ಬೆಂಗಳೂರು, [ನ.30]: ರಾಜ್ಯ ಮೈತ್ರಿ ಸರ್ಕಾರದಲ್ಲಿ ಅಧಿಕಾರಿಗಳ ವರ್ಗಾವಣೆ ಪರ್ವ ಮುಂದುವರೆದಿದ್ದು, ಇಂದು [ಶುಕ್ರವಾರ] 11 ಐಎಎಸ್​ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ರಾಜ್ಯ ಸರ್ಕಾರದಿಂದ 5 ಐಎಎಸ್‌ ಅಧಿಕಾರಿಗಳ ವರ್ಗ

ಸರ್ಕಾರದ ಕಾರ್ಯದರ್ಶಿ ಕುಮ್ಟಾ ಪ್ರಕಾಶ್ ಅವರು, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಪೊನ್ನರಾಜ್ ಸೇರಿದಂತೆ ಒಟ್ಟು 11 ಮಂದಿ ಐಎಎಸ್​​ ಅಧಿಕಾರಿಗಳನ್ನ ವರ್ಗಾವಣೆ ಮಾಡಲಾಗಿದೆ. 

 ವರ್ಗಾವಣೆಯಾದ ಅಧಿಕಾರಿಗಳ ವಿವರ ಹೀಗಿದೆ.
ಶಾಲಿನಿ‌ ರಜನೀಶ್-ಪ್ರಧಾನ ಕಾರ್ಯದರ್ಶಿ, ಯೋಜನಾ ಇಲಾಖೆ
ಮಂಜುಳ-ಪ್ರಧಾನ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ
ಕುಮಾರ್ ನಾಯಕ್-ಪ್ರಧಾನ ಕಾರ್ಯದರ್ಶಿ, ಸಮಾಜ ಕಲ್ಯಾಣ ಇಲಾಖೆ
ಉಮಾ ಶಂಕರ್-ಪ್ರಧಾನ ಕಾರ್ಯದರ್ಶಿ, ಪ್ರಾಥಮಿಕ ಶಿಕ್ಷಣ
ಪೊನ್ನುರಾಜ್-ಎಂಡಿ, ಕೆಪಿಸಿಎಲ್
ಶಿವಯೋಗಿ-ಎಂಡಿ, ಕೆಎಸ್​​ಆರ್​ಟಿಸಿ
ಎನ್.ವಿ‌.ಪ್ರಸಾದ್-ಎಂಡಿ, ಬಿಎಂಟಿಸಿ
ಡಿ.ರಂದೀಪ್-ಆಯುಕ್ತರು, ಸಮಾಜ ಕಲ್ಯಾಣ ಇಲಾಖೆ
ಗೋಪಾಲಕೃಷ್ಣ- ಎಂಡಿ, ಚಾಮುಂಡೇಶ್ವರಿ ಪವರ್ ಕಾರ್ಪೋರೇಷನ್
ವಸಂತ ಕುಮಾರ್-ಆಯುಕ್ತರು, ಹಿಂದುಳಿದ ವರ್ಗಗಳ ಇಲಾಖೆ
ಜಾಫರ್-ಸಾರ್ವಜನಿಕ ಶಿಕ್ಷಣ ಇಲಾಖೆ, ಪಿಯು ಬೋರ್ಡ್ ನಿರ್ದೇಶಕ