ವಿಶ್ವದಲ್ಲೇ ಕರ್ನಾಟಕ ರಾಜ್ಯ ಪೊಲೀಸ್ ಪಡೆ ಅತ್ಯುತ್ತಮವಾದ ಪಡೆಯಾಗಿದೆ ಎಂದು ನಿರ್ಗಮಿತ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಶ್ಲಾಘಿಸಿದ್ದಾರೆ.
ಬೆಂಗಳೂರು (ಮೇ.22): ವಿಶ್ವದಲ್ಲೇ ಕರ್ನಾಟಕ ರಾಜ್ಯ ಪೊಲೀಸ್ ಪಡೆ ಅತ್ಯುತ್ತಮವಾದ ಪಡೆಯಾಗಿದೆ ಎಂದು ನಿರ್ಗಮಿತ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಶ್ಲಾಘಿಸಿದ್ದಾರೆ. ಬುಧವಾರ ಕೋರಮಂಗಲದ ಕೆಎಸ್ ಆರ್‌ಪಿ ಮೈದಾನದಲ್ಲಿ ಪೊಲೀಸ್ ಇಲಾಖೆ ಆಯೋಜಿಸಿದ್ದ 'ಡಿಜಿ-ಐಜಿಪಿ ಪ್ರಶಂಸನಾ ಸೇವಾ ಪದಕ ಪ್ರದಾನ ಕವಾಯಿತು ಕಾರ್ಯಕ್ರಮದಲ್ಲಿಗೌರವವಂದನೆ ಸ್ವೀಕರಿಸಿ ಮಾತನಾಡಿದರು. ರಾಜ್ಯ ಪೊಲೀಸ್‌ಇಲಾಖೆಯಲ್ಲಿ 38 ವರ್ಷಗಳು ಸೇವೆ ಸಲ್ಲಿಸಿದ್ದಕ್ಕೆ ಗೌರವವಿದೆ. ರಾಜ್ಯ ಪೊಲೀಸ್ ಕೇಂದ್ರ ಕಚೇರಿ, ಸಿಐಡಿ, ಬೆಂಗಳೂರು ನಗರ, ಐಜಿಪಿ ವಲಯ ಹಾಗೂ ಜಿಲ್ಲೆ ಹೀಗೆ ಪ್ರತಿ ವಿಭಾಗದಲ್ಲಿ ನಾನು ಕೆಲಸ ಮಾಡಿದ್ದೇನೆ. ವಿದೇಶದಲ್ಲಿ ಸಹ ರಾಜ್ಯ ಪೊಲೀಸ್ ಇಲಾಖೆಯಿಂದ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸಿದ್ದೇನೆ ಎಂದು ಹೇಳಿದರು.
200 ಪೊಲೀಸರಿಗೆ ಪದಕ ಪ್ರದಾನ: ಇದೇ ವೇಳೆ ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ್ದ 200 ಮಂದಿ ಅಧಿಕಾರಿ-ಸಿಬ್ಬಂದಿಗೆಡಿಜಿ-ಐಜಿಪಿಪ್ರಶಂಸನಾ ಪದಕ ಪ್ರದಾನ ಮಾಡಲಾಯಿತು. ದೇಶ-ವಿದೇಶಗಳಲ್ಲಿ ಪೊಲೀಸ್ ಇಲಾಖೆಯನ್ನು ನೋಡಿದಾಗ ಕರ್ನಾಟಕ ಪೊಲೀಸ್ ಪಡೆ ಉತ್ತಮ ಪಡೆಯಾಗಿದೆ. ನಮಗೆ ಜರ್ಮನ್ ದೇಶದ ಪೊಲೀಸ್ ಇಲಾಖೆ ಜತೆ ಸಹಭಾಗಿತ್ವವಿತ್ತು. ಆಗ ಆ ದೇಶದ ಪೊಲೀಸ್ ಅಧಿಕಾರಿಗಳು ಹಾಗೂ ಸಂಸದರ ತಂಡ ರಾಜ್ಯಕ್ಕೆ ಭೇಟಿ ನೀಡಿ ಪೊಲೀಸ್ ಕಾರ್ಯನಿರ್ವಹಣೆ ಕುರಿತು ಮಾಹಿತಿ ಪಡೆದರು.
