ಹೊಸ ಇನೋವಾ ಕಾರ್‌ಗಳಲ್ಲಿ ಸಚಿವರ ದರ್ಬಾರು, ಬಡ ರೈತನ ಹೊಟ್ಟೆ ಮೇಲಿನ ತಣ್ಣೀರು ಬಟ್ಟೆ ನೋಡೋರ‍್ಯಾರು?
ಒಂದೆಡೆ ರಾಜ್ಯದಲ್ಲಿ ಭೀಕರ ಬರಗಾಲ ಎದ್ದಿದೆ. ರಾಜಧಾನಿ ಬೆಂಗಳೂರಿಗೆ ಮುಂದಿನ ಬೇಸಿಗೆಯಲ್ಲಿ ನೀರು ಇರತ್ತೋ ಇಲ್ವೋ ಎನ್ನುವ ಅನುಮಾನಗಳಿವೆ. ಅಭಿವೃದ್ಧಿ ಯೋಜನೆಗಳಿಗೆ ಹಣಕಾಸಿನ ಕೊರತೆ ಇದೆ. ಇವೆಲ್ಲ ಸಮಸ್ಯೆಗಳಿದ್ದರೂ, ಸಚಿವರಿಗೆ 33 ಹೊಸ ಇನೋವಾ ಕಾರುಗಳು ಸರ್ಕಾರ ಖರೀದಿ ಮಾಡಿದೆ.

ಬೆಂಗಳೂರು (ಅ.19): ಭೀಕರ ಬರಗಾಲ ರಾಜ್ಯದಲ್ಲಿ ತಾಂಡವವಾಡುತ್ತಿದೆ. ಹೆಚ್ಚಿನ ಜಿಲ್ಲೆಗಳಲ್ಲಿ ನಿರೀಕ್ಷಿತ ಮಳೆಯಾಗಿಲ್ಲ. ಇನ್ನು ಅಭಿವೃದ್ಧಿ ಕೆಲಸಗಳೆಲ್ಲಾ ಅನಿರ್ಧಾಷ್ಟವಧಿಗೆ ಬಂದ್ ಆಗಿದೆ. ಕಾರಣ ಹಣವಿಲ್ಲ. ಲೋಕೋಪಯೋಗಿ, ಜಲಸಂಪನ್ಮೂಲ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಘೋಷಿತ ಕಾರ್ಯಗಳಿಗೆ ಸರ್ಕಾರ ಹೇಗೆ ಹಣ ಹೊಂದಿಸಲಿದೆ ಅನ್ನೋದು ಜನರ ಚಿಂತೆಯಾಗಿದೆ. ಆದರೆ, ರಾಜ್ಯ ಸರ್ಕಾರ ಮಾತ್ರ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ, ತನ್ನ ಸಚಿವರಿಗಾಗಿ ಭರ್ಜರಿ ಹೊಸ ಇನೋವಾ ಕಾರುಗಳನ್ನು ಉಡುಗೊರೆಯಾಗಿ ನೀಡಿದೆ. ಬರಗಾಲವಿದೆ ಅನುತ್ಪಾದಕ ವೆಚ್ಚ ಕಡಿತ ಎನ್ನುತ್ತಿರುವ ಸರ್ಕಾರ, ಇನ್ನೊಂದೆಡೆ ತನ್ನ ಸಚಿವರಿಗೆ ಹೊಸ ಇನೋವಾ ಹೈಬ್ರೀಡ್ ಕಾರುಗಳನ್ನು ಖರೀದಿಸಿ ಅದನ್ನು ವಿಧಾನಸೌಧದ ಮುಂದೆ ಸಾಲಾಗಿ ಇರಿಸಿರುವ ವಿಡಿಯೋ ವೈರಲ್ ಆಗಿದೆ. ಹೌದು, ರಾಜ್ಯದಲ್ಲಿ ಭೀಕರ ಬರಗಾಲವಿದ್ದರೂ, ಸಚಿವರಿಗಾಗಿ ಹೊಸ ಕಾರುಗಳು ರಸ್ತೆಗೆ ಇಳಿದಿವೆ. 33 ಸಚಿವರಿಗೆ ಇನೋವಾ ಹೈಬ್ರೀಡ್ ಕಾರುಗಳನ್ನು ರಾಜ್ಯ ಸರ್ಕಾರ ಖರೀದಿ ಮಾಡಿದೆ. ಒಂದೆಡೆ ಬರಗಾಲದ ಕಾರಣಕ್ಕೆ ಅನುತ್ಪಾದಕ ವೆಚ್ಚ ಕಡಿತ ಮಾಡಬೇಕು ಎನ್ನುತ್ತಿರುವ ಸರ್ಕಾರದಿಂದಲೇ ಕಾರು ಖರೀದಿ ಮಾಡಲಾಗಿದೆ. ಹಾಗಾಗಿ ಈ ಅನುತ್ಪಾದಕ ವೆಚ್ಚ ಕಡಿತ ಅನ್ನೋದು ಜನಸಾಮಾನ್ಯರ ವಿಚಾರಗಳಿಗೆ ಮಾತ್ರವೇ ಎನ್ನುವಂತಾಗಿದೆ.
