ಬೆಂಗಳೂರು, (ನ.21): 2021ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಭಾನುವಾರ, ಎರಡು ಮತ್ತು ನಾಲ್ಕನೇ ಶನಿವಾರ ಅಲ್ಲದೇ ಒಟ್ಟು 20 ದಿನಗಳ ರಜೆಯನ್ನು ಘೋಷಿಸಲಾಗಿದೆ.

ಇಂದು (ಶನಿವಾರ) ಪ್ರಕಟಗೊಂಡ ರಜೆಗಳಲ್ಲಿ ಶಿಕ್ಷಣ ಇಲಾಖೆಯ ರಜೆಗಳು ಒಳಗೊಂಡಿಲ್ಲ. ಈ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರತ್ಯೇಕ ರಜೆ ಪಟ್ಟಿ ಬಿಡುಗಡೆ ಮಾಡಲಿದೆ.

ಇನ್ನು 2021ರಲ್ಲಿ ರಾಜ್ಯ ಸರಕಾರಿ ನೌಕರರಿಗೆ 19 ದಿನಗಳ ಪರಿಮಿತ ರಜೆಗಳೂ ಇವೆ. ಅವುಗಳ ಪಟ್ಟಿಯನ್ನೂ ರಾಜ್ಯ ಸರಕಾರ ಬಿಡುಗಡೆಗೊಳಿಸಿದೆ. 

ಮಹಿಳೆಯರಿಗೆ ಮುಟ್ಟಿನ ರಜೆ ಬೇಕಾ, ಬೇಡವಾ? ಹೀಗೊಂದು ವಿಚಾರ ಮಂಥನ

ಏಪ್ರಿಲ್‌ 25 ರಂದು ಮಹಾವೀರ ಜಯಂತಿ ಹಾಗೂ ಆಗಸ್ಟ್‌ 15ರ ಸ್ವಾತಂತ್ರ್ಯ ದಿನಾಚರಣೆ ಭಾನುವಾರ ಬರಲಿದೆ. ಡಿಸೆಂಬರ್‌ 25 ರಂದು ಕ್ರಿಸ್‌ಮಸ್‌ 4ನೇ ಶನಿವಾರದಂದು ಬರಲಿದೆ. ಹೀಗಾಗಿ ಈ ದಿನಗಳಂದು ಸಾರ್ವತ್ರಿಕ ರಜೆ ಇಲ್ಲ.

ಸೆಪ್ಟೆಂಬರ್‌ 9 ಶುಕ್ರವಾರದಂದು ಕೈಲ್‌ ಮುಹೂರ್ತಕ್ಕೆ, ಅಕ್ಟೋಬರ್‌ 18ರ ಸೋಮವಾರದಂದು ತುಲಾ ಸಂಕ್ರಮಣಕ್ಕೆ ಮತ್ತು ನವೆಂಬರ್‌ 20ರ ಶನಿವಾರದಂದು ಹುತ್ತರಿ ಹಬ್ಬಕ್ಕೆ ಕೊಡಗು ಜಿಲ್ಲೆಗೆ ಮಾತ್ರ ಅನ್ವಯವಾಗುವಂತೆ ಸ್ಥಳೀಯ ಸಾರ್ವತ್ರಿಕ ರಜೆಯನ್ನು ಪ್ರಕಟಿಸಲಾಗಿದೆ.

ಮುಸ್ಲಿಂ ಸಮುದಾಯದ ಹಬ್ಬಗಳು ಘೋಷಿತ ದಿನಾಂಕದ ಬದಲು ಬೇರೆ ದಿನ ಬಂದರೆ, ನಿಗದಿತ ದಿನಾಂಕದಂದು ರಜೆ ನೀಡದೆ ಹಬ್ಬದ ದಿನ ಆ ಸಮುದಾಯದ ಸರ್ಕಾರಿ ನೌಕರರಿಗೆ ರಜೆ ನೀಡಬಹುದು ಎಂದು ತಿಳಿಸಿದೆ.

ರಜೆ ಪಟ್ಟಿ ಇಂತಿದೆ
ಜನವರಿ 14 – ಗುರುವಾರ – ಉತ್ತರಾಯಣ ಪುಣ್ಯ ಕಾಲ, ಮಕರ ಸಂಕ್ರಾಂತಿ
ಜನವರಿ 26 – ಮಂಗಳವಾರ – ಗಣರಾಜ್ಯೋತ್ಸವ
ಮಾರ್ಚ್‌ 11 – ಗುರುವಾರ – ಮಹಾ ಶಿವರಾತ್ರಿ
ಏಪ್ರಿಲ್‌ 2 – ಶುಕ್ರವಾರ – ಗುಡ್‌ ಫ್ರೈಡೇ
ಏಪ್ರಿಲ್‌ 13 – ಮಂಗಳವಾರ – ಯುಗಾದಿ
ಏಪ್ರಿಲ್‌ 14 – ಬುಧವಾರ – ಡಾ. ಬಿ.ಆರ್‌. ಅಂಬೇಡ್ಕರ್‌ ಜಯಂತಿ
ಮೇ 1 – ಶನಿವಾರ – ಕಾರ್ಮಿಕ ದಿನಾಚರಣೆ
ಮೇ 14 – ಶುಕ್ರವಾರ – ಬಸವ ಜಯಂತಿ/ಅಕ್ಷಯ ತೃತೀಯ/ ಖುತುಬ್‌ ಎ ರಂಜಾನ್
ಜುಲೈ 21 – ಬುಧವಾರ – ಬಕ್ರೀದ್
ಆಗಸ್ಟ್‌ 20 – ಶುಕ್ರವಾರ – ಮೊಹರಂ ಕಡೇ ದಿನ
ಸೆಪ್ಟೆಂಬರ್‌ 10 – ಶುಕ್ರವಾರ – ವರ ಸಿದ್ಧಿವಿನಾಯಕ ವ್ರತ
ಅಕ್ಟೋಬರ್‌ 2 – ಶನಿವಾರ – ಗಾಂಧಿ ಜಯಂತಿ
ಅಕ್ಟೋಬರ್ ‌6 – ಬುಧವಾರ – ಮಹಾಲಯ ಅಮವಾಸ್ಯೆ
ಅಕ್ಟೋಬರ್‌ 14 – ಗುರುವಾರ – ಮಹಾ ನವಮಿ, ಆಯುಧ ಪೂಜೆ
ಅಕ್ಟೋಬರ್‌ 15 – ಶುಕ್ರವಾರ – ವಿಜಯ ದಶಮಿ
ಅಕ್ಟೋಬರ್‌ 20 – ಬುಧವಾರ – ಮಹರ್ಷಿ ವಾಲ್ಮೀಕಿ ಜಯಂತಿ, ಈದ್‌ ಮಿಲಾದ್‌
ನವೆಂಬರ್‌ 1 – ಸೋಮವಾರ – ಕನ್ನಡ ರಾಜ್ಯೋತ್ಸವ
ನವೆಂಬರ್‌ 3 – ಬುಧವಾರ – ನರಕ ಚತುರ್ದಶಿ
ನವೆಂಬರ್‌ 5 – ಶುಕ್ರವಾರ – ಬಲಿ ಪಾಡ್ಯಮಿ, ದೀಪಾವಳಿ
ನವೆಂಬರ್‌ 22 – ಸೊಮವಾರ – ಕನಕದಾಸ ಜಯಂತಿ