2027 Government Holidays: ರಾಜ್ಯ ಸರ್ಕಾರವು 2027ನೇ ಸಾಲಿನ ಸಾರ್ವತ್ರಿಕ ಹಾಗೂ ಪರಿಮಿತ ರಜಾ ದಿನಗಳ ಪಟ್ಟಿಯನ್ನು ಪ್ರಕಟಿಸಿದೆ. ಇದರಲ್ಲಿ ಹಬ್ಬಗಳು, ರಾಷ್ಟ್ರೀಯ ದಿನಾಚರಣೆಗಳು ಮತ್ತು ವಾರಾಂತ್ಯದಲ್ಲಿ ಬರುವ ರಜೆಗಳ ವಿವರಗಳನ್ನು ನೀಡಲಾಗಿದೆ.
ಬೆಂಗಳೂರು (ನ.22): ರಾಜ್ಯ ಸರ್ಕಾರವು 2027ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳು ಹಾಗೂ ಸರ್ಕಾರಿ ನೌಕರರ ಪರಿಮಿತ ರಜಾ ದಿನಗಳ ಪಟ್ಟಿಯನ್ನು ಶುಕ್ರವಾರ ಪ್ರಕಟಿಸಿದೆ.
2027ರ ರಜಾದಿನಗಳ ಪಟ್ಟಿ ಇಲ್ಲಿದೆ:
ಸಾರ್ವತ್ರಿಕ ರಜೆ ದಿನಗಳು: ಮಕರ ಸಂಕ್ರಾಂತಿ(ಜ.15), ಗಣರಾಜ್ಯೋತ್ಸವ ದಿನ(ಜ.26), ಮಹಾ ಶಿವರಾತ್ರಿ(ಮಾ.6), ರಂಜಾನ್(ಮಾ.10), ಗುಡ್ ಫ್ರೈಡೇ (ಮಾ.26), ಯುಗಾದಿ (ಏ.7), ಅಂಬೇಡ್ಕರ್ ಜಯಂತಿ (ಏ.14), ಕಾರ್ಮಿಕ ದಿನಾಚರಣೆ(ಮೇ 1), ಬಕ್ರಿದ್(ಮೇ 17), ಮೊಹರಂ ಕಡೆ ದಿನ (ಜೂ.16), ವರಸಿದ್ದಿ ವಿನಾಯಕ ವ್ರತ(ಸೆ.4), ಮಹಾಲಯ ಅಮವಾಸ್ಯೆ(ಸೆ.29), ಗಾಂಧಿ ಜಯಂತಿ(ಅ.2), ವಾಲ್ಮೀಕಿ ಜಯಂತಿ(ಅ.15), ನರಕ ಚತುರ್ದಶಿ(ಅ.28), ದೀಪಾವಳಿ(ಅ.30), ಕನ್ನಡ ರಾಜ್ಯೋತ್ಸವ(ನ.11) ಮತ್ತು ಕನಕದಾಸ ಜಯಂತಿ(ನ.16).
ಮಹಾವೀರ ಜಯಂತಿ(ಏ.18), ಬಸವೇಶ್ವರ ಜಯಂತಿ(ಮೇ 9), ಸ್ವಾತಂತ್ರ್ಯ ದಿನಾಚರಣೆ(ಆ.15), ಈದ್ ಮಿಲಾದ್(ಆ.15), ವಿಜಯ ದಶಮಿ(ಅ.10) ರಜೆ ದಿನವಾದ ಭಾನುವಾರ ಬರಲಿದೆ. ಆಯುಧ ಪೂಜೆ(ಅ.9), ಕ್ರಿಸ್ಮಸ್(ಡಿ.25) ರಜೆ ದಿನವಾದ ಎರಡನೇ ಶನಿವಾರ ಬರಲಿದ್ದು, ಇದನ್ನು ಸಾರ್ವತ್ರಿಕ ರಜಾದಿನಗಳ ಪಟ್ಟಿಯಲ್ಲಿ ನಮೂದಿಸಿಲ್ಲ.
ಪರಿಮಿತ ರಜಾ ದಿನಗಳು: ಹೊಸ ವರ್ಷ(ಜ.1), ಮಧ್ಯ ನವಮಿ(ಫೆ.15), ಜಮತ್ ಉಲ್ ವಿದ(ಮಾ.5), ಶ್ರೀರಾಮನವಮಿ(ಏ.15), ರಾಮಾನುಜಚಾರ್ಯ ಜಯಂತಿ(ಮೇ.10), ಶಂಕರಾಚಾರ್ಯ ಜಯಂತಿ(ಮೇ 11), ಬುದ್ಧ ಪೂರ್ಣಿಮಾ(ಮೇ 20), ವರಮಹಾಲಕ್ಷ್ಮೀ ವ್ರತ(ಆ.13), ಋಗ್ ಉಪಕರ್ಮ(ಆ.16), ಯಜುರ್ ಉಪಕರ್ಮ(ಆ.17), ಕೃಷ್ಣ ಜನ್ಮಾಷ್ಠಮಿ(ಆ.24), ಸ್ವರ್ಣಗೌರಿ ವ್ರತ(ಸೆ.3), ಕನ್ಯಾಮರಿಯಮ್ಮ ಜಯಂತಿ(ಸೆ.8), ಅನಂತಪದ್ಮನಾಭ ವ್ರತ(ಸೆ.14), ಬ್ರಹರ್ಷಿ ನಾರಾಯಣ ಗುರು ಜಯಂತಿ(ಸೆ.15), ವಿಶ್ವಕರ್ಮ ಜಯಂತಿ(ಸೆ.17), ತುಲಾ ಸಂಕ್ರಮಣ ಪುಣ್ಯ ಕಾಲ(ಅ.18), ಹುತ್ತರಿ ಹಬ್ಬ(ಡಿ.13) ಮತ್ತು ಕ್ರಿಸ್ಮಸ್ ಈವ್(ಡಿ.24).
ಷಬ್ ಎ ಬರಾತ್(ಜ.24), ಷಬ್ ಎ ಖಾದರ್(ಮಾ.7), ಹೋಳಿ ಹಬ್ಬ( ಮಾ.21), ದೇವರ ದಾಸಿಮಯ್ಯ ಜಯಂತಿ(ಏ.11), ತಿರು ಓಣಂ(ಸೆ.12), ಗುರುನಾನಕ್ ಜಯಂತಿ(ನ.14) ಸರ್ಕಾರಿ ರಜೆ ದಿನವಾದ ಭಾನುವಾರ ಬರಲಿದೆ. ಪವಿತ್ರ ಶನಿವಾರ(ಮಾ.27) ಸರ್ಕಾರಿ ರಜೆ ದಿನವಾದ ನಾಲ್ಕನೇ ಶನಿವಾರ ಬರುವುದರಿಂದ ಈ ಪಟ್ಟಿಯಲ್ಲಿ ಸೇರಿಸಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.
















