ಸರ್ಕಾರ ಸೇಂದಿ ಇಳಿಸೋಕೆ ಅನುಮತಿ ಕೊಡದಿದ್ದರೆ, ಈಡಿಗರು ಮತದಾನ ಬಹಿಷ್ಕಾರ ಮಾಡ್ತೇವೆ; ಪ್ರಣವಾನಂದ ಸ್ವಾಮೀಜಿ
ಈಡಿಗರ ಕುಲ ಕಸುಬು ಸೇಂದಿ ಇಳಿಸುವುದಕ್ಕೆ ಸರ್ಕಾರ ಅನುಮತಿ ಕೊಡಬೇಕು. ಇಲ್ಲವಾದಲ್ಲಿ ಪರ್ಯಾಯ ವ್ಯವಸ್ಥೆ ಮಾಡಬೇಕು. ಎರಡನ್ನೂ ಮಾಡದಿದ್ದರೆ ಈಡಿಗರು ಲೋಕಸಭಾ ಚುನಾವಣೆ ಬಹಿಷ್ಕರಿಸುತ್ತಾರೆ ಎಂದು ಪ್ರಣವಾನಂದ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.
ಕಲಬುರಗಿ (ಏ.13): ತಲೆ ತಲಾಂತಗಳಿಂದ ಈಡಿಗ ಸಮುದಾಯದವರು ಸೇಂದಿ ಇಳಿದುವ ಕುಲ ಕಸುಬು ಮಾಡಿಕೊಂಡು ಬರುತ್ತಿದ್ದರು. ಆದರೆ, ಸರ್ಕಾರಗಳು ನಮ್ಮ ಕುಲ ಕಸುಬನ್ನು ಕಿತ್ತುಕೊಂಡಿವೆ. ಈಗ ನಮಗೆ ಕುಲಕಸುಬನ್ನು ಮಾಡಲು ಅವಕಾಶ ಕೊಡಬೇಕು ಇಲ್ಲವೇ, ಪರ್ಯಾಯ ವ್ಯವಸ್ಥೆ ಮಾಡಬೇಕು. ಎರಡನ್ನೂ ಮಾಡದೇ ಹೋದರೆ ರಾಜ್ಯಾದ್ಯಂತ ಈಡಿಗ ಸಮುದಾಯದವರು ಚುನಾವಣೆಯನ್ನು ಬಹಿಷ್ಕಾರ ಮಾಡಬೇಕಾಗುತ್ತದೆ ಎಂದು ಈಡಿಗ ಸಮುದಾಯದ ಪ್ರಣವಾನಂದ ಸ್ವಾಮೀಜಿ ಎಚ್ಚರಿಕೆ ನೀಡಿದರು.
ಕಲಬುರಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಯಾವುದೇ ಸರ್ಕಾರಗಳು ಈಡಿಗ ಸಮುದಾಯದ ಸಮಸ್ಯೆಗಳನ್ನ ಬಗೆ ಹರಿಸಿಲ್ಲ. ಸೇಂಧಿ ಇಳಿಸುವ ನಮ್ಮ ಕುಲ ಕಸುಬನ್ನು ಕಿತ್ತು ಕೊಂಡಿವೆ. ನಾರಾಯಣ ಗುರು ನಿಗಮಕ್ಕೆ ಅನುದಾನ ನೀಡಿಲ್ಲ. ಈಡಿಗ ಸಮುದಾಯವನ್ನ ಆಡಳಿತ ಮತ್ತು ವಿರೋಧ ಪಕ್ಷಗಳು ಕಡೆಗಣಿಸಿವೆ. ಈಡಿಗ ಸಮುದಾಯದ ಮತಗಳನ್ನ ಪಡೆದು ಕೈ ಬಿಡುತ್ತಿದ್ದಾರೆ. ರಾಜ್ಯದಲ್ಲಿ ಮಾಲೀಕಯ್ಯ ಗುತ್ತೇದಾರ್ ಅವರಿಗೆ ಬಿಜೆಪಿ ಯಾವುದೇ ಸ್ಥಾನ ಮಾನ ಕೊಡಲಿಲ್ಲ. ಕಾಂಗ್ರೆಸ್‌ನಿಂದ ಬಿ.ಕೆ. ಹರಿಪ್ರಸಾದ್ ಅವರನ್ನು ಮುಖ್ಯಮಂತ್ರಿ ಅಥವಾ ಉಪಮುಖ್ಯಮಂತ್ರಿ ಆಗಿ ಮಾಡಬೇಕಿತ್ತು. ಅದನ್ನೂ ಮಾಡಲಿಲ್ಲ. ನಮ್ಮ ಸಮುದಾಯದ ಬೇಡಿಕೆಗಳನ್ನ ಈಡೇರಿಸದೆ ಹೋದ್ರೆ ಇಡೀ ಈಡೀಗ ಸಮುದಾಯ ಚುನಾವಣೆಯನ್ನೇ ಬಹಿಷ್ಕರಿಸಬೇಕಾಗುತ್ತದೆ ಎಂದು ಎಚ್ಚರಿಕೆ ಕೊಟ್ಟರು.
ಅಲ್ಪಸಂಖ್ಯಾತರನ್ನು ದಮನ ಮಾಡುವುದೆಂದರೆ ಪ್ರಜಾಪ್ರಭುತ್ವದ ನಾಶ ಮಾಡಿದಂತೆ; ವೀರಪ್ಪ ಮೊಯ್ಲಿ
ಕುಲಕಸುಬು ಮರಳಿ ಕೊಡಿ, ಇಲ್ಲವೇ ಪರ್ಯಾಯ ವ್ಯವಸ್ಥೆ ಮಾಡಿ: ನಮ್ಮ ರಾಜ್ಯದಲ್ಲಿ ಈಡಿಗರನ್ನು ರಾಜಕೀಯವಾಗಿ ಬಳಸಿಕೊಳ್ಳಲಾಗುತ್ತಿದೆ. ಯಾವುದೇ ಪಕ್ಷಕ್ಕೆ ಮತ ಹಾಕಬೇಕಾ, ಬೇಡವಾ ಅನ್ನೋದು ಸಭೆ ನಡೆಸಿ ತೀರ್ಮಾನ ಕೈಗೊಳ್ಳುತ್ತೇವೆ. ಕುಲ ಕಸುಬು ಮರಳಿ ಕೊಡಿ ಇಲ್ಲವೇ ಪರ್ಯಾಯ ವ್ಯವಸ್ಥೆ ಮಾಡಿ. ನಮ್ಮ ಸಮುದಾಯದ ಕೆಲ ನಾಯಕರುಗಳಿಂದಲೂ ಸಮುದಾಯಕ್ಕೆ ಅನ್ಯಾಯ ಆಗಿದೆ. ಈಡಿಗ ಸಮುದಾಯದ ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ಪಕ್ಕಾ ಭರವಸೆ ನೀಡದಿದ್ದರೆ, ಎಲೆಕ್ಷನ್ ಬಹಿಷ್ಕಾರ ಮಾಡುತ್ತೇವೆ ಎಂದು ತಿಳಿಸಿದರು.