Asianet Suvarna News Asianet Suvarna News

ಡಿ. ರೂಪಾ ಸೇರಿದಂತೆ 17 ಹಿರಿಯ ಪೊಲೀಸ್ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು ನಗರ ಪೊಲೀಸ್ ಆಯುಕ್ತರ ವರ್ಗಾವಣೆ ಬೆನ್ನಲ್ಲೇ ಇದೀಗ 17 ಹಿರಿಯ ಪೊಲೀಸ್ ಅಧಿಕಾರಿಗಳನ್ನ ಎತ್ತಂಗಡಿ ಮಾಡಲಾಗಿದೆ. ಪಟ್ಟಿ ಈ ಕೆಳಗಿನಂತಿದೆ.

Karnataka Govt transfers 17 police officers
Author
Bengaluru, First Published Aug 3, 2020, 7:31 PM IST

ಬೆಂಗಳೂರು, (ಆ.03): ಐಜಿಪಿ ರೂಪಾ ಡಿ ಮತ್ತು ಡಿಸಿಪಿ ರೋಹಿಣಿ ಕಟೋಚ್ ಸೇರಿದಂತೆ 17 ಪೊಲೀಸ್ ಅಧಿಕಾರಿಗಳನ್ನ ವರ್ಗಾವಣೆ ಮಾಡಲಾಗಿದೆ.

ಭಾಸ್ಕರ್ ರಾವ್ ಜಾಗಕ್ಕೆ ಕಮಲ್ ಪಂಥ್, ಬೆಂಗಳೂರಿಗೆ ಹೊಸ ಕಮಿಷನರ್

ರಾಜ್ಯ ಸರ್ಕಾರ ಇಂದು (ಸೋಮವಾರ) ಟ್ರಾನ್ಸ್‌ಫರ್ ಮಾಡಿ ಆದೇಶ ಹೊರಡಿಸಿದೆ. ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ವರ್ಗಾವಣೆ ಬೆನ್ನಲ್ಲೇ ಹಿರಿಯ ಪೊಲೀಸ್ ಅಧಿಕಾರಿಗಳನ್ನ ಎತ್ತಂಗಡಿ ಮಾಡಲಾಗಿದೆ.

ವರ್ಗಾವಣೆ ಪಟ್ಟಿ ಇಂತಿದೆ

1. ಉಮೇಶ್ ಕುಮಾರ್- ಎಡಿಜಿಪಿ ಸಿಐಡಿ ಬೆಂಗಳೂರು
2. ರೂಪಾ ಡಿ- ಐಜಿಪಿ, ಗೃಹ ಇಲಾಖೆ
3. ಎನ್​ ಶಶಿಕುಮಾರ್- ಎಸ್​ಪಿ ವೈರ್​ಲೆಸ್​, ಬೆಂಗಳೂರು
4. ಡಾ. ರೋಹಿಣಿ ಕಟೋಚ್ ಸಪೆಟ್- ಎಸ್​ಪಿ, ಸಿಐಡಿ ಬೆಂಗಳೂರು
5. ಎಮ್​ಎನ್​ ಅನುಚೇತ್- ಡಿಸಿಪಿ, ಕೇಂದ್ರ ವಿಭಾಗ ಬೆಂಗಳೂರು
6. ಬಿ. ರಮೇಶ್- ಎಸ್​ಪಿ, ಸಿಐಡಿ ಬೆಂಗಳೂರು
7. ಇಯಾದ ಮಾರ್ಟಿನ್ ಮಾರ್ಬನಿಯಂಗ್- ಎಸ್​ಪಿ, ಆ್ಯಂಟಿ ನಕ್ಸಲ್ ಫೋರ್ಸ್ ಕಾರ್ಕಳ, ಉಡುಪಿ
8. ನಿಕಮ್ ಪ್ರಕಾಶ್ ಅಮೃತ್- ಎಸ್​ಪಿ ರಾಯಚೂರು ಜಿಲ್ಲೆ
9. ಇಳಕ್ಕಿಯ ಕರುಣಾಗರನ್- ಎಸ್​ಪಿ ಕೆಜಿಎಫ್, ಕೋಲಾರ ಜಿಲ್ಲೆ
10. ಧರ್ಮೇಂದ್ರ ಕುಮಾರ್ ಮೀನ- ಡಿಸಿಪಿ ಉತ್ತರ ವಿಭಾಗ ಬೆಂಗಳೂರು ನಗರ
11. ಡಾ. ಸುಮನ್ ಡಿ. ಪನ್ನೇಕರ್- ಡೆಪ್ಯುಟಿ ಡೈರೆಕ್ಟರ್, ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು
12. ಹರೀಶ್ ಪಾಂಡೆ- ಡಿಸಿಪಿ, ದಕ್ಷಿಣ ವಿಭಾಗ ಬೆಂಗಳೂರು ನಗರ
13. ಮೊಹಮ್ಮದ್ ಸುಜೀತ್- ಡಿಸಿಪಿ, ಸಿಟಿ ಆರ್ಮ್ಡ್​ ರಿಸರ್ವ್, ಹೆಡ್​ ಕ್ವಾರ್ಟರ್ಸ್​ ಬೆಂಗಳೂರು
14. ಡಾ. ಸಿಮಿ ಮರಿಯಮ್ ಜಾರ್ಜ್- ಎಸ್​ಪಿ ಕಲಬುರಗಿ ಜಿಲ್ಲೆ
15. ಡಾ. ಸಿ ಬಿ ವೇದಮೂರ್ತಿ- ಎಸ್​ಪಿ, ಗುಪ್ತಚರ ಇಲಾಖೆ ಬೆಂಗಳೂರು
16. ಡಿ. ದೇವರಾಜ- ಡಿಸಿಪಿ ವೈಟ್​ ಫೀಲ್ಡ್ ವಿಭಾಗ, ಬೆಂಗಳೂರು ನಗರ
17. ಸಂಜೀವ್ ಎಮ್​ ಪಾಟೀಲ್- ಡಿಸಿಪಿ ಪಶ್ಚಿಮ ವಿಭಾಗ ಬೆಂಗಳೂರು ನಗರ

Follow Us:
Download App:
  • android
  • ios