Breaking: ಮದುವೆ, ಗಣೇಶ ಉತ್ಸವ, ರಾಜಕೀಯ ಮೆರವಣಿಗೆಗಳಲ್ಲಿ ಪಟಾಕಿ ಬ್ಯಾನ್!

ರಾಜ್ಯದಲ್ಲಿ ಇನ್ನುಮುಂದೆ ಮದುವೆ, ಗಣೇಶ ಉತ್ಸವ ಹಾಗೂ ರಾಜಕೀಯ ಸಂಬಂಧಿತ ಕಾರ್ಯಕ್ರಮಗಳಲ್ಲಿ ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. 

Karnataka govt ban on fire crackers at weddings Ganesha festival and political processions sat

ಬೆಂಗಳೂರು (ಅ.10): ರಾಜ್ಯದಲ್ಲಿ ಇನ್ನುಮುಂದೆ ಮದುವೆ, ಗಣೇಶ ಉತ್ಸವ ಹಾಗೂ ರಾಜಕೀಯ ಸಂಬಂಧಿತ ಕಾರ್ಯಕ್ರಮಗಳಲ್ಲಿ ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. 

ಅತ್ತಿಬೆಲೆ ಪಟಾಕಿ ಮಳಿಗೆ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಸಭೆ ಮಾಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸುಪ್ರೀಂಕೋರ್ಟ್ ಆದೇಶದ ಪ್ರಕಾರ, ಹಸಿರು ಪಟಾಕಿ ನಿಯಾಮವಳಿಗಳಿಗೆ ವಿರುದ್ಧವಾಗಿ ಅಂಗಡಿಗಳು ಇದ್ದರೆ ಕ್ರಮ ಕೈಗೊಳ್ಳಬೇಕು. ಇನ್ನುಮುಂದೆ ಅನಧಿಕೃತ ಮಳಿಗೆಗಳು ಕಂಡುಬಂದಲ್ಲಿ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳಲು ಸೂಚಿಸಿದ್ದೇವೆ. ಇನ್ಮುಂದೆ ಪಟಾಕಿ ಅಂಗಡಿಗಳಿಗೆ ಲೆಸೆನ್ಸ್ ಗಳಿಗೆ ಸುಪ್ರೀಂಕೋರ್ಟ್ ಆದೇಶದ ಪ್ರಕಾರವೇ ಲೆಸೆನ್ಸ್ ಕಡ್ಡಾಯ ನೀಡುವಂತೆ ಸೂಚಿಸಲಾಗಿದೆ ಎಂದರು.

ಬೆಂಗಳೂರು ಹಿಂದೂಗಳಿಗೆ ಶಾಕಿಂಗ್‌ ನ್ಯೂಸ್‌: ಗಣೇಶ ಮೆರವಣಿಗೆ ನಿಷೇಧಿಸಿದ ಪೊಲೀಸ್‌ ಇಲಾಖೆ

ಇನ್ನುಮುಂದೆ ರಾಜಕೀಯ ಕಾರ್ಯಕ್ರಮ , ಮದುವೆ ಕಾರ್ಯಕ್ರಮ, ಗಣೇಶ ಉತ್ಸವ ಸೇರಿದಂತೆ ವಿವಿಧ ಸಂಭ್ರಮಾಚರಣೆಗಳ ವೇಳೆ ಪಟಾಕಿ ಸಿಡಿಸುವುದನ್ನು ಬ್ಯಾನ್‌ ಮಾಡಲಾಗುತ್ತಿದೆ. ದೀಪಾವಳಿ ವೇಳೆ ಹಸಿರು ಪಟಾಕಿಗೆ ಮಾತ್ರ ಅವಕಾಶ ನೀಡಲಾಗುವುದು. ಪಟಾಕಿ ಮಾರಾಟ ಹಾಗೂ ಸಂಗ್ರಹಣೆ ಪರವಾನಗಿ ಪರಿಷ್ಕರಿಣೆ ಮಾಡಲು ಸೂಚನೆ ನೀಡಲಾಗಿದೆ. ಪ್ರಸ್ತುತ 5 ವರ್ಷಗಳವರೆಗೆ ಇದ್ದ ಪರವಾನಗಿ ಅವಧಿಯನ್ನು1 ವರ್ಷಕ್ಕೆ ತಗ್ಗಿಸಿ ಪರಿಷ್ಕೃರಣೆ ಮಾಡಲು ತೀರ್ಮಾನಿಸಲಾಗಿದೆ. ಪ್ರತಿ ವರ್ಷವೂ ಪರಿಷ್ಕರಣೆ ಮಾಡಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಎಕ್ಸ್‌ಪ್ಲೋಸಿವ್‌ ಆಕ್ಟ್‌ ಲೈಸೆನ್ಸ್‌ ನೀಡುವ ಡಿಸಿ ಪರಿಶೀಲಿಸಬೇಕು: ಎಕ್ಸ್‌ಪ್ಲೋಸಿವ್‌ ಆಕ್ಟ್‌ ನಲ್ಲಿ ಲೈಸೆನ್ಸ್‌ ಕೊಡುವಾಗ ನೀವು ಎಚ್ಚರಿಕೆ ವಹಿಸಬೇಕು. 14 ಜನರ ಜೀವಕ್ಕೆ ಯಾರು ಹೊಣೆಗಾರರು. ಕಾಯ್ದೆ ಓದಿದ್ದೀರಾ? ಅವರು ಅದರಲ್ಲಿರುವ ಎಲ್ಲ ಮಾನದಂಡಗಳನ್ನು ಪೂರೈಸಿದ್ದಾರೆಯೇ ಎಂದು ನೋಡಬೇಕು. ತಳಹಂತದ ಅಧಿಕಾರಿಗಳು ಸಲ್ಲಿಸಿದ ವರದಿ ಸರಿಯಿದೆಯೇ ಎಂದು ಜಿಲ್ಲಾಧಿಕಾರಿ ಪರಿಶೀಲಿಸುವಂತೆ ಸೂಚಿಸಲಾಗಿದೆ. ಅಲ್ಲಿರುವ ಎಲ್ಲ ಮಳಿಗೆಗಳ ಸುರಕ್ಷತೆಯನ್ನೂ ತಪಾಸಣೆ ಮಾಡಬೇಕು. ಇನ್ನು ಮುಂದೆ ಲೈಸನ್ಸ್‌ ನೀಡುವಾಗ ಜಿಲ್ಲಾಧಿಕಾರಿಗಳು, ಪೊಲೀಸ್‌ ಅಧೀಕ್ಷಕರು ಹಾಗೂ ಅಗ್ನಿಶಾಮಕ ದಳದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.

