ಬೆಂಗಳೂರು, [ಮಾ.09]:  ಮಾರಕ ಕೊರೋನಾ ಭೀತಿಯ ಹಿನ್ನೆಲೆ ಬೆಂಗಳೂರು ವ್ಯಾಪ್ತಿಯಲ್ಲಿ LKGಯಿಂದ ಹಿಡಿದು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.

"

ಇಂದು [ಸೋಮವಾರ] ರಜೆ ಘೋಷಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ನಾಳೆ ಅಂದ್ರೆ ಮಂಗಳವಾರದಿಂದ ಆದೇಶ ಅನ್ವಯವಾಗಲಿದ್ದು, ಮುಂದಿನ ಆದೇಶದವರರೆಗೂ  ಶಾಲೆಗಳಿಗೆ ರಜೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.

ಮಾರ್ಚ್ 9 ರಿಂದ ಬೆಂಗಳೂರಿನ ಪ್ರಿ -ಸ್ಕೂಲ್‌ಗಳಿಗೆ ರಜೆ

ಇನ್ನು ಈ ಬಗ್ಗೆ ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಟ್ವೀಟ್ ಮೂಲಕ ಖಚಿತಪಡಿಸಿದ್ದು, ರಾಜ್ಯದ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಿದಂತೆ ಬಿಬಿಎಂಪಿ, ಬೆಂಗಳೂರು‌ನಗರ ಜಿಲ್ಲೆ,  ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಎಲ್ಲಾ ಪ್ರಾಥಮಿಕ ಶಾಲೆಗಳಿಗೆ ಮುಂದಿನ ಆದೇಶದವರೆಗೆ ರಜೆ ಘೋಷಿಸಲಾಗಿದೆ ಎಂದು ಸುರೇಶ್ ಕುಮಾರ್ ಅವರು ಟ್ವೀಟ್ ಮಾಡಿ ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಮೊದಲ ಕೊರೋನಾ ಕೇಸ್ ಪತ್ತೆ: ಎಚ್ಚರವಾಗಿರಿ..!

ಈ ಮೊದಲು ಕೇವಲ ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ ಹಾಗೂ ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯ ಪೂರ್ವ ಪ್ರಾಥಮಿಕ ಶಾಲೆ (ನರ್ಸರಿ, ಎಲ್‌ಕೆಜಿ,  ಯುಕೆಜಿ) ಗಳಿಗೆ ಮಾತ್ರ ರಜೆ ಘೋಷಣೆ ಮಾಡಲಾಗಿತ್ತು.

ಆದ್ರೆ, ಇದೀಗ LKGಯಿಂದ 5ನೇ ತರಗತಿವರಗಿನ ಶಾಲೆಗಳಿಗೆ ರಜೆ ಘೋಷಿಸೊಲಾಗಿದೆ. 

News In 100 Seconds: ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್