* ನೂತನ ಸಚಿವರಿಗೆ ಖಾತೆ ಹಂಚಿಕೆ ಬೆನ್ನಲ್ಲೇ ಕಾರ್ಯದರ್ಶಿಗಳ ನೇಮಕ‌* ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ನೇಮಕ‌ ಮಾಡಿದ ಸರ್ಕಾರ* ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಿಂದ ಆದೇಶ

ಬೆಂಗಳೂರು, (ಆ.07): ನೂತನ ಸಚಿವರಿಗೆ ಖಾತೆ ಹಂಚಿಕೆ ಬೆನ್ನಲ್ಲೇ ಇದೀಗ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಉಸ್ತುವಾರಿ ಕಾರ್ಯದರ್ಶಿಗಳನ್ನು ನೇಮಕ ಮಾಡಲಾಗಿದೆ.

ಈಗಾಗಲೇ ಕೋವಿಡ್ ನಿರ್ವಹಣೆ ಹಾಗೂ ಪ್ರವಾಹ ಪರಿಶೀಲನೆಗೆ ಅಂತ ಜಸಚಿವರುಗಳಿಗೆ ಜಿಲ್ಲೆಗಳನ್ನ ಹಂಚಿಕೆ ಮಾಡಲಾಗಿದೆ. ಇದೇ ಜಿಲ್ಲಾ ಉಸ್ತುವಾರಿಯಾಗಬಹುದು.

ನೂತನ ಸಚಿವರಿಗೆ ಜಿಲ್ಲೆಗಳನ್ನು ಹಂಚಿಕೆ ಮಾಡಿದ ಸಿಎಂ: ಯಾವ ಜಿಲ್ಲೆ, ಯಾರ ಹೆಗಲಿಗೆ?

ಈಗ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎನ್ ಎಸ್ ಗಾಯಿತ್ರಿದೇವಿ ಅವರು ಜಿಲ್ಲೆಗಳ ಉಸ್ತುವಾರಿ ಕಾರ್ಯದರ್ಶಿಗಳನ್ನು ನೇಮಕ ಮಾಡಿ ಇಂದು (ಶನಿವಾರ) ಆದೇಶ ಹೊರಡಿಸಿದ್ದಾರೆ.

ಅಳೆದು ತೂಗಿ ಕರ್ನಾಟಕ ಸಚಿವರಿಗೆ ಖಾತೆ ಹಂಚಿಕೆ: ಯಾರಿಗೆ ಯಾವ ಇಲಾಖೆ? ಇಲ್ಲಿದೆ ಪಟ್ಟಿ

ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳ ಮಟ್ಟದ ಇಲಾಖಾ ಮುಖ್ಯಸ್ಥರುಗಳನ್ನು, ಈ ಕೆಳಗಿನಂತೆ ಜಿಲ್ಲೆಗಳಿಗೆ ಉಸ್ತುವಾರಿ ವಹಿಸಿ ಆದೇಶಿಸಿಲಾಗಿದೆ. ಹಾಗಾದ್ರೆ ಯಾವ ಜಿಲ್ಲೆಗೆ ಯಾರು ಎನ್ನುವ ಪಟ್ಟಿ ಈ ಕೆಳಗಿನಂತಿದೆ.

ಜಿಲ್ಲಾವಾರು ಉಸ್ತುವಾರಿ ಕಾರ್ಯದರ್ಶಿಗಳ ಪಟ್ಟಿ
1. ಡಾ.ಎನ್ ಮಂಜುಳ - ಬೆಂಗಳೂರು ನಗರ
2. ಪಿ ಹೇಮಲತ - ಬೆಂಗಳೂರು ಗ್ರಾಮಾಂತರ
3. ತುಷಾರ್ ಗಿರಿನಾಥ್ - ರಾಮನಗರ
4. ಎನ್ ಮಂಜುನಾಥ್ ಪ್ರಸಾದ್ - ಚಿತ್ರದುರ್ಗ
5. ಉಮಾಮಹಾದೇವನ್ - ಕೋಲಾರ
6. ಎನ್ ಕೆ ಅತೀಕ್ - ಬೆಳಗಾವಿ
7. ಮನೋಜ್ ಕುಮಾರ್ ಮೀನಾ - ಚಿಕ್ಕಬಳ್ಳಾಪುರ
8. ಡಾ.ಎಸ್ ಸೆಲ್ವಕುಮಾರ್ - ಶಿವಮೊಗ್ಗ
9. ಎಸ್ ಆರ್ ಉಮಾ ಶಂಕರ್ - ದಾವಣಗೆರೆ
10. ಎನ್ ಜಯರಾಮ್ - ಮೈಸೂರು
11. ಡಾ.ವಿ.ರಾಮ್ ಪ್ರಸಾತ್ ಮನೋಹರ್ - ಮಂಡ್ಯ
12. ಬಿ.ಬಿ.ಕಾವೇರಿ - ಚಾಮರಾಜನಗರ
13. ನವೀನ್ ರಾಜ್ ಸಿಂಗ್ - ಹಾಸನ
14. ವಿ ಅನ್ಬುಕುಮಾರ್ - ಕೊಡಗು
15. ಸಿ ಶಿಖಾ - ಚಿಕ್ಕಮಗಳೂರು
16. ಕ್ಯಾಪ್ಟನ್ ಮಣಿವಣ್ಣನ್.ಪಿ - ಉಡುಪಿ
17. ವಿ ಪೊನ್ನುರಾಜ್ - ದಕ್ಷಿಣ ಕನ್ನಡ
18. ರಾಕೇಶ್ ಸಿಂಗ್ - ತುಮಕೂರು
19. ಮೊಹಮ್ಮದ್ ಮೊಹಿಸಿನ್ - ಗದಗ
20. ಡಾ.ರವಿಕುಮಾರ್ ಸುರ್ ಪುರ್ - ಧಾರವಾಡ
21. ಡಿ.ರಣದೀಪ್ - ವಿಜಯಪುರ
22. ಕೆಪಿ ಮೋಹನ್ ರಾಜ್ - ಉತ್ತರ ಕನ್ನಡ
23. ಶಿವಯೋಗಿ ಕಳಸದ - ಬಾಗಲಕೋಟೆ
24. ಗುಂಜನ್ ಕೃಷ್ಣ - ಕಲಬುರ್ಗಿ
25. ಮುನೀಶ್ ಮೌದ್ದಿಲ್ - ಯಾದಗಿರಿ
26. ಡಾ.ವಿಶಾಲ್ ಆರ್ - ರಾಯಚೂರು
27. ಡಾ.ರಶ್ಮಿ ವಿ ಮಹೇಶ್ - ಕೊಪ್ಪಳ
28. ಡಾ.ಎಂಎನ್ ಅಜಯ್ ನಾಗಭೂಷಣ್ - ಬಳ್ಳಾರಿ
29. ರಿಚರ್ಡ್ ವಿನ್ಸೆಂಟ್ ಡಿಸೋಜಾ - ಬೀದರ್
30. ಮನೋಜ್ ಜೈನ್ - ಹಾವೇರಿ