ಬೆಂಗಳೂರು, [ಡಿ.03]: ರಾಜ್ಯದ 15 ವಿಧಾನಸಭೆ ಕ್ಷೇತ್ರಗಳಲ್ಲಿ ಡಿಸೆಂಬರ್ 5ರಂದು ಉಪಚುನಾವಣೆಗೆ ಮತದಾನ ನಡೆಯಲಿದೆ.

ಈ ಹಿನ್ನೆಲೆಯಲ್ಲಿ ಅಂದು  ಆಯಾ 15 ಕ್ಷೇತ್ರಗಳ ವ್ಯಾಪ್ತಿಗೆ ಬರುವ ಸರ್ಕಾರಿ ಕಚೇರಿ, ಶಾಲಾ-ಕಾಲೇಜುಗಳಿಗೆ ರಾಜ್ಯ ಸರ್ಕಾರ ರಜೆ ಘೋಷಣೆ ಮಾಡಿದೆ.

ಬೈ ಎಲೆಕ್ಷನ್: ಮಸ್ಕಿ, RR ನಗರ ಕ್ಷೇತ್ರಗಳಿಗೆ ಚುನಾವಣೆಯಾಕಿಲ್ಲ? ಕಾರಣ ಇಲ್ಲಿದೆ

15 ಕ್ಷೇತ್ರಗಳಲ್ಲಿ ಸರ್ಕಾರಿ ಕಚೇರಿಗಳು, ಶಾಲಾ ಕಾಲೇಜುಗಳು ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. 

ಉಪಚುನಾವಣೆ ನಡೆಯಲಿರುವ ಕ್ಷೇತ್ರಗಳು
1.ಗೋಕಾಕ್, 2.ಅಥಣಿ, 3.ಕಾಗವಾಡ [ಬೆಳಗಾವಿ], 4. ರಾಣೇಬೆನ್ನೂರು, 5. ಹಿರೇಕೆರೂರು [ಹಾವೇರಿ], 6. ಕೆ.ಆರ್.ಪುರಂ, 7.ಯಶವಂತಪುರ, 8. ಶಿವಾಜಿನಗರ, 9. ಮಾಹಾಲಕ್ಷ್ಮೀ ಲೇಔಟ್ [ಬೆಂಗಳೂರು], 10.ಯಲ್ಲಾಪುರ [ಉತ್ತರ ಕನ್ನಡ] 11. ಕೆ.ಆರ್.ಪೇಟೆ [ಮಂಡ್ಯ], 12. ಹುಣಸೂರು [ಮೈಸೂರು], 13. ಚಿಕ್ಕಬಳ್ಳಾಪುರ, 14. ಹೊಸಕೋಟೆ [ಬೆಂಗಳೂರು ಗ್ರಾಮಾಂತರ] ಹಾಗೂ 15. ವಿಜಯನಗರ [ಬಳ್ಳಾರಿ]

ಈರುಳ್ಳಿ ಜೊತೆ ಸಿಲಿಂಡರ್ ಬೆಲೆ ಹೆಚ್ಚಳ, ಸ್ಟಾರ್ ನಟನ ಜೊತೆ ರಶ್ಮಿಕಾ ನಟಿಸಲ್ಲ; ಡಿ.3ರ ಟಾಪ್ 10 ಸುದ್ದಿ!

ಶಿವಾಜಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವಿಧಾನಸೌಧ, ವಿಕಾಸಸೌಧ, ಎಂಎಸ್ ಬಿಲ್ಡಿಂಗ್ ಹೊರುತುಪಡಿಸಿ ಉಳಿದೆಲ್ಲಾ ಸರ್ಕಾರಿ ಕಚೇರಿಗಳಿಗೂ ರಜೆ ಘೋಷಣೆಯಾಗಿದೆ.

ಈ 15 ಕ್ಷೇತ್ರಗಳಲ್ಲಿ ಬಹಿರಂಗ ಪ್ರಚಾರ ಇಂದು [ಮಂಗಳವಾರ] ಅಂತ್ಯವಾಗಲಿದ್ದು, ಡಿ. 05ಕ್ಕೆ ಮತದಾನ ನಡೆಯಲಿದೆ. ಇನ್ನು ಡಿ.9ಕ್ಕೆ ಬೈ ಎಲೆಕ್ಷನ್ ಫಲಿತಾಂಶ ಪ್ರಕಟವಾಗಲಿದೆ.

2020ನೇ ವರ್ಷದ ಸಾರ್ವತ್ರಿಕ ರಜೆ ಪಟ್ಟಿ ಬಿಡುಗಡೆ: 7 ರಜೆ ನಷ್ಟ!