Asianet Suvarna News Asianet Suvarna News

Covid Guidelines: ಹೊಸ ವರ್ಷಾಚರಣೆಗೆ ಸರ್ಕಾರದಿಂದ ಮಾರ್ಗಸೂಚಿ ಪ್ರಕಟ

* ಕರ್ನಾಟಕದಲ್ಲಿ ಕೊರೋನಾ, ಒಮಿಕ್ರಾನ್ ಭೀತಿ
* ಹೊಸ ವರ್ಷಾಚರಣೆ, ಕ್ರಿಸ್​ಮಸಸ್‌ಗೆ ಸರ್ಕಾರದ ಮಾರ್ಗಸೂಚಿ ಪ್ರಕಟ
* ಮಾರ್ಗಸೂಚಿ ಮಾಹಿತಿ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ

Karnataka Govt announces new year 2022 covid guidelines Over Corona and omicron rbj
Author
Bengaluru, First Published Dec 21, 2021, 4:33 PM IST
  • Facebook
  • Twitter
  • Whatsapp

ಬೆಳಗಾವಿ, (ಡಿ.21): ಕೋವಿಡ್ ಹಿನ್ನೆಲೆಯಲ್ಲಿ ಹೊಸ ವರ್ಷ ಆಚರಣೆಗೆ (New Year Celebration) ಸರ್ಕಾರ ಕೆಲ ಕಠಿಣ ನಿರ್ಬಂಧಗಳನ್ನು ವಿಧಿಸಿ ಹೊಸ ಮಾರ್ಗಸೂಚಿ(Guidelines)  ಬಿಡುಗಡೆ ಮಾಡಿದೆ. ಬೆಳಗಾವಿಯಲ್ಲಿ ಇಂದು(ಡಿ.21) ನಡೆದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಸವರಾಜ ಬೊಮ್ಮಾಯಿ, ಬಹಿರಂಗವಾಗಿ ಹೊಸ ವರ್ಷ ಸಂಭ್ರಮಾಚರಣೆಗೆ ನಿರ್ಬಂಧ ವಿಧಿಸಿರುವುದಾಗಿ ಸ್ಪಷ್ಟಪಡಿಸಿದರು.

ಕೊರೋನಾ ಆತಂಕದ ಹಿನ್ನೆಲೆಯಲ್ಲಿ ಹೊಸ ವರ್ಷಾಚರಣೆ ವೇಳೆ ಜನರು ಗುಂಪುಗೂಡದಂತೆ ನಿರ್ಬಂಧದ ಆದೇಶ ಜಾರಿ ಮಾಡಲಾಗುವುದು.ಹೊಸವರ್ಷದ ಸಂಭ್ರಮಾಚರಣೆಗೆ ಮಾತ್ರ ಈ ನಿಯಮಗಳು ಅನ್ವಯವಾಗುತ್ತವೆ. ಆದರೆ ಕ್ರಿಸ್​ಮಸ್​ ಹಬ್ಬದಲ್ಲಿ  (Christmas Festival) ಚರ್ಚುಗಳಲ್ಲಿ ಪ್ರಾರ್ಥನೆ ನಡೆಸಲು ಯಾವುದೇ ನಿರ್ಬಂಧಗಳು ಇರುವುದಿಲ್ಲ ಎಂದು ಅವರು ಹೇಳಿದರು.

"

ಹೊಸ ವರ್ಷಾಚರಣೆ ವೇಳೆ ಜನ ಗುಂಪುಗೂಡದಂತೆ ನಿರ್ಬಂಧ ವಿಧಿಸಲಾಗುವುದು. ಅದರಲ್ಲೂ ಪ್ರಮುಖವಾಗಿ ಎಂಜಿ ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ ಗುಂಪುಗೂಡದಂತೆ ನಿಯಮ ವಿಧಿಸಲಾಗುವುದು. ಡಿ 30ರಿಂದ ಜ 2ರವರೆಗೆ ಸಾಮೂಹಿಕ ಸಮಾರಂಭಗಳಿಗೆ ನಿರ್ಬಂಧ ಇರುತ್ತದೆ ಎಂದು ತಿಳಿಸಿದರು.

