ಮಾಜಿ ಸಿಎಂ ಕುಮಾರಸ್ವಾಮಿ ಆರೋಗ್ಯ ಚೇತರಿಕೆ, ಅಪೋಲೋದಿಂದ ಹೆಲ್ತ್ ಬುಲೆಟಿನ್ ಬಿಡುಗಡೆ

ಆರೋಗ್ಯದಲ್ಲಿಏರುಪೇರಾದ ಕಾರಣ ಇಂದು ಮುಂಜಾನೆ ಆಪೋಲೋ ಆಸ್ಪತ್ರೆ ದಾಖಲಾಗಿದ್ದ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಈ ಕುರಿತು ಅಪೋಲೋ ಆಸ್ಪತ್ರೆ ಹೆಲ್ತ್ ಬುಲೆಟಿನ್  ಬಿಡುಗಡೆ ಮಾಡಿದೆ.

Karnataka Former CM HD Kumaraswamy recovering from weakness  Bengaluru Apollo hospital release health bulletin ckm

ಬೆಂಗಳೂರು(ಆ.30) ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ.  ಆರೋಗ್ಯದಲ್ಲಿ ಕೊಂಚ ಏರುಪೇರಾದ ಕಾರಣ ಇಂದು ಮುಂಜಾನೆ ಅಪೋಲೋ ಆಸ್ಪತ್ರೆ ದಾಖಲಾಗಿರುವ ಹೆಚ್‌ಡಿ ಕುಮಾರಸ್ವಾಮಿ ಇದೀಗ  ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಹೆಚ್‌ಡಿಕೆ  ಆರೋಗ್ಯ ಕುರಿತು ಅಪೋಲೋ ಆಸ್ಪತ್ರೆ ವೈದ್ಯರು ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದಾರೆ.  ಜ್ವರ, ಸುಸ್ತು ಸೇರಿದಂತೆ ಆರೋಗ್ಯದಲ್ಲಿನ ಏರುಪೇರಾದ ಕಾರಣ ಹೆಚ್‌ಡಿ ಕುಮಾರಸ್ವಾಮಿ ಇಂದು(ಆ.30) ಬೆಳಗ್ಗೆ 3.40ಕ್ಕೆ  ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು.

ಹೆಚ್‌ಡಿ ಕುಮಾರಸ್ವಾಮಿಗೆ ತ್ವರಿತವಾಗಿ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆಗೆ ಹೆಚ್‌ಡಿಗೆ ಸ್ಪಂದಿಸಿದ್ದಾರೆ. ಹೀಗಾಗಿ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. 48 ಗಂಟೆಗಳ ಕಾಲ ಹೆಚ್‌ಡಿ ಆರೋಗ್ಯದ ಮೇಲೆ ನಿಗಾವಹಿಸಲಾಗುತ್ತದೆ. ಬಳಿಕ ಆರೋಗ್ಯದ ಚೇತರಿಕೆ ನೋಡಿ, ಬಿಡುಗಡೆ ಮಾಡಲಾಗುತ್ತದೆ ಎಂದು ಆಪೋಲೋ ಆಸ್ಪತ್ರೆ ಹೆಲ್ತ್ ಬುಲೆಟಿನ್‌ನಲ್ಲಿ ಹೇಳಿದ್ದಾರೆ.

ಎಚ್‌ಡಿಕೆ ಹೇಳಿಕೆ ಬೆನ್ನಲ್ಲೇ ನಿಖಿಲ್ 'ಡಿಫರೆಂಟ್‌' ಟ್ವೀಟ್: ಸಂಚಲನ ಹುಟ್ಟುಹಾಕಿದ ಮಾತು..!

ಇತ್ತೀಚೆಗೆ ವಿದೇಶ ಪ್ರವಾಸ ಮಾಡಿದ್ದ ಹೆಚ್‌ಡಿ ಕುಮಾರಸ್ವಾಮಿ ಬಳಿಕ ಪಕ್ಷ ಸಂಘಟನೆ ಸೇರಿದಂತೆ ಹಲವು ಕಾರ್ಯಗಳಲ್ಲಿ ಸಕ್ರಿಯರಾಗಿದ್ದರು.  ಪಕ್ಷದ ಕಾರ್ಯಕರ್ತರು, ನಾಯಕರ ಕಾರ್ಯಕ್ರಮ, ಗೃಹ ಪ್ರವೇಶ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಸತತವಾಗಿ ಪಾಲ್ಗೊಂಡಿದ್ದರು.  ಇತ್ತ ಆರೋಗ್ಯ ಕ್ಷೀಣಿಸಿದ ಕಾರಣ ಜ್ವರ ಹಾಗೂ ಸುಸ್ತು ಕಾಣಿಸಿಕೊಂಡಿದೆ. ಇಂಜು ಮುಂಜಾನೆ ಬಳಲಿಕೆ ತೀವ್ರಗೊಂಡ ಕಾರಣ ತಕ್ಷಣವೇ ಆಸ್ಪತ್ರೆ ದಾಖಲಿಸಲಾಗಿತ್ತು. 

