Asianet Suvarna News Asianet Suvarna News

ಕಾಂಗ್ರೆಸ್ ಪಂಚ ಗ್ಯಾರಂಟಿಗೆ 44,816 ಕೋಟಿ ರೂ. ವೆಚ್ಚ ಮಾಡಿದ ಸರ್ಕಾರ

ರಾಜ್ಯದಲ್ಲಿ ಪಂಚ ಗ್ಯಾರಂಟಿಗಳನ್ನು ಘೋಷಣೆ ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಒಂದು ವರ್ಷದಲ್ಲಿ ಗ್ಯಾರಂಟಿ ಯೋಜನೆಗಾಗಿ 44,816 ಕೋಟಿ ರೂ.ಗಳನ್ನು ವೆಚ್ಚ ಮಾಡಿದೆ.

Karnataka government spent Rs 44816 crore on Congress five guarantees sat
Author
First Published May 20, 2024, 8:08 PM IST

ಬೆಂಗಳೂರು (ಮೇ 20): ಕರ್ನಾಟಕದಲ್ಲಿ ಪಂಚ ಗ್ಯಾರಂಟಿಗಳನ್ನು ಘೋಷಣೆ ಮಾಡಿ ಅಭೂತಪೂರ್ವ ಬಹುಮತದ ಮೂಲಕ ಅಧಿಕಾರಕ್ಕೆ ಬಂದ  ಕಾಂಗ್ರೆಸ್ ಸರ್ಕಾರ ಈಗ ಒಂದು ವರ್ಷ ಪೂರೈಸಿದೆ. ಆದರೆ, ಪಂಚ ಗ್ಯಾರಂಟಿ ಯೋಜನೆಗಳಿಗಾಗಿ ರಾಜ್ಯ ಸರ್ಕಾರ ಬರೋಬ್ಬರಿ 44,816 ಕೋಟಿ ರೂ.ಗಳನ್ನು ವೆಚ್ಚ ಮಾಡಿದೆ. 

ರಾಜ್ಯದಲ್ಲಿ ಪ್ರತಿಯೊಂದು ವಸ್ತುಗಳ ಬೆಲೆಯೇರಿಕೆ ನಡುವೆ ತ್ತರಿಸಿದ್ದ ಜನರಿಗೆ ಕಾಂಗ್ರೆಸ್ ಗ್ಯಾರಂಟಿ ನೀಡಿದ ಬೆನ್ನಲ್ಲಿಯೇ ಮತದಾರರು ಸುಲಭವಾಗಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ಹಾಕಿದ್ದರು. ಇದರ ಫಲವಾಗಿ ಬರೋಬ್ಬರಿ 135 ಸ್ಥಾನಗಳೊಂದಿಗೆ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಚುನಾವಣಾ ಪೂರ್ವ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದಂತೆ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಮೂಲಕ ರಾಜ್ಯದ ಜನತೆಗೆ ಒಂದು ಕುಟುಂಬಕ್ಕೆ ವಾರ್ಷಿಕ ಕನಿಷ್ಠ 30ರಿಂದ 40 ಸಾವಿರ ರೂ. ಹಣವನ್ನು ಪಾವತಿ ಮಾಡುತ್ತಿರುವುದಾಗಿ ಕಾಂಗ್ರೆಸ್ ಸರ್ಕಾರ ಹೇಳಿದೆ.

