Asianet Suvarna News Asianet Suvarna News

ರಾಜ್ಯದ 9 ಕಡೆ ವಾಟರ್‌ ಏರೋಡ್ರೋಮ್‌ ; ಸಚಿವ ವಿ.ಸೋಮಣ್ಣ

ರಾಜ್ಯದ 9 ಕಡೆ ವಾಟರ್‌ ಏರೋಡ್ರೋಮ್‌ ಜಾಗ ಗುರುತಿಸಲಾಗಿದೆ. ಜಲಾಶಯ, ಕರಾವಳಿಯಲ್ಲಿ ವಾಟರ್‌ ಏರೋಡ್ರೋಮ್‌ ಆರಂಭವಾಗಲಿದೆ ಎಂದು  ಸಚಿವ  ಸೋಮಣ್ಣ ಹೇಳಿದ್ದಾರೆ.

Karnataka get nine water aerodromes says Minister V Somanna gow
Author
Bengaluru, First Published Jul 14, 2022, 1:10 PM IST | Last Updated Jul 14, 2022, 1:10 PM IST

 ಬೆಂಗಳೂರು (ಜು.14): ಪ್ರವಾಸೋದ್ಯಮದ ಜತೆಗೆ ಆರ್ಥಿಕ ಪುನಶ್ಚೇತನದ ಉದ್ದೇಶದಿಂದ ರಾಜ್ಯದ 9 ಕಡೆ ವಾಟರ್‌ ಏರೋಡ್ರೋಮ್‌ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ ಎಂದು ವಸತಿ ಹಾಗೂ ಮೂಲ ಸೌಕರ್ಯ ಅಭಿವೃದ್ಧಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ. ಬುಧವಾರ ನಗರದಲ್ಲಿ ಆಯೋಜಿಸಿದ್ದ ‘ಕರ್ನಾಟಕದ ಸಮಗ್ರ ನಾಗರಿಕ ವಿಮಾನಯಾನ ನೀತಿ ನಿರೂಪಣೆ’ ಕುರಿತ ರಾಜ್ಯ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯದ ಕಾಳಿ ನದಿ, ಬೈಂದೂರು, ಮಲ್ಪೆ, ಮಂಗಳೂರು, ತುಂಗಭದ್ರಾ, ಕೆಆರ್‌ಎಸ್‌, ಲಿಂಗನಮಕ್ಕಿ, ಆಲಮಟ್ಟಿಮತ್ತು ಹಿಡಕಲ್‌ ಜಲಾಶಯಗಳಲ್ಲಿ ವಾಟರ್‌ ಏರೋಡ್ರೋಮ್ಸ್‌ ಅಭಿವೃದ್ಧಿಪಡಿಸಲು ಸಂಭಾವ್ಯ ಸ್ಥಳಗಳನ್ನಾಗಿ ಗುರುತಿಸಲಾಗಿದೆ ಎಂದರು. ಮಡಿಕೇರಿ, ಚಿಕ್ಕಮಗಳೂರು ಮತ್ತು ಹಂಪಿಯಲ್ಲಿ ಹೆಲಿಪೋರ್ಚ್‌ಗಳನ್ನು ಸ್ಥಾಪಿಸಲು ಕಾರ್ಯ ಸಾಧ್ಯತೆ ಮತ್ತು ವಿಸ್ತೃತ ಯೋಜನಾ ವರದಿ (ಡಿಪಿಆರ್‌) ತಯಾರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಚಿಕ್ಕಮಗಳೂರು, ಹರಿಹರ, ಕುಶಾಲನಗರ ಮತ್ತು ಅಥಣಿಯಲ್ಲಿ ಕಿರು ವಿಮಾನ ನಿಲ್ದಾಣ ಸ್ಥಾಪಿಸುವ ಚಿಂತನೆ ಇದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣ ರೆಡ್ಡಿ, ಕಾರ್ಯಕ್ರಮ ಮತ್ತು ಅಂಕಿ ಅಂಶ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್‌, ಮೂಲ ಸೌಲಭ್ಯ ಅಭಿವೃದ್ಧಿ, ಬಂದರುಗಳು ಮತ್ತು ಒಳನಾಡು ಸಾರಿಗೆ ಇಲಾಖೆಯ ಜಂಟಿ ಕಾರ್ಯದರ್ಶಿ ಹೆಪ್ಸಿಬಾ ರಾಣಿ ಕೊರ್ಲಪಾಟಿ, ರಾಜ್ಯ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷ ಡಾ.ಶೈಲೇಂದ್ರ ಬೆಲ್ದಾಳೆ ಮತ್ತಿತರರು ಪಾಲ್ಗೊಂಡಿದ್ದರು.

