ಜನ್ಮದಿನಾಚರಣೆ ಹಿನ್ನೆಲೆ: ದೇವರಾಜ್ ಅರಸು ಪ್ರಶಸ್ತಿ ಘೋಷಿಸಿದ ರಾಜ್ಯ ಸರ್ಕಾರ
* ಮೂರು ವರ್ಷಗಳ ಪ್ರಶಸ್ತಿ ಘೋಷಣೆ
* ಇಂದು ಮಾಜಿ ಸಿಎಂ ಡಿ. ದೇವರಾಜ್ ಅರಸು ಜನ್ಮದಿನಾಚರಣೆ
* ನಾಡಿನ ಮೂವರು ಸಾಧಕರಿಗೆ ಪ್ರಶಸ್ತಿ
ಬೆಂಗಳೂರು(ಆ.19): ರಾಜ್ಯದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ್ ಅರಸು ಅವರ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ದೇವರಾಜು ಅರಸು ಪ್ರಶಸ್ತಿ ಘೋಷಣೆ ಮಾಡಿದೆ.
ಇಂದು(ಗುರುವಾರ) ನಗರದಲ್ಲಿ ಮಾಹಿತಿ ನೀಡಿದ ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು, ಮೂರು ವರ್ಷಗಳ ಪ್ರಶಸ್ತಿಯನ್ನ ಘೋಷಿಸಿದ್ದಾರೆ.
'ದೇವರಾಜ ಅರಸು ಶೋಷಿತ ಸಮುದಾಯಕ್ಕೆ ರಾಜಕೀಯ ಆಸರೆ ಒದಗಿಸಿದ ಮಹಾನ್ ನಾಯಕ'
* 2019-20 ನೇ ಸಾಲಿನ ದೇವರಾಜು ಅರಸು ಪ್ರಶಸ್ತಿ - ಬಸವಪ್ರಭು ಲಖನಗೌಡ ಪಾಟೀಲ್- ಅಥಣಿ, ಬೆಳಗಾವಿ ಜಿಲ್ಲೆ
* 2020-21 ನೇ ಸಾಲಿನ ದೇವರಾಜು ಅರಸು ಪ್ರಶಸ್ತಿ - ಎಸ್ ಜಿ ಸುಶೀಲಮ್ಮ- ಸುಮಂಗಲಿ ಸೇವಾಶ್ರಮ, ಬೆಂಗಳೂರು
* 2021-22 ನೇ ಸಾಲಿನ ದೇವರಾಜು ಅರಸು ಪ್ರಶಸ್ತಿ - ಕೆ ಭಾಸ್ಕರ್ ದಾಸ್ ಎಕ್ಕಾರು, ಕರ್ನಾಟಕ ಅಲೆಮಾರಿ /ಅರೆ ಅಲೆಮಾರಿ ಮತ್ತು ವಿಮುಕ್ತ ಬುಡಕಟ್ಟುಗಳ ಒಕ್ಕೂಟ ಬೆಂಗಳೂರು