ಕರ್ನಾಟಕ ಸರ್ಕಾರದ ಹೊರ ಗುತ್ತಿಗೆ ಉದ್ಯೋಗಕ್ಕೂ ಮೀಸಲಾತಿ ಅನ್ವಯ; ಮಹಿಳೆಯರಿಗೆ ಬಂಪರ್ ಆಫರ್

ಕಾಂಗ್ರೆಸ್ ಸರ್ಕಾರದಿಂದ ಪಂಚ ಗ್ಯಾರಂಟಿಗಳಿಗೆ ವಾರ್ಷಿಕ 56 ಸಾವಿರ ಕೋಟಿ ರೂ. ಖರ್ಚಾಗಲಿದೆ ಎಂದು ಮೊದಲೇ ಅಂದಾಜಿಸಲಾಗಿತ್ತು. ಆದರೆ, ಪಂಚ ಗ್ಯಾರಂಟಿಗಳನ್ನು ಜಾರಿಗೊಳಿಸುವ ಅವಧಿ ವಿಭಿನ್ನವಾಗಿದ್ದರಿಂದ ಕೆಲವು ಯೋಜನೆಗಳು 6 ತಿಂಗಳು ಸಿಕ್ಕರೆ, ಇನ್ನು ಕೆಲವು ಯೋಜನೆಗಳ ಲಾಭ ಸಿಕ್ಕು 11 ತಿಂಗಳು ಕಳೆದಿವೆ. ಹೀಗಾಗಿ, ಗ್ಯಾರಂಟಿ ಯೋಜನೆಯ ವೆಚ್ಚದ ಲೆಕ್ಕ 56 ಸಾವಿರ ಕೋಟಿ ರೂ. ಬದಲಾಗಿ 44 ಸಾವಿರ ಕೋಟಿ ರೂ.ಗೆ ಇಳಿಕೆಯಾಗಿದೆ. ಈಗ ಯಾವ ಯೋಜನೆಗಳಿಗೆ ಎಷ್ಟು ಹಣ ವೆಚ್ಚವಾಗಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ...

ಒಟ್ಟು 44,816 ಕೋಟಿ ರೂ.ನಲ್ಲಿ ಗ್ಯಾರಂಟಿವಾರು ಹಂಚಿಕೆಯಾದ ವೆಚ್ಚದ ವಿವರ:

  • ಗೃಹಲಕ್ಷ್ಮಿ -  23,098 ಕೋಟಿ ರೂ. ವೆಚ್ಚ
  • ಗೃಹಜ್ಯೋತಿ -  10,207 ಕೋಟಿ ರೂ. ವೆಚ್ಚ 
  • ಶಕ್ತಿ ಯೋಜನೆ - 4, 054 ಕೋಟಿ ರೂ. ವೆಚ್ಚ (211.5 ಕೋಟಿ ಮಹಿಳೆಯರು‌ ಸರ್ಕಾರಿ ‌ಬಸ್‌ಗಳಲ್ಲಿ‌ ಸಂಚರಿಸಿದ್ದಾರೆ)
  • ಯುವನಿಧಿ - 93 ಕೋಟಿ ರೂಪಾಯಿ ವೆಚ್ಚ 
  • ಅನ್ನಭಾಗ್ಯ -  7,364 ಕೋಟಿ ರೂ. ವೆಚ್ಚ

ಗೃಹ ಸಚಿವರ ತವರಲ್ಲಿ ಕಳ್ಳರಿಗೆ ವಿಶೇಷ ನೌಕರಿ; ಕಳ್ಳತನ ಉದ್ಯೋಗಕ್ಕೆ ಮಾಸಿಕ 20 ಸಾವಿರ ರೂ. ಸಂಬಳ

ಗ್ಯಾರಂಟಿ ಯೋಜನೆ ಫಲಾನುಭವಿಗಳ ವಿವರ:
ಶಕ್ತಿ ಯೋಜನೆ- 211.5 ಕೋಟಿ ಮಹಿಳೆಯರು‌ ಸರ್ಕಾರಿ ‌ಬಸ್‌ಗಳಲ್ಲಿ‌ ಉಚಿತವಾಗಿ ಸಂಚರಿಸಿದ್ದಾರೆ
ಅನ್ನ ಭಾಗ್ಯ ಯೋಜನೆ- 4.10 ಕೋಟಿ ಫಲಾನುಭವಗಳು
ಗೃಹ ಜ್ಯೋತಿ ಯೋಜನೆ - 1.6 ಕೋಟಿ ಜನರಿಗೆ ಉಚಿತ ವಿದ್ಯುತ್
ಗೃಹ ಲಕ್ಷ್ಮೀ ಯೋಜನೆ - 1.20 ಕೋಟಿ ಮನೆ ಯಜಮಾನಿಯಾರಿಗೆ ತಲಾ 2000 ರೂ. ಹಣ ವರ್ಗಾವಣೆ
ಯುವ ನಿಧಿ ಯೋಜನೆ - 8 ಲಕ್ಷ ವಿದ್ಯಾರ್ಥಿಗಳಿಗೆ ನಿರುದ್ಯೋಗ ಭತ್ಯೆ

Latest Videos
Follow Us:
Download App:
  • android
  • ios