Asianet Suvarna News Asianet Suvarna News

ಆಕ್ಸಿಜನ್‌ ಉತ್ಪಾದನೆ ಕಡಿತ: ಜಿಂದಾಲ್‌ಗೆ ಸರ್ಕಾರ ನೋಟಿಸ್‌

* ನಿತ್ಯ 45 ಮೆಟ್ರಿಕ್‌ ಟನ್‌ ಪೂರೈಸಲು ಸೂಚನೆ
* ಮೇ 31ಕ್ಕೆ 17, ಜೂ.1ಕ್ಕೆ 16 ಮೆಟ್ರಿಕ್‌ ಟನ್‌ ಪೂರೈಕೆ
* ಆಕ್ಸಿಜನ್‌ ಪೂರೈಸುವಂತೆ ಕೇಂದ್ರ ಸರ್ಕಾರ ಸೂಚನೆ
 

Karnataka Government Notice due to Jindal for Reduction of Oxygen Production grg
Author
Bengaluru, First Published Jun 2, 2021, 8:43 AM IST

ಬೆಂಗಳೂರು(ಜೂ.02): ಸರ್ಕಾರ ನಿಗದಿಪಡಿಸಿದಷ್ಟು ಲಿಕ್ವಿಡ್‌ ಮೆಡಿಕಲ್‌ ಆಕ್ಸಿಜನ್‌ ಪೂರೈಸದ ಹಿನ್ನೆಲೆಯಲ್ಲಿ ಜೆಎಸ್‌ಡಬ್ಲ್ಯೂ ಸ್ಟೀಲ್‌ ಕಂಪನಿಗೆ (ಜಿಂದಾಲ್‌) ರಾಜ್ಯ ಸರ್ಕಾರ ಮಂಗಳವಾರ ನೋಟಿಸ್‌ ಜಾರಿಗೊಳಿಸಿದೆ.

ನೋಟಿಸ್‌ ಜಾರಿ ಮಾಡಿರುವ ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ) ಪ್ರಧಾನ ಕಾರ್ಯದರ್ಶಿ ಎನ್‌.ಮಂಜುನಾಥ್‌ ಪ್ರಸಾದ್‌ ಅವರು, ನೋಟಿಸ್‌ ನೀಡಿದ 24 ಗಂಟೆಯಲ್ಲಿ ಸರ್ಕಾರ ನಿಗದಿಪಡಿಸಿರುವಷ್ಟು ಪ್ರಮಾಣದಲ್ಲಿ ಆಕ್ಸಿಜನ್‌ ಉತ್ಪಾದಿಸಿ ಪೂರೈಕೆಗೆ ಕ್ರಮ ವಹಿಸಬೇಕು. ಇಲ್ಲದಿದ್ದರೆ, ವಿಪತ್ತು ನಿರ್ವಹಣಾ ಕಾಯ್ದೆಯ ನಿಯಮಗಳಡಿ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಆಕ್ಸಿಜನ್‌ ಘಟಕ ಸ್ಥಾಪಿಸುವ ಆಸ್ಪತ್ರೆಗೆ ಸಿಗಲಿದೆ ಈ ಲಾಭ!

ಗಂಭೀರ ಹಾಗೂ ಮಧ್ಯಮ ಪರಿಸ್ಥಿತಿಯಲ್ಲಿರುವ ಕೋವಿಡ್‌ ಸೋಂಕಿತರಿಗೆ ಅಗತ್ಯ ಆಕ್ಸಿಜನ್‌ ಪೂರೈಕೆಗೆ ಜಿಂದಾಲ್‌ ಸೇರಿ ರಾಜ್ಯದ ಎಂಟು ಕಂಪನಿಗಳಿಗೆ ನಿತ್ಯ 830 ಮೆಟ್ರಿಕ್‌ ಟನ್‌ ಆಕ್ಸಿಜನ್‌ ಪೂರೈಸುವಂತೆ ಕೇಂದ್ರ ಸರ್ಕಾರ ಸೂಚಿಸಿದೆ. ಇದರಲ್ಲಿ ಜಿಂದಾಲ್‌ ಪಾಲು ಹೆಚ್ಚಾಗಿದೆ. ಆಕ್ಸಿಜನ್‌ ನಿರ್ವಹಣೆಯ ನೋಡೆಲ್‌ ಅಧಿಕಾರಿಗಳು ಹಲವು ಬಾರಿ ನೀಡಿದ ಸೂಚನೆ ನಡುವೆಯೂ ಕಂಪನಿ ಎಚ್ಚೆತ್ತುಕೊಂಡಿಲ್ಲ. ಜಿಂದಾಲ್‌ ನಿಗದಿತ ಪ್ರಮಾಣದಲ್ಲಿ ಆಕ್ಸಿಜನ್‌ ಪೂರೈಸದೆ ಲೋಪವೆಸಗದಿರುವ ಕಾರಣ ಆಕ್ಸಿಜನ್‌ ಕೊರತೆಯ ಸಮಸ್ಯೆಯಾಗುತ್ತಿದೆ ಎಂದು ಹೇಳಿದ್ದಾರೆ. 

ಜಿಂದಾಲ್‌ಗೆ ನಿತ್ಯ 145 ಮೆಟ್ರಿಕ್‌ ಟನ್‌ ಆಕ್ಸಿಜನ್‌ ಪೂರೈಸಲು ನಿರ್ದೇಶನ ನೀಡಿದ್ದರೂ ಪೂರೈಕೆಯಲ್ಲಿ ಕಳೆದ ಕೆಲ ದಿನಗಳಲ್ಲಿ ಕಡಿಮೆ ಮಾಡಿದೆ. ಅದರಲ್ಲೂ ಮೇ 31ರಂದು ಕೇವಲ 17 ಮೆಟ್ರಿಕ್‌ ಟನ್‌, ಜೂ.1ರಂದು 16 ಮೆಟ್ರಿಕ್‌ ಟನ್‌ ಪೂರೈಸಿದೆ.
 

Follow Us:
Download App:
  • android
  • ios