Asianet Suvarna News Asianet Suvarna News

ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಅನುಮತಿ: ಇದಕ್ಕೆ ಬಿಡುಗಡೆಯಾಗಿದೆ ಮಾರ್ಗಸೂಚಿ

ಸಿನಿಮಾ ಮಂದಿರಗಳ ಹೌಸ್ ಪುಲ್ ಪ್ರದರ್ಶನಕ್ಕೆ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದ್ದು, ಅದು ಈ ಕೆಳಗಿನಂತಿದೆ.

Karnataka Govt Releases guidelines For film theatre House full rbj
Author
Bengaluru, First Published Feb 4, 2021, 7:04 PM IST

ಬೆಂಗಳೂರು, (ಫೆ.04):  ರಾಜ್ಯದಲ್ಲಿ ಚಿತ್ರಮಂದಿರಗಳ ಹೌಸ್ ಫುಲ್‌ ಪ್ರದರ್ಶನಕ್ಕೆ ಅನುಮತಿ ನೀಡಿದ್ದು, ಇದೀಗ ಇದಕ್ಕೆ ಮಾರ್ಗಸೂಚಿ ಪ್ರಕಟಿಸಿದೆ.

ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ಥಿಯೇಟರ್ ಹೌಸ್ ಪುಲ್ ಗೆ ಅನುಮತಿ ನೀಡಿದ್ದರೂ, ಶೇ.50ರಷ್ಟು ಭರ್ತಿಗೆ ಮಾರ್ಗಸೂಚಿ ಪ್ರಕಟಿಸಿತ್ತು. ಈ ಹಿನ್ನೆಲೆಯಲ್ಲಿ ಇಡೀ ಕನ್ನಡ ಚಿತ್ರರಂಗ ಇದಕ್ಕೆ ತೀವ್ರ ವ್ಯಕ್ತಪಡಿಸಿತ್ತು. 

ಸ್ಯಾಂಡಲ್‌ವುಡ್ ಒತ್ತಡಕ್ಕೆ ಮಣಿದ ಸರ್ಕಾರ: ಥಿಯೇಟರ್ ಹೌಸ್ ಫುಲ್‌ಗೆ ಅನುಮತಿ

ಇದರಿಂದ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ ಬಳಿಕ ಚಿತ್ರಮಂದಿರಗಳಲ್ಲಿ ಶೇಕಡಾ 100 ರಷ್ಟು ಪ್ರೇಕ್ಷಕರ ಅನುಮತಿ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಇದಕ್ಕೆ ಸರ್ಕಾರ ಹೊರ ಮಾರ್ಗಸೂಚಿಯನ್ನು ರಿಲೀಸ್ ಮಾಡಿದ್ದು, ಇದರಲ್ಲಿರುವ ಎಲ್ಲಾ ಅಂಶಗಳನ್ನು ತಪ್ಪದೇ ಪಾಲಿಸಬೇಕೆಂದು ಸೂಚಿಸಿದೆ.

ತಾಂತ್ರಿಕ ಸಲಹಾ ಸಮಿತಿಯ ಶಿಫಾರಸ್ಸಿನಂತೆ ಈ ಅಂಶಗಳ ಕಟ್ಟು ನಿಟ್ಟಿನ ಅನುಷ್ಠಾನಕ್ಕೆ ವಿಶೇಷ ಗಮನ ವಹಿಸಲು ಸೂಚಿಸಿದೆ.

ಮಾರ್ಗಸೂಚಿ ಇಂತಿದೆ

* ಸಿನಿಮಾ ವೀಕ್ಷಿಸಲು ಸಮಯವೂ ಸೇರದಂತೆ ಎಲ್ಲಾ ಸಮಯಲ್ಲೂ ಪ್ರೇಕ್ಷಕರು ಮಾಸ್ಕ್ ಧರಿಸಿರುವುದನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಸೂಕ್ತ ಮೇಲ್ವಿಚಾರಣೆ ನಡೆಸುವುದು.

* ಗ್ರಾಹಕರು ಸಿನಿಮಾ ಟಿಕೆಟ್ ಬುಕ್ಕಿಂಗ್, ಖರೀದಿಸುವ ಸಮಯದಲ್ಲಿ ಅವರ ಹೆಸರು ಹಾಗೂ ಮೊಬೈಲ್ ಸಂಖ್ಯೆಗಳನ್ನು ಸಂಗ್ರಹಿಸಬೇಕು. ಇದರಿಂದ ಸಂಪರ್ಕಿತರ ಮಾಹಿತಿ ಪಡೆಯುವುದು ಹಾಗೂ ಕೋವಿಡ್-19 ಪರೀಕ್ಷೆ ನಡೆಸಲು ಸಹಾಯವಾಗುವುದು

* ಹವಾ ನಿಯಂತ್ರಕಗಳು, ಯಾವುದೇ ಕೂಲಿಂಗ್ ವ್ಯವಸ್ಥೆಯ ಬಳಕೆಯಲ್ಲಿ ಸಿಪಿಡ್ಲ್ಯೂಡಿ ಮಾರ್ಗಸೂಚಿಯನ್ನು ಪಾಲಿಸುವುದು

*  ಪ್ರತಿ ಪ್ರದರ್ಶನದಲ್ಲಿ ಎರಡು ಮಧ್ಯಂತರ ವಿರಾಮಗಳನ್ನು ನೀಡುವುದು

* ಪ್ರಮುಖ, ಆಯಕಟ್ಟಿನ ಸ್ಥಳಗಳಲ್ಲಿ ಕೋವಿಡ್-19ನ ನಿಯಂತ್ರಣ ಹಾಗೂ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಮಾಡಬೇಕಾದು, ಮಾಡಬಾರದಾದ ವಿವರಗಳನ್ನು ಪ್ರದರ್ಶಿಸುವುದು

Follow Us:
Download App:
  • android
  • ios