ನಮ್ಮ ರಾಜ್ಯದ ಪೊಲೀಸ್ ಪಡೆ ಕೆಲಸಗಳನ್ನು ನೋಡಿ ಯೂರೋಪಿಯನ್ ದೇಶಗಳಿಗಿಂತ ಅತ್ಯುತ್ತಮ ಪೊಲೀಸ್ ಪಡೆ ಎಂದು ಜರ್ಮನ್ ಪ್ರತಿನಿಧಿಗಳು ಪ್ರಶಂಸೆ ವ್ಯಕ್ತಪಡಿಸಿದ್ದರು ಎಂದು ಡಿಜಿಪಿ ಸಂತಸ ವ್ಯಕ್ತಪಡಿಸಿದರು. ವಿಶ್ವದ ಅತ್ಯುತ್ತಮ ಪೊಲೀಸ್ ಪಡೆಯಾಗಿರುವ ಕರ್ನಾಟಕ ಪೊಲೀಸ್ ಪಡೆಯಮುಖ್ಯಸ್ಥನಾಗಿ ಎರಡು ವರ್ಷ ಸೇವೆ ಸಲ್ಲಿಸಿದ್ದಕ್ಕೆ ನನಗೆ ಕೃತಜ್ಞತಾಭಾವವಿದೆ ಎಂದು ಸ್ಮರಿಸಿದರು.
ಮಳೆ ಬಂದರೆ ಬದುಕೇ ದುಸ್ತರ: ಸಿಎಂ ಸಿದ್ದರಾಮಯ್ಯ ಎದುರು ಜನರ ಕಣ್ಣೀರು
ಲೋಕಾಯುಕ್ತ ಐಜಿಪಿ ಸುಬ್ರಹ್ಮಣ್ಯಶ್ವರ ರಾವ್, ಕೇಂದ್ರ ವಲಯ ಐಜಿಪಿ ಲಾಬೂರಾಮ್, ಕೆಎಸ್‌ಆರ್‌ಪಿ ಐಜಿಪಿ ಸಂದೀಪ್ ಪಾಟೀಲ್, ಬೆಂಗಳೂರು ನಗರ ಹೆಚ್ಚುವರಿ ಆಯುಕ್ತ (ಗುಪ್ತದಳ) ರಮಣ ಗುಪ್ತ, ಉತ್ತರ ವಲಯ ಐಜಿಪಿ ಚೇತನ್ ಸಿಂಗ್ ರಾಥೋಡ್, ಐಜಿಪಿ ತ್ಯಾಗರಾಜನ್, ಸಿಸಿಬಿ ಮುಖ್ಯಸ್ಥ ಡಾ.ಚಂದ್ರಗುಪ್ತ, ದಕ್ಷಿಣ ವಲಯ ಡಿಐಜಿ ಡಾ.ಬೋರಲಿಂಗಯ್ಯ, ಕಲಬುರಗಿ ಆಯುಕ್ತ ಎಸ್.ಡಿ.ಶರಣಪ್ಪ, ಜಂಟಿ ಆಯುಕ್ತ (ಸಂಚಾರ) ಎಂ.ಎನ್.ಅನುಚೇತ್, ಜಂಟಿ ಆಯುಕ್ತರಾದ ಬಿ.ರಮೇಶ್, ಕುಲದೀಪ್ ಕುಮಾರ್.ಆರ್.ಜೈನ್, ಡಿಐಜಿಗಳಾದ ಭೂಷಣ ಬೊರಸೆ, ವಂಶಿಕೃಷ್ಣ, ಎಐಜಿಪಿ ಸಂಜೀವ್ ಪಾಟೀಲ್, ಡಿಸಿಪಿ ಶಿವಪ್ರಕಾಶ್, ಸಿಐಡಿ ಎಸ್ಪಿ ರಾಘವೇಂದ್ರ ಹೆಗಡೆ, ತುಮಕೂರು ಎಸ್ಪಿ ಅಶೋಕ್, ಡಿವೈಎಸ್ಪಿ ಬಿ.ಬಾಲರಾಜ್ ಹಾಗೂ ಎಸಿಪಿಟಿ.ಮಹದೇವ್ ಸೇರಿ ಇತರರು ಪುರಸ್ಕಾರಕ್ಕೆ ಪಾತ್ರರಾದರು.


