Asianet Suvarna News Asianet Suvarna News

ಬೆಂಗಳೂರು ಹಿಂದೂಗಳಿಗೆ ಶಾಕಿಂಗ್‌ ನ್ಯೂಸ್‌: ಗಣೇಶ ಮೆರವಣಿಗೆ ನಿಷೇಧಿಸಿದ ಪೊಲೀಸ್‌ ಇಲಾಖೆ

ಬೆಂಗಳೂರಿನಲ್ಲಿ ಗಣೇಶ ಮೂರ್ತಿ ಮೆರವಣಿಗೆ ಹಾಗೂ ಡಿಜೆ ಡ್ಯಾನ್ಸ್‌ಗೆ ಅನುಮತಿ ನೀಡದಿರಲು ಬೆಂಗಳೂರು ನಗರ ಪೊಲೀಸ್‌ ಇಲಾಖೆಯು ತೀರ್ಮಾನಿಸಿದೆ.

Bengaluru Hindus getting Shocking news Ganesh procession banned by police department sat
Author
First Published Oct 10, 2023, 12:21 PM IST

ಬೆಂಗಳೂರು (ಅ.10): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಗಣೇಶ ಹಬ್ಬದ ವೇಳೆ ಸಾಲು ಸಾಲು ಧಾರ್ಮಿಕ ಅವಘಡಗಳು ಹಾಗೂ ಗಲಾಟೆ ಮತ್ತು ಕೊಲೆ ಪ್ರಕರಣಗಳು ವರದಿಯಾದ ಬೆನ್ನಲ್ಲಿಯೇ ಇನ್ನುಮುಂದೆ ಬೆಂಗಳೂರಿನಲ್ಲಿ ಗಣೇಶ ಮೂರ್ತಿ ಮೆರವಣಿಗೆ ಹಾಗೂ ಡಿಜೆ ಡ್ಯಾನ್ಸ್‌ಗೆ ಅನುಮತಿ ನೀಡದಿರಲು ಬೆಂಗಳೂರು ನಗರ ಪೊಲೀಸ್‌ ಇಲಾಖೆಯು ತೀರ್ಮಾನಿಸಿದೆ.

ಬೆಂಗಳೂರು ನಗರದಲ್ಲಿ ಸಾಲು ಸಾಲು ಗಲಾಟೆ ಘಟನೆಗಳು ವರದಿಯಾದ ಬಳಿಕ ಎಚ್ಚೆತ್ತುಕೊಂಡಿರುವ ನಗರ ಪೊಲೀಸ್ ಕಮೀಷನರ್ ಅವರು, ಗಣೇಶ ಮೆರವಣಿಗೆಗೆ ಇನ್ಮುಂದೆ ಅನುಮತಿ ನೀಡದಂತೆ ಎಲ್ಲ ಪೊಲೀಸ್‌ ಠಾಣೆಗಳಿಗೆ ಸೂಚನೆ ನೀಡಿದ್ದಾರೆ. ನಗರದ ಎಲ್ಲಾ ಪೊಲೀಸರಿಗೂ ಅನುಮತಿ ನೀಡದಂತೆ ಸೂಚನೆ ನೀಡಿರೋ ಕಮಿಷನರ್ ದಯಾನಂದ್‌ ಅವರು, ಪೊಲೀಸರ ಅನುಮತಿ ನಿರಾಕರನೆ ನಡುವೆಯೂ ಗಣೇಶ ಮೂರ್ತಿ ಮೆರವಣಿಗೆ ಮಾಡಿದರೆ ಅಥವಾ ಗಲಾಟೆಯಾದರೆ ಆಯಾ ಠಾಣಾ ವ್ಯಾಪ್ತಿಯ ಇನ್ಸ್‌ಪೆಕ್ಟರ್ ಹೊಣೆಗಾರರಾಗಿರುತ್ತಾರೆ. ಜೊತೆಗೆ, ನೇರವಾಗಿ ಆ ಠಾಣಾ ಇನ್ಸ್ಪಪೆಕ್ಟರ್ ಮೇಲೆ ಕ್ರಮ ಜರುಗಿಸೋದಾಗಿ ಪೊಲೀಸ್‌ ಆಯುಕ್ತ ದಯಾನಂದ್‌ ಎಚ್ಚರಿಕೆ ನೀಡಿದ್ದಾರೆ.

ಇದು ನಮ್ಮ ಮೆಟ್ರೋ ತಾಕತ್ತು: 43 ಕಿ.ಮೀ ಪ್ರಯಾಣಕ್ಕೆ ಕೇವಲ 66 ರೂ.!