ಆಸ್ಪತ್ರೆ ಹಿರಿಯ ವೈದ್ಯರ ತಂಡ ಕುಮಾರಸ್ವಾಮಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಸದ್ಯ ಕುಮಾರಸ್ವಾಮಿ ಚೇತರಿಸಿಕೊಳ್ಳುತ್ತಿದ್ದಾರೆ. ಮುಂದಿನ 48 ಗಂಟೆ ಕಾಲ ಹೆಚ್‌ಡಿಕೆ ಆರೋಗ್ಯದ ಮೇಲೆ ತೀವ್ರ ನಿಘಾ ವಹಿಸಲಾಗುವುದು  ಎಂದು ಆಸ್ಪತ್ರೆ ವೈದ್ಯರು ಹೇಳಿದ್ದಾರೆ.  ವೈದ್ಯರ ನಿಗಾದಲ್ಲಿರುವ ಹೆಚ್‌ಡಿ ಕುಮಾರಸ್ವಾಮಿ ಆರೋಗ್ಯವನ್ನು ಸೂಕ್ಷ್ಮವಾಗಿ ವೈದ್ಯರು ತಪಾಸಣೆ ನಡೆಸುತ್ತಿದ್ದಾರೆ.

ರಾಜೀವ್‌ಗಾಂಧಿ ಮೆಡಿಕಲ್‌ ಕಾಲೇಜು ಸ್ಥಳಾಂತರ ರಾಮನಗರಕ್ಕೆ ಅವಮಾನ: ಎಚ್‌ಡಿಕೆ ಆಕ್ರೋಶ

ಹೆಚ್‌ಡಿ ಕುಮಾರಸ್ವಾಮಿ ಭೇಟಿಗೆ ಕುಟುಂಬಸ್ಥರಿಗೆ ಮಾತ್ರ ಅವಕಾಶ ನೀಡಲಾಗಿದೆ. ಇನ್ನುಳಿದಂತೆ ಯಾವುದೇ ಶಾಸಕರು, ನಾಯಕರ ಭೇಟಿಗೆ ಅವಕಾಶ ನಿರಾಕರಿಸಲಾಗಿದೆ. ಸದ್ಯ ಕುಮಾರಸ್ವಾಮಿ ಆಪ್ತ ಸಹಾಯಕನಿಗೆ ಮಾತ್ರ ಅವಕಾಶ ನೀಡಲಾಗಿದೆ. ಇನ್ನು ದೇವೇಗೌಡರು  ಆಸ್ಪತ್ರೆ ಆಗಮಿಸುತ್ತಾರೆ ಅನ್ನೋ ವರದಿಗಳು ಹರಿದಾಡಿತ್ತು.ಇದೀಗ ದೇವೇಗೌಡರು ಆಸ್ಪತ್ರೆಗೆ ಆಗಮಿಸುತ್ತಿಲ್ಲ ಅನ್ನೋ ಮಾಹಿತಿ ಲಭ್ಯವಾಗಿದೆ. ಸಂಜೇ ವೇಳೆ ಅಪೋಲೋ ಆಸ್ಪತ್ರೆ ಮತ್ತೆ ಹೆಚ್‌ಡಿ ಕುಮಾರಸ್ವಾಮಿ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಲಿದೆ. 

ಸತತ ಪ್ರವಾಸಗಳಿಂದ ದಣದಿರುವ ಹೆಚ್‌ಡಿಕೆಗೆ  ವಿಶ್ರಾಂತಿಯ ಅಗತ್ಯವಿದೆ. ಶೀಘ್ರದಲ್ಲೇ ಹೆಚ್‌ಡಿ ಕುಮಾರಸ್ವಾಮಿ ಗುಣಮುಖರಾಗಲಿದ್ದಾರೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಅಪೋಲೋ ವೈದ್ಯರು ಹೇಳಿದ್ದಾರೆ. 

Latest Videos
Follow Us:
Download App:
  • android
  • ios