Asianet Suvarna News Asianet Suvarna News

ಎಣ್ಣೆ ಪ್ರಿಯರಿಗೆ ಸಂತಸದ ಸುದ್ದಿ, ಸೆ.1ರಿಂದ ಮದ್ಯದ ದರ ಇಳಿಸಿದ ಕರ್ನಾಟಕ ಸರ್ಕಾರ!

ಕರ್ನಾಟಕದಲ್ಲಿ ಸೆಪ್ಟೆಂಬರ್ 1 ರಿಂದ ದುಬಾರಿ ಮದ್ಯದ ಬೆಲೆ ಇಳಿಕೆಯಾಗಲಿದೆ. ನೆರೆಹೊರೆಯ ರಾಜ್ಯಗಳಲ್ಲಿ ಕಡಿಮೆ ದರದಲ್ಲಿ ಮದ್ಯ ಲಭ್ಯವಿದ್ದ ಕಾರಣ, ಗಡಿ ಜಿಲ್ಲೆಗಳಲ್ಲಿ ಮದ್ಯ ಮಾರಾಟ ಕುಸಿದು ರಾಜ್ಯ ಸರ್ಕಾರಕ್ಕೆ ನಷ್ಟವಾಗುತ್ತಿತ್ತು.

Karnataka government reduced the price of Premium Liquor Brands gow
Author
First Published Aug 22, 2024, 3:30 PM IST | Last Updated Aug 22, 2024, 3:31 PM IST

ಬೆಂಗಳೂರು (ಆ.22): ನೆರೆಹೊರೆಯ ರಾಜ್ಯಗಳ ಮದ್ಯ ಮಾರಾಟ ದರವನ್ನು ಪರಿಗಣಿಸಿ ಕರ್ನಾಟಕದಲ್ಲೂ ಮದ್ಯದ ದರ ಪರಿಷ್ಕರಣೆಗೆ ಮುಂದಾಗಿದ್ದ ರಾಜ್ಯ ಸರ್ಕಾರ ಸದ್ಯಕ್ಕೆ ದರ ಹೆಚ್ಚಳವನ್ನು ತಡೆಹಿಡಿದಿತ್ತು. ಆದರೆ ಇದೀಗ ಕೊನೆಗೂ ಎಣ್ಣೆ ಪ್ರಿಯರಿಗೆ ಗುಡ್ ನ್ಯೂಸ್ ಕೊಟ್ಟ ರಾಜ್ಯ   ಸರ್ಕಾರ ರಾಜ್ಯದಲ್ಲಿ ಸೆಪ್ಟೆಂಬರ್ 1 ರಿಂದ ದುಬಾರಿ ಮದ್ಯವನ್ನು ಅಗ್ಗದ ದರದಲ್ಲಿ  ನೀಡಲು ಚಿಂತನೆ ನಡೆಸಿದೆ.

ಅಬಕಾರಿ ಆದಾಯ ಹೆಚ್ಚಿಸಲು ಮದ್ಯದ ದರ ಇಳಿಕೆಗೆ ರಾಜ್ಯ ಸರ್ಕಾರ ಅಸ್ತು ಎಂದಿದೆ. ಸೆಪ್ಟೆಂಬರ್ 1 ರಿಂದ ಅನ್ವಯವಾಗುವಂತೆ ರಾಜ್ಯದಲ್ಲಿ ಮದ್ಯ ದರ ಇಳಿಕೆಯಾಗಲಿದೆ. ಮದ್ಯ ದರ ಇಳಿಕೆ ಮಾಡುವಂತೆ ಅಬಕಾರಿ ಇಲಾಖೆಗೆ ಸಿಎಂ ಸೂಚನೆ ನೀಡಿದೆ. ಜುಲೈ1 ರಿಂದ ಮದ್ಯ ದರ ಇಳಿಕೆಗೆ  ಅಬಕಾರಿ ಇಲಾಖೆ ಮುಂದಾಗಿತ್ತು. ಆದ್ರೆ ಮದ್ಯ ಉತ್ಪಾದಕರು ಹಾಗೂ ಅಬಕಾರಿ ಇಲಾಖೆ ನಡುವಿನ ಸಂಘರ್ಷದಿಂದ ದರ ಇಳಿಕೆ ಮಾಡಿರಲಿಲ್ಲ. ಇದೀಗ ಮದ್ಯ ದರ ಇಳಿಕೆಗೆ ಅನುಮತಿ ಸಿಕ್ಕಿದೆ.