ಅತ್ತಿಬೆಲೆ ಪಟಾಕಿ ದುರಂತ ಸಿಐಡಿ ತನಿಖೆಗೆ, ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ: ಸಿದ್ದರಾಮಯ್ಯ

ಪಟಾಕಿ ಮಳಿಗೆಗೆ ಪರವಾನಗಿ ಕೊಟ್ಟ ಅಧಿಕಾರಿಗಳ ಅಮಾನತು: ಬೆಂಗಳೂರು ನಗರದಲ್ಲಿ ಎರಡು ರೀತಿಯ ಪರವಾನಗಿಗಳಿವೆ.  ಶಾಶ್ವತ ಮಳಿಗೆಗಳು ಹಾಗೂ ತಾತ್ಕಾಲಿಕ ಮಳಿಗೆಗಳಿಗೆ ಪರವಾನಗಿ ನೀಡಲಾಗುತ್ತಿದೆ. ಬಿಬಿಎಂಪಿ, ವಿದ್ಯುತ್‌, ಅಗ್ನಿಶಾಮಕ, ಟ್ರಾಫಿಕ್‌ ಮತ್ತು ಕಾನೂನು-ಸುವ್ಯವಸ್ಥೇ ವಿಭಾಗದ ನಿರಾಕ್ಷೇಪಣಾ ಪತ್ರ ಪಡೆದು ಲೈಸನ್ಸ್‌ ನೀಡಲಾಗುತ್ತದೆ. ಇದು 5 ವರ್ಷಕ್ಕೊಮ್ಮೆ ನೀಡಲಾಗುತ್ತಿದೆ. ನವೀಕರಣಕ್ಕೆ ನಿರಾಕ್ಷೇಪಣಾ ಪತ್ರದ ಅಗತ್ಯವಿರುವುದಿಲ್ಲ. ಸ್ಫೋಟಕಗಳ ನಿಯಂತ್ರಕರು ನವೀಕರಿಸುತ್ತಾರೆ. ಈ ಕುರಿತು ನಿಯಮಾವಳಿಗಳ ತಿದ್ದುಪಡಿ ಅಗತ್ಯವಿದೆ. ಈ ಕುರಿತು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲು ಸೂಚಿಸಿದರು. ರಾಜ್ಯಕ್ಕೆ ಅನ್ವಯಿಸುವ ನಿಯಮ ಬದಲಿಸಲು ಸೂಚಿಸಿದರು. ನಿಗದಿತ ಮಾನದಂಡ ಪೂರೈಸದಿದ್ದರೂ, ತಪಾಸಣಾ ವರದಿ ನೀಡಿ ಶಿಫಾರಸು ಮಾಡಿದ ಸರ್ಕಲ್‌ ಇನ್ಸ್‌ಪೆಕ್ಟರ್‌, ತಹಸೀಲ್ದಾರ್‌, ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿಗಳನ್ನು ಅಮಾನತು ಮಾಡಲು ಸೂಚಿಸಿದರು. 

Latest Videos
Follow Us:
Download App:
  • android
  • ios