Omicron Variant : ಮಲೆನಾಡಿಗೂ ಕಾಲಿಟ್ಟ ಒಮಿಕ್ರಾನ್

ಗುಂಪುಗೂಡಿ ಹೊಸ ವರ್ಷಾಚರಣೆ ಮಾಡಲು ಅವಕಾಶವಿಲ್ಲ. ಪಬ್, ಬಾರ್ ಮತ್ತು ರೆಸ್ಟೋರೆಂಟ್, ಹೋಟೆಲ್​ಗಲ್ಲಿ ಅರ್ಧದಷ್ಟು ಜನರಿಗೆ ಸೇವೆ ಒದಗಿಸಬಹುದು. ಎಲ್ಲಾ ಸಿಬ್ಬಂದಿಗೆ 2 ಡೋಸ್​ ಕೊರೋನಾ ಲಸಿಕೆ ಹಾಕಿಸಿರಬೇಕು. ಆರ್​ಟಿಪಿಸಿಆರ್​ ಟೆಸ್ಟ್​ ಮಾಡಿಸಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗುವುದು. ಈ ಸಂಬಂಧ ನಡೆದ ವಿಡಿಯೊ ಕಾನ್ಫರೆನ್ಸ್​ನಲ್ಲಿ ತಾಂತ್ರಿಕ ಸಲಹಾ ಸಮಿತಿ ಸದಸ್ಯರು ಪಾಲ್ಗೊಂಡಿದ್ದರು ಎಂದು ಮುಖ್ಯಮಂತ್ರಿ ತಿಳಿಸಿದರು.

ಗೈಡ್‌ಲೈನ್ಸ್ ಮುಖ್ಯಾಂಶಗಳು
* ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ಎಂದರೆ ಮೊದಲು ಹೈಲೈಟ್‌ ಆಗುವುದು ಎಂಜಿರಸ್ತೆ ಮತ್ತು ಬ್ರಿಗೆಡ್‌ ರಸ್ತೆ. ಆದರೆ ಈ ಬಾರಿಯೂ ಕಳೆದ ವರ್ಷದಂತೆ ಸಾಮೂಹಿಕವಾಗಿ ಜನರು ಸೇರುವುದನ್ನು ನಿಷೇಧಿಸಲಾಗಿದೆ. ಇವಿಷ್ಟೇ ಅಲ್ಲದೇ, ರಾಜ್ಯದ ಯಾವುದೇ ಭಾಗಗಳಲ್ಲಿ ಹೊಸ ವರ್ಷಕ್ಕೆಂದು ಜನರು ಗುಂಪುಗೂಡುವಂತಿಲ್ಲ.

* ರೆಸ್ಟೋರೆಂಟ್‌, ಕ್ಲಬ್‌ಗಳಲ್ಲಿ ಪಾರ್ಟಿ ಮಾಡುವಂತಿಲ್ಲ. ಡಿಸ್ಕೋ ಜಾಕಿ (ಡಿಜೆ), ಇತ್ಯಾದಿ ಅಬ್ಬರದ ಸಂಗೀತಗಳಿಗೆ ನಿಷೇಧ ಹೇರಲಾಗಿದೆ.

* ರೆಸ್ಟೋರೆಂಟ್‌, ಕ್ಲಬ್‌ಗಳಲ್ಲಿ ಇರುವ ಕೆಪ್ಯಾಸಿಟಿಗಿಂತ ಶೇ.50ರಷ್ಟು ಮಾತ್ರ ಜನರು ಇರಲು ಅವಕಾಶ ಕಲ್ಪಿಸಲಾಗಿದೆ. ಶೇ.50ಕ್ಕಿಂತ ಹೆಚ್ಚು ಜನರು ಇವುಗಳಲ್ಲಿ ಸೇರುವಂತಿಲ್ಲ.

*ಅ‍ಪಾರ್ಟ್‌ಮೆಂಟ್‌ಗಳಲ್ಲಿ ಕೂಡ ಸಾಮೂಹಿಕವಾಗಿ ಪಾರ್ಟಿ ಮಾಡುವಂತಿಲ್ಲ, ಡಿಸ್ಕೋ ಜಾಕಿ ಇತ್ಯಾದಿ ಸಂಗೀತ ಕಾರ್ಯಕ್ರಮಗಳನ್ನು ನಡೆಸುವಂತಿಲ್ಲ. ಇವುಗಳ ಜವಾಬ್ದಾರಿಯನ್ನು ಆಯಾ ಅಪಾರ್ಟ್‌ಮೆಂಟ್‌ ಅಸೋಸಿಯೇಷನ್‌ ನೋಡಿಕೊಳ್ಳಬೇಕು.