ಗೌರಿ ಲಂಕೇಶ್ ಹತ್ಯೆ: ಮೋಹನ್ ನಾಯಕ್ ಜಾಮೀನು ರದ್ದತಿಗೆ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿ ವಜಾ

ನೆರೆಹೊರೆಯ ರಾಜ್ಯಕ್ಕಿಂತ ಕರ್ನಾಟಕ ರಾಜ್ಯದಲ್ಲಿ ಮದ್ಯ ರೇಟ್ ಹೆಚ್ಚಿದೆ. ಹೀಗಾಗಿ ಗಡಿಭಾಗದ ಜನ ಅನ್ಯ ರಾಜ್ಯಕ್ಕೆ ತೆರಳಿ ಮದ್ಯ ಖರೀದಿ ಮಾಡುತ್ತಿದ್ದರು. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಕೋಟಿ ಕೋಟಿ ನಷ್ಟವಾಗುತ್ತಿತ್ತು. ಈ ನಷ್ಟವನ್ನು ತಪ್ಪಿಸಲು ಮದ್ಯ  ದರ ಇಳಿಕೆಗೆ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದೆ.

ಹೀಗಾಗಿ 16 ಸ್ಲ್ಯಾಬ್ಗಳ ದರ ಇಳಿಕೆಗೆ‌ ಅಬಕಾರಿ ಇಲಾಖೆ ಮುಂದಾಗಿದ್ದು, ಸೆಪ್ಟೆಂಬರ್ 1 ರಿಂದ ರಾಜ್ಯದಲ್ಲಿ ದುಬಾರಿ ಮದ್ಯ ಕಡಿಮೆ ಬೆಲೆಗೆ ಸಿಗಲಿದೆ. ದುಬಾರಿ ಬೆಲೆಯ ಬ್ರಾಂದಿ,ವಿಸ್ಕಿ ಜಿನ್,ರಮ್ ಆಗಸ್ಟ್ ರಿಂದ ಅಗ್ಗವಾಗಲಿದೆ. ಪ್ರತಿ ಬ್ರ್ಯಾಂಡ್ ಮದ್ಯದ ಪರಿಷ್ಕೃತ ದರ ಪಟ್ಟಿ ನಾಳೆ ಅಥವಾ ನಾಡಿದ್ದು ಬಿಡುಗಡೆಯಾಗುವ ಸಂಭವವಿದೆ.

3 ಲಕ್ಷಕ್ಕೂ ಹೆಚ್ಚು ಕೋಟ್ಯಾಧಿಪತಿಗಳು ವಾಸಿಸುವ ವಿಶ್ವದ ಅತ್ಯಂತ ಶ್ರೀಮಂತ ನಗರವಿದು!

ನೆರೆಹೊರೆಯ ರಾಜ್ಯಗಳ ಮದ್ಯ ಮಾರಾಟ ದರವನ್ನು ಪರಿಗಣಿಸಿ ಕರ್ನಾಟಕದಲ್ಲೂ ಮದ್ಯದ ದರ ಪರಿಷ್ಕರಣೆ ಮಾಡಲಾಗುವುದು ಎಂದು ಮುಖ್ಯಮಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಘೋಷಿಸಿದ್ದರು. ಬಳಿಕ ಜುಲೈನಿಂದಲೇ ದರ ಹೆಚ್ಚಳ ಆಗಬೇಕಿತ್ತಾದರೂ ಸಿದ್ದರಾಮಯ್ಯ ಅವರ ಸೂಚನೆಯ ಮೇರೆಗೆ ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿತ್ತು. ಆ.1ರಿಂದ ಮದ್ಯದ ದರ ಹೆಚ್ಚಳ ಆಗಬಹುದು ಎಂದು ನಿರೀಕ್ಷಿಸಲಾಗಿತ್ತಾದರೂ ಸರ್ಕಾರದಿಂದ ಯಾವುದೇ ಸೂಚನೆ ಅಬಕಾರಿ ಇಲಾಖೆಗೆ ಬಂದಿರಲಿಲ್ಲ.

ಆದರೆ ಈಗ ಕಡಿಮೆ ಬೆಲೆ ಮದ್ಯಗಳ ಬೆಲೆಯ ಬಗ್ಗೆ ತಿಳಿಸಿಲ್ಲ. ಆದರೆ ದುಬಾರಿ ಮದ್ಯದ ಬೆಲೆಯನ್ನು ಸ್ವಲ್ಪ ಕಡಿಮೆ ಮಾಡಲಾಗುತ್ತಿದ್ದು, ಸರ್ಕಾರದ ಬೊಕ್ಕಸಕ್ಕೆ ಪ್ರತಿ ತಿಂಗಳೂ ಸುಮಾರು ಮೂರು ಸಾವಿರ ಕೋಟಿ ರು. ಅಧಿಕ ರಾಜಸ್ವ ಸಂಗ್ರಹವಾಗಲಿದೆ ಎಂದು ತಿಳಿದುಬಂದಿದೆ. 

Latest Videos
Follow Us:
Download App:
  • android
  • ios