ಬೆಂಗಳೂರು, (ಮಾ.12): ರಾಜ್ಯದಲ್ಲಿ ಕೊರೋನಾ ಭೀತಿ ಹಿನ್ನೆಲೆಯಲ್ಲಿ 1ರಿಂದ 6ನೇ ತರಗತಿ ವರಗೆಗಿನ ಶಾಲೆಗಳಿಗೆ ಬೇಸಿಗೆ ರಜೆ ಘೋಷಿಸಲಾಗಿದೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಲ್ಲಾ 1ರಿಂದ 6ನೇ ತರಗತಿ ವರಗೆ ನಾಳೆಯಿಂದ ಅಂದ್ರೆ ಶುಕ್ರವಾರ (ಮಾರ್ಚ್ 13)ದಿಂದ ಬೇಸಿಗೆ ರಜೆ ನೀಡಿ ಕರ್ನಾಟಕ ಸರ್ಕಾರ ಗುರುವಾರ ಸುತ್ತೋಲೆ ಹೊರಡಿಸಿದೆ.

ಕೊರೋನಾ ಭೀತಿ, ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ 

1 ರಿಂದ 6ನೇ ತರಗತಿ ಎಲ್ಲಾ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಲಿನಲ್ಲಿ  FA1, FA2, FA3 , FA4 ಮತ್ತು SA1ರಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ವಿದ್ಯಾರ್ಥಿಗಳ ಶೈಕ್ಷಣಿಕ ಫಲಿತಾಂಶ ಪ್ರಕಟಿಸಿ ಮುಂದಿನ ತರಗತಿಗೆ ಬಡ್ತಿ ನೀಡಿ ಎಂದು ಶಾಲೆಗಳಿಗೆ ರಾಜ್ಯ ಸರ್ಕಾರ ಸೂಚಿಸಿದೆ

ಉಳಿದ ಜಿಲ್ಲೆಗಳಲ್ಲಿ ಯತಾವತ್ತಾಗಿ ಶಾಲೆಗಳು ಮುಂದುವರೆಯಲಿದ್ದು,  ರಾಜ್ಯದ ಎಲ್ಲಾ 1 ರಿಂದ 5ನೇ ತರಗತಿಯವರಿಗೆ ಮಾರ್ಚ್ 16ನೇ ತಾರೀಖಿನೊಳಗೆ ಪರೀಕ್ಷೆ ಮುಗಿಸಲು ಸೂಚಿಸಲಾಗಿದೆ.

ಇನ್ನು 7 ರಿಂದ 9 ನೇ ತರಗತಿಯವರಿಗೆ ಮಾ. 23ರೊಳಗೆ ಪರೀಕ್ಷೆ ನಡೆಸಲು ಸೂಚಿಸಿದೆ. 10ನೇ ತರಗತಿ ವಿದ್ಯಾರ್ಥಿಗಳಿಗೆ ಮಾರ್ಚ್ 27ರಿಂದ ಪರೀಕ್ಷೆ ನಡೆಯಲಿದ್ದು, ಮಾಸ್ಕ್ ಹಾಕಿಕೊಂಡು ಬಂದು ಎಕ್ಸಾಂ ಬರೆಯಬಹುದು ಎಂದು ಸರ್ಕಾರ ತಿಳಿಸಿದೆ.