ ನೀಡಲಾಗಿದೆ. ಬೋಟ್ಸ್ವಾನಾದಲ್ಲಿ 3, ದಕ್ಷಿಣ ಆಫ್ರಿಕಾದಲ್ಲಿ 6 ಹೊಸ ಕೊವಿಡ್19 ತಳಿಯ ಕೇಸ್‌ಗಳು​ ಪತ್ತೆ ಆಗಿವೆ. ಹಾಂಗ್​ಕಾಂಗ್‌ನಲ್ಲಿ ಹೊಸ ತಳಿಯ 1 ಕೇಸ್ ಕಂಡುಬಂದಿದೆ. ಇದರಿಂದ ಕೆರ್ನಾಟಕದಲ್ಲಿ ಕೂಡ ಕಟ್ಟೆಚ್ಚರ ವಹಿಸಲಾಗಿದೆ. ಮೂರು ದೇಶಗಳಿಂದ ಕರ್ನಾಟಕ ರಾಜ್ಯಕ್ಕೆ ಬರುವವರಿಗೆ ಟೆಸ್ಟ್‌ ಕಡ್ಡಾಯ ಮಾಡಲಾಗಿದೆ.

ಟೆಸ್ಟ್, ಸ್ಕ್ರೀನಿಂಗ್ ಹಾಗೂ ಟ್ರ್ಯಾಕಿಂಗ್‌ ಮಾಡುವಂತೆ ಸೂಚನೆ ನೀಡಲಾಗಿದೆ. 3 ದೇಶಗಳಿಂದ ಬಂದಿರುವವರನ್ನು ಪತ್ತೆ ಹಚ್ಚಿ ಪರೀಕ್ಷೆ ಮಾಡಿ ಎಂದು ರಾಜ್ಯ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದೆ. 

ವಿದೇಶಗಳಿಂದ ರಾಜ್ಯಕ್ಕೆ ಬಂದವರಲ್ಲಿ ಪಾಸಿಟಿವ್ ಪ್ರಕರಣಗಳು ಕಂಡುಬಂದರೆ ಸ್ಯಾಂಪಲ್ಸ್‌ ಸೀಕ್ವೆನ್ಸಿಂಗ್ ಮಾಡಲು ಆರೋಗ್ಯ ಇಲಾಖೆ ಸಲಹೆ ನೀಡಿದೆ.

ಹೆಚ್ಚಿನ ಸಂಖ್ಯೆಯ ರೂಪಾಂತರಗಳನ್ನು ಹೊಂದಿರುವ ಹೊಸ ಕೊವಿಡ್ -19 (Covid-19) ರೂಪಾಂತರಿಯ ಯಾವುದೇ ಪ್ರಕರಣಗಳು ಭಾರತದಲ್ಲಿ ಇಲ್ಲಿಯವರೆಗೆ ವರದಿಯಾಗಿಲ್ಲ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎನ್ಐ ಶುಕ್ರವಾರ ವರದಿ ಮಾಡಿದೆ. 

ದಕ್ಷಿಣ ಆಫ್ರಿಕಾದ ವಿಜ್ಞಾನಿಗಳು ಬಿ.1.1.529 (B.1.1.529) ಎಂದು ಗುರುತಿಸಲಾದ ಕೊರೋನಾವೈರಸ್‌ನ (Coronavirus) ಹೊಸ ರೂಪಾಂತರವನ್ನು ಪತ್ತೆಹಚ್ಚಿರುವುದಾಗಿ ಘೋಷಿಸಿದ ನಂತರ, ದಕ್ಷಿಣ ಆಫ್ರಿಕಾ ಮತ್ತು ಇತರ ದೇಶಗಳು ಅಂತರಾಷ್ಟ್ರೀಯ ಪ್ರಯಾಣಿಕರನ್ನು ಕಠಿಣವಾಗಿ ಪರೀಕ್ಷಿಸಲು ಮತ್ತು ಪರೀಕ್ಷಿಸಲು ಕೇಂದ್ರವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ತಿಳಿಸಿದೆ.

ಹೊಸ ರೂಪಾಂತರದಲ್ಲಿನ ರೂಪಾಂತರಗಳ ವರದಿಗಳು ಗಂಭೀರವಾದ ಸಾರ್ವಜನಿಕ ಆರೋಗ್ಯ ಪರಿಣಾಮಗಳನ್ನು ಹೊಂದಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ(Union ministry of health and family welfare) ಹೇಳಿದೆ.

