ಕಲ್ಯಾಣ ಮಂಟಪಗಳಲ್ಲಿ ಮದುವೆಗೆ ಷರತ್ತುಬದ್ಧ ಅನುಮತಿ

* ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆ ಅಂತ್ಯ
*  ಕಲ್ಯಾಣ ಮಂಟಪಗಳಲ್ಲಿ ಮದುವೆಗೆ ಷರತ್ತುಬದ್ಧ ಅನುಮತಿ 
* ಡೆಲ್ಟಾ ವೈರಸ್‌ ಬಗ್ಗೆ ಸುದೀರ್ಘ ಚರ್ಚೆ

Karnataka Govt Gives Permeation to reopen marriage halls from June 27th rbj

ಬೆಂಗಳೂರು, (ಜೂನ್.25): ಹಬ್ಬದ ರೀತಿಯಲ್ಲಿ ಕಂಗೊಳಿಸುತ್ತಿದ್ದ ಮದುವೆ ಕಲ್ಯಾಣ ಮಂಟಪಗಳು ಕೊರೋನಾ ಎರಡನೇ ಅಲೆಗೆ ಸಿಲುಕಿ ಬಂದ್ ಆಗಿದ್ದವು. ಇದೀಗ ಕಲ್ಯಾಣ ಮಂಟಪಗಳಲ್ಲಿ ಮದುವೆಗೆ ಷರತ್ತುಬದ್ಧ ಅನುಮತಿ ನೀಡಲಾಗಿದೆ.

ಹೌದು...ಕೋವಿಡ್ -19 ನಿಯಂತ್ರಣದ ಕುರಿತು ಇಂದು (ಶುಕ್ರವಾರ) ಮುಖ್ಯಮಂತ್ರಿ ನಿವಾಸದಲ್ಲಿ ನಡೆದ  ಸಚಿವರು ಹಾಗು ಅಧಿಕಾರಿಗಳ ಸಭೆಯಲ್ಲಿ  ಕಲ್ಯಾಣ ಮಂಟಪಗಳಲ್ಲಿ ಮದುವೆಗೆ ಷರತ್ತುಬದ್ಧ ಅನುಮತಿ ನೀಡಲು ತೀರ್ಮಾನಿಸಲಾಗಿದೆ.

ರಾಜ್ಯದಲ್ಲಿ 2 ಡೆಲ್ಟಾಪ್ಲಸ್‌ ಕೇಸ್‌ ಪತ್ತೆ, ಇಬ್ಬರೂ ಗುಣ

ಮದುವೆಗೆ 40 ಜನರಿಗೆ ಅವಕಾಶ ನೀಡಲಾಗಿದ್ದು, ಭಾಗಿಯಾಗುವವರಿಗೆ ಪಾಸ್ ಕಡ್ಡಾಯವಾಗಿರುತ್ತದೆ. ಹೋಟೆಲ್, ರೆಸಾರ್ಟ್ ಗಳು, ಪಾರ್ಟಿ ಹಾಲ್ ಗಳಲ್ಲಿಯೂ ಮದುವೆ ಮಾಡಬಹುದು. ಸೋಮವಾರದಿಂದ ಜಾರಿಗೆ ಬರುವಂತೆ ಷರತ್ತುಬದ್ಧ ಅನುಮತಿ ನೀಡಲು ನಿರ್ಧರಿಸಲಾಗಿದೆ.

ಇನ್ನು ಸಭೆಯಲ್ಲಿ ಡೆಲ್ಟಾ ಪ್ಲಸ್ ವೈರಸ್ ಬಗ್ಗೆ ನಿಗಾ ವಹಿಸಲು ಸಿಎಂ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಮಹಾರಾಷ್ಟ್ರದಲ್ಲಿ ಡೆಲ್ಟಾ ಪ್ಲಸ್ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಗಡಿಗಳಲ್ಲಿ ಕಟ್ಟೆಚ್ಚರ ವಹಿಸಬೇಕು ಎಂದು ತಿಳಿಸಿದರು.

ಅಲ್ಲದೇ ಮಹಾರಾಷ್ಟ್ರ ಮತ್ತು ಕೇರಳದಿಂದ ಬರುವವರ ಮೇಲೆ ತೀವ್ರ ನಿಗಾ ಇಟ್ಟು ಅವರನ್ನು ಕೊರೋನಾ ಟೆಸ್ಟ್ ಗೆ ಒಳಪಡಿಸುವಂತೆ ಸೂಚಿಸಿದರು.

Latest Videos
Follow Us:
Download App:
  • android
  • ios