ಇನ್ನು ಗಣೇಶ ಮೆರವಣಿಗೆ ವೇಳೆ ನಗರದ ಹಲವು ಕಡೆಗಳಲ್ಲಿ ಗಲಾಟೆ ನಡೆದಿತ್ತು. ಹಲಸೂರು, ಯಡಿಯೂರು, ಆಡುಗೋಡಿ, ಸೇರಿ ಹಲವು ಕಡೆಗಳಲ್ಲಿ ಗಲಾಟೆ ನಡೆದಿದ್ದವು. ಅದರಲ್ಲಿ ಆಡುಗೋಡಿ ಗಣೇಶ ಹಬ್ಬದ ಮೆರವಣಿಗೆ ವೇಳೆಯೇ ಕೊಲೆಯಾಗಿತ್ತು. ಆಡುಗೋಡಿಯ ಶ್ರೀನಿವಾಸ್ ಎಂಬಾತನನ್ನು ಎಲ್ಲರೆದುರೇ ಸಾರ್ವಜನಿಕವಾಗಿ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಲಾಗಿತ್ತು. ಇನ್ನು ಗಲಾಟೆ ಹಾಗೂ ಕೊಲೆ ಘಟನೆಯಿಂದ ಎಚ್ಚೆತ್ತುಕೊಂಡಿರುವ ಪೊಲೀಸ್‌ ಇಲಾಖೆ ಹಬ್ಬ ಮುಗಿದರೂ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮತ್ತು ಮೆರವಣಿಗೆ ಮಾಡುವುದಕ್ಕೆ ಅನುಮತಿ ನೀಡದಿರಲು ನಿರ್ಧಾರ ಕೈಗೊಂಡಿದ್ದಾರೆ.

200ಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆ:  ಇನ್ನು ಪೊಲೀಸ್‌ ಕಮೀಷನರ್ ಸೂಚನೆ ಬಳಿಕವೂ ಗಣೇಶ ಮೂರ್ತಿ ಪ್ರತಿಷ್ಠಾಪನೆ ಹಾಗೂ ಮೆರವಣಿಗೆಗೆ ಅನಮತಿ‌ ಕೋರಿ ಸಾಲು ಸಾಲು ಮನವಿಗಳು ಸಲ್ಲಿಕೆಯಾಗುತ್ತಿವೆ. ಸುಮಾರು 200ಕ್ಕೂ ಹೆಚ್ಚು ಜನ ಗಣೇಶ ಮೆರವಣಿಗೆಗೆ ಅನಮತಿ‌ ನೀಡುವಂತೆ ಪತ್ರ ಬರೆದಿದ್ದಾರೆ. ಆದರೆ, ಪೊಲೀಸರು ಯಾವುದೇ ಕಾರಣಕ್ಕೂ ಅನುಮತಿ‌‌ ಕೊಡಲ್ಲವೆಂದು ಹೇಳುತ್ತಿದ್ದಾರೆ. ಗಣೇಶ ಹಬ್ಬ ಮುಗಿದ್ರೂ ಹಲವು ಗಲ್ಲಿಗಳಲ್ಲಿ, ಬಡವಾಣೆಗಲಲ್ಲಿ ಗಣಪತಿಯನ್ನು ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಪೊಲೀಸರ ಮಾಹಿತಿ ಪ್ರಕಾರ ಇನ್ನೂ 450 ಗಣಪತಿಗಳು ನಗರದಲ್ಲಿ ಇಟ್ಟಿದ್ದಾರೆ ಎಂದು ತಿಳಿದುಬಂದಿದೆ.

Bigg Boss ಸೋನುಗೌಡಗೆ ಗಣಪತಿ ಹಬ್ಬದಲ್ಲಿ ಡಿಜೆ ಡ್ಯಾನ್ಸ್‌ ಮಾಡಲು ಬರುವಂತೆ ಆಹ್ವಾನಿಸಿದ ಫ್ಯಾನ್ಸ್‌

ಮೆರವಣಿಗೆ, ಗಲಾಟೆ ನಡೆದರೆ ಆಯಾ ಠಾಣಾ ಇನ್ಸ್‌ಪೆಕ್ಟರ್‌ ಹೊಣೆ: ಈಗಲೂ ಗಣೇಶ ಹಬ್ಬದ ಮೆರವಣಿಗೆ ಹಾಗೂ ಡಿಜೆಗೆ ಅನುಮತಿ ಕೋರಿ ಹಲವು ಸಂಘಟನೆಗಳು ಹಾಗೂ ಯುವಕರು ಬರುತ್ತಿದ್ದಾರೆ. ಆದರೆ, ಮೆರವಣಿಗೆ ವೇಳೆ ನಡೆದ ಗಲಾಟೆ, ಕೊಲೆ ಹಿ‌ನ್ನಲೆಯಲ್ಲಿ ಇನ್ನುಮುಂದೆ ಅನುಮತಿ ಕೊಡುತ್ತಿಲ್ಲ. ಒಂದು ವೇಳೆ ಅನುಮತಿ ನಿರಾಕರಣೆ ನಡುವೆಯೂ ಸಂಘಟನೆಗಳು ಅಥವಾ ಯುವಕರು ಗಣೇಶ ಮೂರ್ತಿಮೆರವಣಿಗೆ ಮಾಡಿದರೆ ಅಥವಾ ಗಲಾಟೆ ನಡೆದಲ್ಲಿ ಆಯಾ ಠಾಣಾ ಇನ್ಸ್ಪೆಕ್ಟರ್ ಹೊಣೆಗಾರರಾಗಿರುತ್ತಾರೆ. ಈ ಬಗ್ಗೆ ನೇರವಾಗಿ ಆಯಾ ಠಾಣಾ ಇನ್ಸ್ಪಪೆಕ್ಟರ್ ಮೇಲೆ ಕ್ರಮ ಜರುಗಿಸೋದಾಗಿ ಪೊಲೀಸ್‌ ಕಮೀಷನರ್ ತಿಳಿಸಿದ್ದಾರೆ.

Follow Us:
Download App:
  • android
  • ios