ಪತ್ರಿಕಾ ವಿತರಕರಿಗೆ ಸರ್ಕಾರದಿಂದ ಗುಡ್ ನ್ಯೂಸ್

  • ಪತ್ರಿಕಾ ವಿತರಕನ್ನು ಅಸಂಘಟಿತ ಕಾರ್ಮಿಕರು ಎಂದು ಘೋಷಿಸುವ ವಿಚಾರ ತಾಂತ್ರಿಕ ಸಮಸ್ಯೆಯಿಂದಾಗಿ ನೆನೆಗುದಿಗೆ
  • ಈ ಬಗ್ಗೆ ಕೂಡಲೇ ಅಗತ್ಯ ಕ್ರಮ ಕೈಗೊಳ್ಳುವೆ ಎಂದು ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್‌ ಭರವಸೆ
karnataka Govt good news for newspaper distributors snr

  ಬೆಂಗಳೂರು (ಸೆ.04):  ಪತ್ರಿಕಾ ವಿತರಕನ್ನು ಅಸಂಘಟಿತ ಕಾರ್ಮಿಕರು ಎಂದು ಘೋಷಿಸುವ ವಿಚಾರ ತಾಂತ್ರಿಕ ಸಮಸ್ಯೆಯಿಂದಾಗಿ ನೆನೆಗುದಿಗೆ ಬಿದ್ದಿತ್ತು. ಈ ಬಗ್ಗೆ ಕೂಡಲೇ ಅಗತ್ಯ ಕ್ರಮ ಕೈಗೊಳ್ಳುವೆ ಎಂದು ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್‌ ಭರವಸೆ ನೀಡಿದ್ದಾರೆ.

  ಪತ್ರಿಕಾ ವಿತರಣೆಯನ್ನೇ ಜೀವನಾಧಾರವಾಗಿ ಬದುಕುತ್ತಿರುವ ಪತ್ರಿಕಾ ವಿತರಕರಿಗೆ ಕೋವಿಡ್‌ ಸಂಕಷ್ಟದಿಂದ ಜೀವನ ನಿರ್ವಹಣೆ ಕಷ್ಟವಾಗಿದೆ. ಪತ್ರಿಕಾ ವಿತರಕರನ್ನು ಅಸಂಘಟಿತ ಕಾರ್ಮಿಕರೆಂದು ಘೋಷಿಸುವ ವಿಚಾರ ತಾಂತ್ರಿಕ ಕಾರಣದಿಂದ ವಿಳಂಬವಾಗಿದೆ. ಈ ವಿಚಾರದ ಬಗ್ಗೆ ಕೂಡಲೇ ನಾನು ಕ್ರಮ ಕೈಗೊಳ್ಳಲಿದ್ದು, ಸಂಬಂಧಿಸಿದ ಕಡತ ಪರಿಶೀಲಿಸಿ ಸಾಧ್ಯವಾದಷ್ಟುಶೀಘ್ರ ಪತ್ರಿಕಾ ವಿತರಕರನ್ನು ಅಸಂಘಟಿತ ಕಾರ್ಮಿಕರಾಗಿ ಘೋಷಿಸುವೆ ಎಂದು ಹೇಳಿದರು.

ಸರ್ಕಾರ ಪತ್ರಿಕಾ ವಿತರಕರಿಗೂ ಸಹಾಯ ಮಾಡಬೇಕು: ಸರ್ಕಾರಕ್ಕೆ ಸಿದ್ದರಾಮಯ್ಯ ಒತ್ತಾಯ

ಕೋವಿಡ್‌-19 ಅಲೆಯ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಪತ್ರಿಕಾ ವಿತರಕರು ಕೋವಿಡ್‌ ಮುಂಚೂಣಿ ಕಾರ್ಯಕರ್ತರಂತೆ ಕೆಲಸ ಮಾಡಿದ್ದಾರೆ. ಸೋಂಕಿನ ಭೀತಿಯ ನಡುವೆಯೇ ಮನೆಮನೆಗೆ ಪತ್ರಿಕೆಗಳನ್ನು ತಲುಪಿಸಿ ಸರ್ಕಾರ ಮತ್ತು ಜನರ ನಡುವಿನ ಸಂಪರ್ಕ ಮಾಧ್ಯಮವಾಗಿ ಕಾರ್ಯನಿರ್ವಹಿಸಿದ್ದಾರೆ. ಈ ಶ್ರಮಿಕ ವರ್ಗಕ್ಕೆ ಸರ್ಕಾರದಿಂದ ದೊರೆಯಬೇಕಾದ ಎಲ್ಲ ಸವಲತ್ತು ಒದಗಿಸಲು ಪ್ರಯತ್ನಿಸುವೆ ಎಂದರು.

ಅಲ್ಲದೆ, ರಾಜ್ಯದ ಎಲ್ಲ ಪತ್ರಿಕಾ ವಿತರಕರಿಗೆ ವಿಶ್ವ ಪತ್ರಿಕಾ ವಿತರಕರ ದಿನಾಚರಣೆಯ ಶುಭಾಶಯ ಕೋರಿದರು.

Latest Videos
Follow Us:
Download App:
  • android
  • ios