*ಇವೆಲ್ಲವೂ ಡಿಸೆಂಬರ್‌ 30ರಿಂದ ಜನವರಿ 2ನೇ ತಾರೀಖಿನವರೆಗೆ ಈ ನಿಷೇಧ ಚಾಲ್ತಿಯಲ್ಲಿ ಇರುತ್ತದೆ. ಆದರೆ 25ರಂದು ಕ್ರಿಸ್‌ಮಸ್‌ ಇರುವ ಹಿನ್ನೆಲೆಯಲ್ಲಿ ಅವುಗಳಿಗೂ ಕೆಲವೊಂದು ನಿಯಮ ಮಾಡಲಾಗಿದೆ. ಕ್ರಿಸ್‌ಮಸ್‌ ಯಾವುದೇ ಬಹಿರಂಗ ಪಾರ್ಟಿ ಮಾಡುವಂತಿಲ್ಲ.

* ಕ್ರಿಸ್‌ಮಸ್‌ ಸಂದರ್ಭದಲ್ಲಿ ಆಂತರಿಕವಾಗಿ ಪ್ರಾರ್ಥನೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಆದರೆ ಕೋವಿಡ್‌ನ ಎಲ್ಲಾ ನಿಯಮಗಳನ್ನು ಪಾಲನೆ ಮಾಡಬೇಕು. ಸಾಮಾಜಿಕ ಅಂತರ, ಸೆನಿಟೈಸರ್‌ ಎಲ್ಲವನ್ನೂ ಕಾಪಾಡಬೇಕು. ಕ್ಲಬ್‌ಗೆ ಬರುವವರಿಗೆ ಎರಡು ಡೋಸ್‌ ಲಸಿಕೆ ಕಡ್ಡಾಯ ಮಾಡಲಾಗಿದೆ. ಅಲ್ಲಿರುವ ಸಿಬ್ಬಂದಿಗೆ ಪರೀಕ್ಷೆ ಮಾಡಿಸಬೇಕು.

ಭಾರತದಲ್ಲಿಒಮಿಕ್ರಾನ್ ಸೋಂಕಿತರ ಸಂಖ್ಯೆ 200ಕ್ಕೆ ಏರಿಕೆ
ವಿಶ್ವದಾದ್ಯಂತ ಮತ್ತೆ ಆತಂಕ ಸೃಷ್ಟಿಸಿರುವ ಕೊರೊನಾ ಸೋಂಕಿನ ರೂಪಾಂತರಿ ಒಮಿಕ್ರಾನ್ ಭಾರತದಲ್ಲೂ ತನ್ನ ಪ್ರಾಬಲ್ಯ ವಿಸ್ತರಿಸುತ್ತಿದ್ದು, ಇಂದು ಒಮಿಕ್ರಾನ್ ಪ್ರಕರಣಗಳ ಸಂಖ್ಯೆ 200 ಕ್ಕ ಏರಿಕೆಯಾಗಿದೆ. ಈ ಮೂಲಕ ಭಾರತದಲ್ಲಿ ಕೊರೊನ 3ನೇ ಅಲೆಯ ಭೀತಿ ಎದುರಾಗಿತ್ತಿದೆ.

ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ಪ್ರಕಾರ ಮಹಾರಾಷ್ಟ್ರ (54), ದೆಹಲಿ (54), ತೆಲಂಗಾಣ (20), ಕರ್ನಾಟಕ (19), ರಾಜಸ್ಥಾನ (18), ಕೇರಳ (15), ಗುಜರಾತ್ (14), ಉತ್ತರ ಪ್ರದೇಶ (2), ಆಂಧ್ರ ಪ್ರದೇಶ (1), ಚಂಡೀಗಢ (1), ತಮಿಳುನಾಡು (1) ಮತ್ತು ಪಶ್ಚಿಮ ಬಂಗಾಳ (1) ಪ್ರಕರಣಗಳು ದೃಢ ಪಟ್ಟಿವೆ.

ಈ ಕುರಿತು ಕಳವಳ ವ್ಯಕ್ತಪಡಿಸಿರುವ ವಿಶ್ವ ಸಂಸ್ಥೆ ಓಮಿಕ್ರಾನ್ ರೂಪಾಂತರವು ಜಾಗತಿಕವಾಗಿ ಹರಡುವುದನ್ನು ತಡೆಯಲು ಮತ್ತು ಸಾರ್ವಜನಿಕ ಆರೋಗ್ಯವನ್ನು ರಕ್ಷಿಸಲು ತಮ್ಮ ರಜಾದಿನಗಳ ಯೋಜನೆಗಳನ್ನು ರದ್ದುಗೊಳಿಸುವಂತೆ ವಿಶ್ವ ಆರೋಗ್ಯ ಸಂಸ್ಥೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ.

Follow Us:
Download App:
  • android
  • ios