ಡಿಸೆಂಬರಲ್ಲಿ ಶಿವಮೊಗ್ಗ ಏರ್ಪೋರ್ಚ್‌ ಉದ್ಘಾಟನೆ: ಬಹು ನಿರೀಕ್ಷಿತ ಶಿವಮೊಗ್ಗ ವಿಮಾನ ನಿಲ್ದಾಣ ಈ ವರ್ಷಾಂತ್ಯದೊಳಗೆ ಲೋಕಾರ್ಪಣೆ ಆಗಲಿದೆ. ಇದಲ್ಲದೇ, ವಿಜಯಪುರ ಮತ್ತು ಹಾಸನ ಜಿಲ್ಲೆಗಳಲ್ಲಿ ವಿಮಾನ ನಿಲ್ಧಾಣಗಳ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಮುಂಬರುವ ವರ್ಷಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಸಚಿವ ವಿ. ಸೋಮಣ್ಣ ಹೇಳಿದ್ದಾರೆ.

 

 ಬೆಳಗಾವಿ ಏರ್‌ಪೋರ್ಟಲ್ಲಿ ದೇಶದ ಮೊದಲ ಸ್ಥಳೀಯ ಉತ್ಪನ್ನ ಮಳಿಗೆ

ಮಂಗ್ಳೂರು ವಿಮಾನ ನಿಲ್ದಾಣಕ್ಕೆ ಎಲೆಕ್ಟ್ರಿಕ್‌ ವಾಹನ ಸೇರ್ಪಡೆ
ಮಂಗಳೂರು: ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ 2024ರೊಳಗೆ ಕಾರ್ಬನ್‌ ಮುಕ್ತ ಹಾಗೂ 2029ರೊಳಗೆ ನೆಟ್ರೋ ಕಾರ್ಯಕ್ರಮದಡಿಯಲ್ಲಿ ವಿಮಾನ ನಿಲ್ದಾಣಕ್ಕೆ ಎರಡು ವಿದ್ಯುತ್‌ ಚಾಲಿತ ಎಸ್‌ಯುವಿ ವಾಹನÜಗಳು ಸೇರ್ಪಡೆಗೊಂಡಿದೆ.

ಈ ವಾಹನಗಳನ್ನು ಎಂಜಿನಿಯರಿಂಗ್‌, ನಿರ್ವಹಣೆ, ಭೂಕುಸಿತ ಸಂದರ್ಭಗಳÜಲ್ಲಿ ಕಾರ್ಯಾಚರಣೆ ಮುಂತಾದ ಉದ್ದೇಶಗಳಿಗೆ ಬಳಸಿಕೊಳ್ಳಲಾಗುವುದು. ಈ ಆರ್ಥಿಕ ವರ್ಷಾಂತ್ಯಕ್ಕೆ ಒಂದು ವಿದ್ಯುತ್‌ ಚಾಲಿತ ಬಸ್‌ ಅಥವಾ ಇನ್ನೊಂದು ಎಸ್‌ಯುವಿ(ಸ್ಪೋರ್ಚ್‌ ಯುಟಿಲಿಟಿ ವೆಹಿಕಲ್‌) ವಾಹನ ಹೊಂದುವ ಯೋಜನೆ ಇದೆ ಎಂದು ಪ್ರಕಟಣೆ ತಿಳಿಸಿದೆ.

Latest Videos
Follow Us:
Download App:
  • android
  • ios