ಆನೇಕಲ್‌ನಲ್ಲಿ ಕೊರೋನಾ ಸ್ಫೋಟ
ಆನೇಕಲ್‌ನ ಬೋರ್ಡಿಂಗ್ ಶಾಲೆಯಲ್ಲಿ (Boarding School) 33ಕ್ಕೂ ಅಧಿಕ ವಿದ್ಯಾರ್ಥಿಗಳಲ್ಲಿ ಕೊರೋನಾ (Corona) ಸೋಂಕು ಕಾಣಿಸಿಕೊಂಡಿದ್ದು ಆತಂಕ ಹೆಚ್ಚಿಸಿದೆ. ಓರ್ವ ಸಿಬ್ಬಂದಿಗೂ ಇಂಟರ್‌ ನ್ಯಾಷನಲ್ ಶಾಲೆಯಲ್ಲಿ ವೈರಸ್ ಅಟ್ಯಾಕ್ ಆಗಿದೆ. ಇದರಿಂದ ಇದೀಗ ಎಲ್ಲಾ ವಿದ್ಯಾರ್ಥಿಗಳನ್ನು(Students) ಕ್ವಾರಂಟೈನ್ ಮಾಡಲಾಗಿದೆ. ಕೊರೋನಾ ಮಾರ್ಗಸೂಚಿ ಜಾರಿಗೊಳಿಸಲು ಸೂಚನೆ ನೀಡಲಾಗಿದೆ. ಶಾಲೆಯಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೂ ಟೆಸ್ಟ್ ಮಾಡಲಾಗುತ್ತಿದೆ. 300 ವಿದ್ಯಾರ್ಥಿಗಳಿಗೆ ಹಬ್ಬಿರುವ ಆತಂಕ ಇದೆ. 

ಒಂದೇ ಕಾಲೇಜಿನ 66 ವಿದ್ಯಾರ್ಥಿಗಳಿಗೆ ಕೊರೋನಾ
 ಧಾರವಾಡದ(Dharwad) ಸತ್ತೂರಿನಲ್ಲಿರುವ ಎಸ್‌ಡಿಎಂ ವೈದ್ಯಕೀಯ ಕಾಲೇಜಿನಲ್ಲಿ (SDM Medical College)  ಲಸಿಕೆ ಪಡೆದ 66 ವಿದ್ಯಾರ್ಥಿಗಳಲ್ಲಿ ಕೊರೋನಾ ವೈರಸ್ ಸೋಂಕು (Coroanvrus) ದೃಢಪಟ್ಟಿದ್ದು, ಲಸಿಕೆ ಪಡೆದ ಜನರಲ್ಲಿ ಮತ್ತೆ ಆತಂಕ ಸೃಷ್ಟಿಯಾಗಿದೆ.

ಇವರೆಲ್ಲರಲ್ಲೂ ಕೋವಿಡ್ ಲಕ್ಷಣಗಳಿಲ್ಲ((Covid Symptoms). ಆದರೆ ಸ್ವಲ್ಪ ಮೈಕೈ ನೋವು ಕಾಣಿಸಿಕೊಂಡಿದೆ. ಈವೇಳೆ ವಿದ್ಯಾರ್ಥಿಗಳೆಲ್ಲರನ್ನೂ ಪರೀಕ್ಷೆಗೆ ಒಳಪಡಿಸಿದಾಗ ಕೋವಿಡ್ ಸೋಂಕು ಇರುವುದು ದೃಢಪಟ್ಟಿದೆ ಎಂದು ತಿಳಿದು ಬಂದಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಎರಡು ಹಾಸ್ಟೆಲ್‌ಗಳನ್ನು (Hostel) ಸೀಲ್‌ಡೌನ್‌ (Seal Down)ಮಾಡಲಾಗಿದೆ.

ಸಂಸ್ಥೆಯಲ್ಲಿ ಪದವಿ ಓದುತ್ತಿರುವ 400 ವಿದ್ಯಾರ್ಥಿಗಳಲ್ಲಿ (Students) ಈಗಾಗಲೇ 300 ವಿದ್ಯಾರ್ಥಿಗಳ ಕೋವಿಡ್ ಪರೀಕ್ಷೆ ವರದಿ ಬಂದಿದ್ದು, 66 ವಿದ್ಯಾರ್ಥಿಗಳಲ್ಲಿ ಸೋಂಕು ದೃಢಪಟ್ಟಿದೆ. ಉಳಿದ 100 ವಿದ್ಯಾರ್ಥಿಗಳ ಸ್ವ್ಯಾಬ್ ಸಂಗ್ರಹಿಸಿ ಪರೀಕ್ಷಿಸಲಾಗುತ್ತಿದೆ. ಸೋಂಕಿತರನ್ನು ಪ್ರತ್ಯೇಕವಾಗಿ ಇರಿಸಲಾಗಿದೆ. ತಪಾಸಣೆಗೆ ಒಳಪಟ್ಟವರನ್ನು ಕೂಡ ಕ್ವಾರಂಟೈನ್ ಮಾಡಲಾಗಿದೆ. ಆವರಣದಲ್ಲಿರುವ ಎಲ್ಲಾ ವಿದ್ಯಾರ್ಥಿಗಳು ಹಾಗೂ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸುಮಾರು 3 ಸಾವಿರ ಸಿಬ್ಬಂದಿಯನ್ನೂ ತಪಾಸಣೆಗೆ ಒಳಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ..

Follow Us:
Download App:
  • android
  • ios