ಬರೋಬ್ಬರಿ 9 ಕೋಟಿ 90 ಲಕ್ಷ ರೂ ವೆಚ್ಚದಲ್ಲಿ 3 ಇನೋವಾ ಹೈಬ್ರೀಡ್ ಕಾರುಗಳನ್ನು ರಾಜ್ಯ ಸರ್ಕಾರ ಖರೀದಿ ಮಾಡಿದೆ. ಅಗಸ್ಟ್ ತಿಂಗಳ 17 ರಂದೇ 33 ಕಾರು ಇನ್ನೋವಾ ಕಾರು ಖರೀದಿಗಾಗಿ ಸರ್ಕಾರ ತನ್ನ ಖಜಾನೆಯಿಂದ ಹಣ ಬಿಡುಗಡೆ ಮಾಡಿತ್ತು. ಇದರಿಂದಾಗಿ ಬರಗಾಲ ಇದ್ದರೂ, ಸಚಿವರ ಕಾರುಬಾರಿಗೇನು ಕೊರತೆಯಿಲ್ಲ ಎಂದು ಜನರು ಮಾತನಾಡಿಕೊಳ್ಳುವಂತಾಗಿದೆ.
ದಸರಾ ಆರಂಭವಾಗ್ತಿದ್ದಂತೆ ಎಲ್ಲಾ ಸಚಿವರ ನಿವಾಸಕ್ಕೆ ಹೊಸ ಕಾರುಗಳು ಬಂದು ನಿಂತಿದೆ. ಪೂಜೆ ಪುನಸ್ಕಾರದ ಬಳಿಕ ಹೊಸ ಕಾರಿನಲ್ಲಿ ಸಚಿವರುಗಳು ಓಡಾಟ ಶುರು ಮಾಡಿದ್ದಾರೆ.
ಫುಟ್ ಪಾತ್ ಮೇಲೆ ಕಾರು ಹತ್ತಿಸಿ ಹಿಟ್ ಆಂಡ್ ರನ್‌ಗೆ ಯುವತಿ ಬಲಿ: ಭಯಾನಕ ವಿಡಿಯೋ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ
ಶಕ್ತಿಕೇಂದ್ರ ವಿಧಾನಸೌಧದಲ್ಲಿ ಸಚಿವರ ಕಾರುಗಳ ಪರೇಡ್ ಮುಂದುವರಿದಿದೆ. ಅಭಿವೃದ್ಧಿ ವಿಚಾರಕ್ಕೆ ಅನುದಾನದ ಕೊರತೆ ಅನ್ನೋ ಸರ್ಕಾರದಿಂದ ಕಾರು ಖರೀದಿಗೆ ಕೋಟಿ ಕೋಟಿ ಹಣ ವಿನಿಯೋಗ ಮಾಡಿದೆ.
ಹಿಂದೂ ಆಚರಣೆಗಳ ದ್ವೇಷಕ್ಕೆ ಒಂದಾದ ಸಿದ್ಧರಾಮಯ್ಯ-ಸ್ಟ್ಯಾಲಿನ್, ಆಯುಧಪೂಜೆಯೇ ಟಾರ್ಗೆಟ್!