Asianet Suvarna News Asianet Suvarna News

ಜಗದೀಶ್ ಶೆಟ್ಟರ್ ಬಿಜೆಪಿಗೆ ಮರುಸೇರ್ಪಡೆ ಸಂತೋಷವಾಗಿದೆ; ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ

ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿ ಪಕ್ಷಕ್ಕೆ ಮರುಸೇರ್ಪಡೆ ಆಗಿರೋದು ಸಂತೋಷ ಆಗಿದೆ. ಜಗದೀಶ್ ಶೆಟ್ಟರ್ ಸಮರ್ಥ ನಾಯಕ. ಅವರನ್ನು ಕಾಂಗ್ರೆಸ್‌ ಪಕ್ಷಕ್ಕೆ ಸೇರಿಸಿಕೊಳ್ಳುವಾಗಿನ ಉತ್ಸಾಹ ಆಮೇಲೆ ತೋರಿಸಲಿಲ್ಲ. ಪಕ್ಷಕ್ಕೆ ಸೇರಿದ ಮೇಲೆ ಅವರನ್ನು ಮಂತ್ರಿ ಮಾಡುವ ಸೌಜನ್ಯವೂ ತೋರಿಸಲಿಲ್ಲ. ಕಾಂಗ್ರೆಸ್ ಹೇಗೆ ಮೋಸ ಮಾಡುತ್ತೆ ಅನ್ನೋದಕ್ಕೆ ಇದೇ ಉದಾಹರಣೆ ಎಂದು ಕಿಡಿಕಾರಿದರು.

Karnataka former CM Jagadish shettar return to BJP issue HD Devegowda reaction at Hassan rav
Author
First Published Jan 25, 2024, 4:13 PM IST

ಹಾಸನ (ಜ.25): ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿ ಪಕ್ಷಕ್ಕೆ ಮರುಸೇರ್ಪಡೆ ಆಗಿರೋದು ಸಂತೋಷ ಆಗಿದೆ. ಜಗದೀಶ್ ಶೆಟ್ಟರ್ ಸಮರ್ಥ ನಾಯಕ. ಅವರನ್ನು ಕಾಂಗ್ರೆಸ್‌ ಪಕ್ಷಕ್ಕೆ ಸೇರಿಸಿಕೊಳ್ಳುವಾಗಿನ ಉತ್ಸಾಹ ಆಮೇಲೆ ತೋರಿಸಲಿಲ್ಲ. ಪಕ್ಷಕ್ಕೆ ಸೇರಿದ ಮೇಲೆ ಅವರನ್ನು ಮಂತ್ರಿ ಮಾಡುವ ಸೌಜನ್ಯವೂ ತೋರಿಸಲಿಲ್ಲ. ಕಾಂಗ್ರೆಸ್ ಹೇಗೆ ಮೋಸ ಮಾಡುತ್ತೆ ಅನ್ನೋದಕ್ಕೆ ಇದೇ ಉದಾಹರಣೆ ಎಂದು ಕಿಡಿಕಾರಿದರು.

ಹಾಸನದ ಆಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಓರ್ವ ಮಾಜಿ ಸಿಎಂ ಆಗಿ ರಾಜ್ಯದಲ್ಲಿ ಒಂದುಕಾಲು ವರ್ಷ ಸಮರ್ಥವಾಗಿ ಕೆಲಸ ಮಾಡಿದ್ದವರು, ವಿಪಕ್ಷ ನಾಯಕರಾಗಿದ್ದವರು, ಅಂಥವರನ್ನು ಪಕ್ಷಕ್ಕೆ ಸೇರಿಸಿಕೊಂಡು ಮಂತ್ರಿ ಮಾಡಲಿಲ್ಲ. ಹಿಂದೆ ಕಾಂಗ್ರೆಸ್ ಜೊತೆಗೆ ಮೈತ್ರಿ ಆದಾಗ ನನ್ನ ಮಗ ಸಿಎಂ ಬೇಡಾ ಎಂದೆ.ಆದರೂ ಮಾಡಿದ್ರು. ಹದಿಮೂರೇ ತಿಂಗಳಿಗೆ ಸರ್ಕಾರ ತೆಗೆದರು. ನಾನು ಪಿಎಂ ಆಗಿದ್ದಾಗ ವಾಜಪೇಯಿ ಉಳಿಸ್ತಿನಿ ಅಂದರು. ಕಾಂಗ್ರೆಸ್ ನ ದೌರ್ಬಲ್ಯ ಇದು. ಕಾಂಗ್ರೆಸ್ ಹಂತ ಹಂತವಾಗಿ ನೆಲ ಕಚ್ಚುತ್ತಿದೆ. ಲೋಕಸಭಾ ಚುನಾವಣೆ ಬಳಿಕ ಸಂಪೂರ್ಣ ನೆಲ ಕಚ್ಚಲಿದೆ ಎಂದರು.

ಜಗದೀಶ್ ಶೆಟ್ಟರ್ ಬಿಜೆಪಿ ಪಕ್ಷಕ್ಕೆ ಮರುಸೇರ್ಪಡೆ: ಡಿಸಿಎಂ ಡಿಕೆ ಶಿವಕುಮಾರ ಹೇಳಿದ್ದೇನು?

Follow Us:
Download App:
  • android
  • ios