Asianet Suvarna News Asianet Suvarna News

ಫುಟ್ ಪಾತ್ ಮೇಲೆ ಕಾರು ಹತ್ತಿಸಿ ಹಿಟ್ ಆಂಡ್‌ ರನ್‌ಗೆ ಯುವತಿ ಬಲಿ: ಭಯಾನಕ ವಿಡಿಯೋ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ

ಫುಟ್ ಪಾತ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದ ಐದು ಮಂದಿಗೆ ಕಾರು ಢಿಕ್ಕಿಯಾಗಿದ್ದು, ಓರ್ವ ಯುವತಿ ದಾರುಣವಾಗಿ ಮೃತಪಟ್ಟು ನಾಲ್ವರು ಯುವತಿಯರಿಗೆ ಗಾಯಗಳಾಗಿದೆ. ಅಪಘಾತದಲ್ಲಿ ರೂಪಶ್ರೀ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. 

23 Year Old Young Lady dies Due  to Hit and Run Case in Mangaluru grg
Author
First Published Oct 18, 2023, 10:11 PM IST

ಮಂಗಳೂರು(ಅ.18):  ಫುಟ್ ಪಾತ್ ಮೇಲೆ ಕಾರು ಹತ್ತಿಸಿ ಹಿಟ್ ಆಂಡ್‌ ರನ್‌ಗೆ ಯುವತಿಯೊಬ್ಬಳು ಬಲಿಯಾಗಿದ ಘಟನೆ ಮಂಗಳೂರು ನಗರದ ಲೇಡಿಹಿಲ್ ಬಳಿ ಇಂದು(ಬುಧವಾರ) ನಡೆದಿದೆ. 

ಫುಟ್ ಪಾತ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದ ಐದು ಮಂದಿಗೆ ಕಾರು ಢಿಕ್ಕಿಯಾಗಿದ್ದು, ಓರ್ವ ಯುವತಿ ದಾರುಣವಾಗಿ ಮೃತಪಟ್ಟು ನಾಲ್ವರು ಯುವತಿಯರಿಗೆ ಗಾಯಗಳಾಗಿದೆ. ಅಪಘಾತದಲ್ಲಿ ರೂಪಶ್ರೀ (23) ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಸುರತ್ಕಲ್ ನ ರೂಪಶ್ರೀ ಕುದ್ರೋಳಿ ದೇವಸ್ಥಾನಕ್ಕೆ ತೆರಳಿ ವಾಪಸಾಗುತ್ತಿದ್ದರು.‌ ಜೊತೆಯಿದ್ದ ಸ್ವಾತಿ (26), ಹಿತ್ನವಿ (16), ಕೃತಿಕಾ(16) ಮತ್ತು ಯತಿಕಾ(12) ಗೆ ಗಂಭೀರ ಗಾಯಗಳಾಗಿದೆ. 

Breaking : ಕೆಎಸ್‌ಆರ್‌ಟಿಸಿ ಬಸ್‌ ಟಾಟಾ ಸುಮೋ ಡಿಕ್ಕಿ, ಐವರ ದುರ್ಮರಣ: ಮಠಕ್ಕೆ ಹೊರಟವರು ಮಸಣ ಸೇರಿದರು!

ಐದೂ ಮಂದಿ ಲೇಡಿಹಿಲ್ ನಿಂದ ಮಣ್ಣಗುಡ್ಡ ಜಂಕ್ಷನ್ ಕಡೆಗೆ ಫುಟ್‌ಪಾತ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದರು.‌ ಅದೇ ವೇಳೆ ಮಣ್ಣಗುಡ್ಡಯಿಂದ ಲೇಡಿಹಿಲ್ ಕಡೆಗೆ ಚಲಾಯಿಸಿಕೊಂಡು ಬಂದ ಕಾರು ಚಾಲಕ ಕಮಲೇಶ್ ಬಲದೇವ್ ಎಂಬಾತ ಡಿಕ್ಕಿ ಹೊಡೆದು ಪರಾರಿಯಾಗಿದ್ದಾನೆ. ಬಳಿಕ ಸ್ವಲ್ಪ ದೂರ ಕಾರನ್ನು ನಿಲ್ಲಿಸಿ ಮನೆಗೆ ಹೋಗಿ ಟ್ರಾಫಿಕ್ ವೆಸ್ಟ್ ಪೊಲೀಸರಿಗೆ ಶರಣಾಗಿದ್ದಾನೆ. ಬೆಚ್ಚಿ ಬೀಳಿಸುವ ದೃಶ್ಯಗಳು ಸಿಸಿಟಿವಿ ಕ್ಯಾಮಾರಾದಲ್ಲಿ ಸೆರೆ ಯಾಗಿದೆ. ಹುಂಡೈ ಇಯೋನ್ ಗಾಡಿ ಸಂಖ್ಯೆ KA 19 MD 5676 ನೋಂದಣಿ ಹೊಂದಿದ್ದ ಕಾರು ಇದಾಗಿದ್ದು, ಆರೋಪಿ ಚಾಲಕ ರಿಯಲ್ ಎಸ್ಟೇಟ್ ಏಜೆಂಟ್ ಎಂದು ತಿಳಿದು ಬಂದಿದೆ.

Follow Us:
Download App:
  • android
  • ios