ಗ್ರಾಮೀಣ ಭಾಗದ ಜನರು ಇನ್ನು ವಾಸ ಸ್ಥಳ ಪ್ರಮಾಣ ಪತ್ರಕ್ಕಾಗಿ ಪಟ್ಟಣಕ್ಕೆ ಅಲೆದಾಡಬೇಕಿಲ್ಲ. ಊರಿನ ಗ್ರಾಮಪಂಚಾಯ್ತಿಗಳಲ್ಲೇ ದೃಢೀಕರಣ ಪತ್ರ ಪಡೆಯಬಹುದಾಗಿದೆ. ರಾಜ್ಯ ಸರ್ಕಾರ ಈ ಬಗ್ಗೆ ಪಿಡಿಓಗಳಿಗೆ ಮಹತ್ವದ ಆದೇಶ ಹೊರಡಿಸಿದೆ. ಹೆಚ್ಚಿನ ವಿವರಗಳಿಗೆ ಪೂರ್ತಿ ಓದಿ.

ಬೆಂಗಳೂರು (ಜೂ.21): ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಗ್ರಾಮ ಪಂಚಾಯತಿಗಳಲ್ಲೇ ‘ವಾಸ ಸ್ಥಳ ದೃಢೀಕರಣ ಪತ್ರ’(Residence confirmation letter) ನೀಡುವಂತೆ ಪಂಚಾಯತಿ ಅಭಿವೃದ್ಧಿ ಅಧಿಕಾರಿ(PDO)ಗಳಿಗೆ ರಾಜ್ಯ ಸರ್ಕಾರ ಆದೇಶಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪಂಚಾಯತಿ ಅಭಿವೃದ್ಧಿ ಅಧಿಕಾರಿಯು ತಮ್ಮ ಗ್ರಾಪಂ ವ್ಯಾಪ್ತಿಯ ಅರ್ಹ ನಿವಾಸಿಗಳಿಗೆ ಒಂದು ಬಾರಿಗೆ ಅಭಿಯಾನ ಮಾದರಿಯಲ್ಲಿ ವಾಸ ಸ್ಥಳ ಪ್ರಮಾಣ ಪತ್ರ ನೀಡಬೇಕು. ಇದಕ್ಕಾಗಿ ಪ್ರಸ್ತುತ ಅಟಲ್ ಜೀ ಜನಸ್ನೇಹಿ ಕೇಂದ್ರದ ತಂತ್ರಾಂಶದಲ್ಲಿ ಲಭ್ಯವಿರುವ ಸೇವೆಯನ್ನು ಬಳಸಿಕೊಳ್ಳಬೇಕು. ವಾಸ ಸ್ಥಳ ಪ್ರಮಾಣ ಪತ್ರ ನೀಡಲು ಯಾವುದೇ ಸೇವಾ ಶುಲ್ಕವನ್ನು ವಿಧಿಸುವಂತಿಲ್ಲ. ವಾಸ ಸ್ಥಳ ದೃಢೀಕರಣ ಪತ್ರ ನೀಡಲು ಅಗತ್ಯವಿರುವ ದಾಖಲೆಗಳು ಮತ್ತು ಕಾರ್ಯವಿಧಾನದ ಕುರಿತು ಪ್ರತ್ಯೇಕ ಮಾರ್ಗಸೂಚಿ ಹೊರಡಿಸುವುದಾಗಿ ಆದೇಶದಲ್ಲಿ ತಿಳಿಸಲಾಗಿದೆ.

ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್‌) ವೇಳೆ ಗ್ರಾಮೀಣ ಭಾಗದ ಜನರಿಗೆ ವಾಸಸ್ಥಳದ ದಾಖಲೆ ಸಮಸ್ಯೆ ಆಗಬಾರದು ಎಂಬ ಕಾರಣಕ್ಕೆ ಸರ್ಕಾರ ಈ ತೀರ್ಮಾನ ಮಾಡಿದೆ ಎನ್ನಲಾಗಿದೆ.